ಭಜರಂಗದಳ ನಾಯಕರ ಬಂಧನಕ್ಕೆ ಒತ್ತಾಯ ಮಾಡಿದ ಸಿದ್ದರಾಮಯ್ಯ

ಮಡಿಕೇರಿಯ ಶಾಲಾ ಆವರಣದಲ್ಲಿ ಯುವ ಜನರಿಗೆ ಶಸ್ತ್ರ ತರಬೇತಿ ನೀಡಿದ ಭಜರಂಗದಳ ನಾಯಕರ ಬಂಧನಕ್ಕೆ ಒತ್ತಾಯ. ಮಡಿಕೇರಿಯ ಶಾಲೆಯಲ್ಲಿ ಭಜರಂಗದಳ ಯುವಜನರಿಗೆ ಶಸ್ತ್ರತರಬೇತಿ ನೀಡಿ ಕಾನೂನಿಗೆ ಬಹಿರಂಗ ಸವಾಲು ಹಾಕಿದೆ. ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಖಾತೆಗೆ ಸಚಿವರಿದ್ದಾರೆಯೇ? ಸರ್ಕಾರ ಜೀವಂತವಾಗಿದೆಯೇ? ಭಜರಂಗ ದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಎಂ.ಎ. ಅಪ್ಪಚ್ಚು, ಕೆ.ಜಿ.ಬೋಪಯ್ಯ ಮತ್ತು ಸುಜ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಇವರ ಬದ್ಧತೆ ಸಂವಿಧಾನಕ್ಕೋ? ಭಜರಂಗ ದಳಕ್ಕೋ? ಶಸ್ತ್ರಾಸ್ತ್ರ ತರಬೇತಿ‌‌ ಸಂಪೂರ್ಣವಾಗಿ ಕಾನೂನು ವಿರೋಧಿ ಚಟುವಟಿಕೆಯಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣ ಭಜರಂಗ ದಳದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು.

ಶಾಲೆಯ ಆವರಣದಲ್ಲಿ ಇಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕ್ರಮ‌ಕೈಗೊಳ್ಳಬೇಕು. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀರಾಮ ಸೇನೆ ಭಜರಂಗ ದಳ, ಹಿಂದೂ ಜಾಗರಣ ವೇದಿಕೆ ಮೊದಲಾದ ಸಂಘಟನೆಗಳ‌ ಜೊತೆ ತನ್ನ ಸಂಬಂಧ ಏನು ಎಂಬುದನ್ನು ಬಿಜೆಪಿ‌ ಮೊದಲು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಶಾಂತಿ ಕದಡಿಸಲು, ಭೀತಿ ಹುಟ್ಟಿಸಲು, ರಾಜ್ಯದ ಬಿಜೆಪಿ ಸರ್ಕಾರ ಭಜರಂಗದಳ,‌ ಶ್ರೀರಾಮಸೇನೆಯಂತಹ ಕೋಮು‌ವಾದಿ ಸಂಘಟನೆಗಳಿಗೆ ವಿಶೇಷ ಅನುಮತಿ ನೀಡಿದೆಯೇ?

Leave a Comment

Your email address will not be published. Required fields are marked *

Translate »
Scroll to Top