ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದು ಇಂದಿಗೆ (ಮೇ ೨೦) ವರ್ಷವಾಯಿತು. ಆದರೆ ಸಾಧಿಸಿದ್ದು ಮಾತ್ರ ಶೂನ್ಯ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ಬಿವೈ ವಿಜಯೇಂದ್ರ ಟೀಕೆ ಮಾಡಿದ್ದಾರೆ.
“ಪೂರೈಸಿದ್ದು ವರುಷ ಮಾತ್ರ ಆದರೆ, ಸಾಧಿಸಿದ್ದು ಶೂನ್ಯ. ಖಜಾನೆ ಖಾಲಿ ಖಾಲಿ, ವಸೂಲಿ ಭಾರಿ ಭಾರಿ” ಎಂದು ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.
ರಾಜ್ಯದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ರ‍್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪರ‍್ಣವಾಗಿ ಕಡೆಗಣಿಸಿದ ಪರಿಣಾಮ, ನಿರುದ್ಯೋಗ ಭವಣೆ ಹೆಚ್ಚಾಗಿದೆ. ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿತು, ಉತ್ಪನ್ನ ಕ್ಷೇತ್ರ ಸೊರಗಿತು. ನಾರಿ ಕುಲ ರಕ್ಷಣೆ ಇಲ್ಲದೆ ನಲುಗಿತು, ಬೆಳೆಯೆಲ್ಲ ಒಣಗಿತು. ದಲಿತ ಕಲ್ಯಾಣ ಕರ‍್ಯಗಳು ಕುಸಿಯಿತು. ಹಿಂದುಳಿದವರ ಅಭಿವೃದ್ಧಿ ಹಿಂದುಳಿಯಿತು. ರೈತರ ಬಾಳು ಗೋಳಾಯಿತು ಎಂದು ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.
ವಿಪಕ್ಷದಿಂದ ರಾಜ್ಯಾದ್ಯಂತ ಪ್ರತಿಭಟನೆ
ಸಿದ್ದರಾಮಯ್ಯ ಅವರು ತಮ್ಮ ರ‍್ಕಾರ ಒಂದು ವರ್ಷದಲ್ಲಿ ಏನೇನು ಮಾಡಿದೆ ಎಂದು ಇಂದು (ಮೇ ೨೦) ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆ ಮುಂದೆ ಬಿಚ್ಚಿಡಲಿದ್ದಾರೆ. ಮತ್ತೊಂದೆಡೆ ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿವೆ.
ಒಂದು ರ‍್ಷದಲ್ಲಿ ರ‍್ಕಾರ ಲೋಪ-ದೋಷಗಳು, ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ರಾಜ್ಯ ಬಿಜೆಪಿ, ತನ್ನ ಎಲ್ಲ ಘಟಕಗಳಿಗೆ ಸೂಚನೆ ನೀಡಿದೆ. ಮತ್ತೊಂದೆಡೆ ವಿಪಕ್ಷದ ಹಿರಿಯ ನಾಯಕರು ಸಹ ಸುದ್ದಿಗೋಷ್ಠಿ ನಡೆಸಿ ಸಮಾಜ ಕಲ್ಯಾಣ, ಆಹಾರ, ಕೃಷಿ ಮತ್ತು ಗೃಹ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವೈಫಲ್ಯಗಳ ಕುರಿತು ಜನರ ಮುಂದಿಡಲು ತರ‍್ಮಾನಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ರಾಜ್ಯಪಾಲರಿಗೆ ದೂರು ನೀಡಲು ನರ‍್ಧರಿಸಿದೆ.