ಮುಖ್ಯರಸ್ತೆಗಳಲ್ಲಿ ಹೆಚ್ಚಿದ ಕಳ್ಳತನ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಸಿಂಧನೂರು: ಕಳೆದ ಎರಡು ತಿಂಗಳಿನಿಂದ ಸಿಂಧನೂರು ನಗರ, ಗ್ರಾಮೀಣ ಪ್ರದೇಶದಲ್ಲಿ ಕಳ್ಳತನ ಹೆಚ್ಚುತ್ತಿದ್ದಾವೆ ಎಂದು ಸಾರ್ವಜನಿಕರು ದೂರ ನೀಡಿದ್ದು ಕಂಡುಬರುತ್ತಿದ್ದಾವೆ.
ಇತ್ತೀಚಿಗೆ ನಗರದ ಪಟೇಲ್‌ವಾಡಿ, ಉಪ್ಪಾರ ವಾಡಿ ಹಾಗೂ ಪ್ರಶಾಂತನಗರದಲ್ಲಿ ಏಕದಿನದಲ್ಲಿ ೫ ಮನೆಗಳು ಕಳ್ಳತನ ಆಗಿರುವ ಪ್ರಕರಣಗಳು ಕಂಡುಬಂದಿದೆ, ಇದರ ಹಿನ್ನೆಲೆಯಲ್ಲಿ ಕಳೆದ ೨ ದಿನಗಳ ಹಿಂದೆ ಗಂಗಾವತಿ ಮುಖ್ಯರಸ್ತೆಯಲ್ಲಿ ಇರುವ ಪೂರ್ಣಿಮಾ ಫ್ಯಾಶನ್ ಲೈಫ್‌ನ ಬಟ್ಟೆ ಅಂಗಡಿಗೆ ದೊಡ್ಡ ತಂಡವೇ ಬಂದು ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿರುವುದು ಕಂಡುಬಂದಿದೆ


ಪೂರ್ಣಿಮಾ ಫ್ಯಾಶನ್ ಲೈಫ್‌ನಲ್ಲಿ ಅಂಗಡಿ ಕೀಲಿ ಮುರಿದು ಇದ್ದ ೧೮ ಸಾವಿರ ರೂಪಾಯಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ ಎಂದು ಅಂಗಡಿಯ ಮಾಲೀಕರು ತಿಳಿಸಿದ್ದಾರೆ, ಇತ್ತೀಚಿಗೆ ಪ್ರಶಾಂತನಗರದ ಮನೆಯೊಂದರಲ್ಲಿ ೫೦ ಲಕ್ಷ ರೂಪಾಯಿ ಹೆಚ್ಚಿಗೆ ಬೆಳೆಬಾಳುವ ಬಂಗಾರದ ಚಿನ್ನಗಳು ಹಾಗೂ ಹಣ ಕಳ್ಳತನ ಆಗಿರುವುದು ಪ್ರಕರಣ ತಾಲೂಕಿನಲ್ಲಿ ಕಂಡುಬಂದಿದೆ


ಬೈಕಿನಲ್ಲಿ ಇಟ್ಟ ಹಣ ದೋಚಿದ ಕಳ್ಳರು- ಕಳೆದ ೨ ದಿನಗಳ ಹಿಂದೆ ಪ್ರಗತಿ ಗ್ರಾಮೀಣ ಬ್ಯಾಂಕ್ ಹತ್ತಿರ ಗ್ರಾಹಕನೊಬ್ಬ ೨ ಲಕ್ಷ ರೂಪಾಯಿ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹತ್ತಿರದಲ್ಲಿದ್ದ ಬಟ್ಟೆ ಹೊಲಿಯೋ ಮಿಷೀನ್ ಅಂಗಡಿಗೆ ಹೋದ ಸಂದರ್ಭದಲ್ಲಿ ೩೦ ಸೆಕೆಂಡಿನಲ್ಲಿ ಬೈಕಿನಲ್ಲಿ ಇಟ್ಟಿದ್ದ ಅಂತ ಹಣ ದೋಚಿಕೊಂಡು ಇಬ್ಬರು ಹೋಗಿರುವ ದೃಶ್ಯ ಸಹ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
ದೊಡ್ಡ ದೊಡ್ಡ ವ್ಯಾಪಾರಸ್ಥರು ನಿರ್ಲಕ್ಷ್ಯ- ನಗರದಲ್ಲಿ ದೊಡ್ಡ ದೊಡ್ಡ ವ್ಯಾಪಾರಸ್ಥರು ಹಾಗೂ ಅವಶ್ಯಕತೆ ಇದ್ದವರು ಪ್ರತಿಯೊಬ್ಬರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಆದೇಶ ಮಾಡಿದರು ಇದರ ಬಗ್ಗೆ ಯಾರೂ ಕಿವಿಕೊಡದೆ ನಿರ್ಲಕ್ಷ್ಯ ವಹಿಸುತ್ತಿರುವುದು ತಾಲೂಕಿನಲ್ಲಿ ಎದ್ದು ಕಾಣುತ್ತಿದೆ

,,,, ಬಟ್ಟೆ ಅಂಗಡಿ ಕಳ್ಳತನ ಮಾಡುವುದಕ್ಕೆ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ತಿಳಿದುಬಂದಿದೆ, ಸಣ್ಣಪುಟ್ಟ ಕಳ್ಳತನ ಆಗಿದ್ದಾವೆ, ಈಗಾಗಲೇ ನಮ್ಮ ಇಲಾಖೆ ಜಾಗೃತೆಯಿಂದ ಕಾರ್ಯನಿರ್ವಹಿಸುತ್ತಿದೆ, ಅಂಗಡಿ ವ್ಯಾಪಾರಸ್ಥರು ಸಿಸಿಟಿವಿ ಕ್ಯಾಮೆರಾ ಹಾಕಿಸಿಕೊಳ್ಳಲು ಮುಂದಾಗಬೇಕು, ಇತ್ತೀಚಿಗೆ ಕಳ್ಳರನ್ನು ಹಿಡಿದಿದ್ದೇವೆ ಕೆಲವೊಂದು ಮನೆ ಕಳ್ಳತನ ಮಾಡಿರುವುದು ಒಪ್ಪಿಕೊಂಡಿರುತ್ತಾರೆ
ಡಿವೈಎಸ್ಪಿ ವೆಂಕಟಪ್ಪ ನಾಯಕ್ ಸಿಂಧನೂರು,

Leave a Comment

Your email address will not be published. Required fields are marked *

Translate »
Scroll to Top