ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಸ್ಪೀಕರ್ ಯು.ಟಿ. ಖಾದರ್ ಮತ್ತಿತರ ಗಣ್ಯರು ಭಾಗಿ
ಬೆಂಗಳೂರು : ವಾಲ್ಗೊ ಇನ್ಫ್ರಾ ಸಿಇಒ ಮತ್ತು ದೂರ ಸಂಪರ್ಕ ವಲಯದ ಉದ್ಯಮಿ ನಂಬರ್ ಒನ್ ಶ್ರೀಧರ್ ರಾವ್ ಕರ್ನಾಟಕದಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
ತೆಲಂಗಾಣ ಒಳಗೊಂಡಂತೆ ಪ್ರಪಂಚದಾದ್ಯಂತ ತನ್ನ ಜಾಲವನ್ನು ವಿಸ್ತರಿಸಿಕೊಂಡಿರುವ ನಂಬರ್ ಒನ್ ಶ್ರೀಧರ್ ರಾವ್ ಇದೀಗ ಬೆಂಗಳೂರಿನ ಜನರಿಗೆ ಹತ್ತಿರವಾಗಲು ಮಲ್ಲೇಶ್ವರಂನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ತಮ್ಮ ಹೊಸ ಮನೆಯಲ್ಲಿ ಮಗ ಅಭಿಶ್ರೀ ಸತ್ಯಂ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಉದ್ಯಮ ವಲಯದ ಪ್ರಮುಖರಾದ ಶ್ರೀಧರ್ ರಾವ್ ಅವರ ಮನೆ ಗೃಹ ಪ್ರವೇಶ, ಮಗನ ಹುಟ್ಟುಹಬ್ಬದ ಸಂಭ್ರಮ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಮಧು ಬಂಗಾರಪ್ಪ, ಸ್ಪೀಕರ್ ಯು.ಟಿ. ಖಾದರ್, ಮಾಜಿ ಕ್ರಿಕೆಟಿಗ ಅಜರುದ್ದೀನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ಗಣಗ ರವಿ, ಮತ್ತಿತರ ಗಣ್ಯರು ಭಾಗಿದ್ದರು. ಪುತ್ರ ಅಭಿಶ್ರೀ ಸತ್ಯಂ ಅವರಿಗೆ ಆಶೀರ್ವಾದ ಮಾಡಿದರು. ದೇಶದ ವಿವಿಧ ರಾಜ್ಯಗಳ ಸಚಿವರು ಹಾಗೂ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಔದ್ಯಮಿಕ ಕ್ಷೇತ್ರ ಮಾತ್ರವಲ್ಲದೆ ಸಮಾಜ ಸೇವಾ ಕ್ಷೇತ್ರದಲ್ಲೂ ಹಲವಾರು ಮಂದಿಗೆ ಬೆಂಬಲ, ಸಹಕಾರ ನೀಡುವ ಮೂಲಕ ತನ್ನದೇ ಆದ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ತಮ್ಮ ಯೋಜನೆಗಳು, ಭವಿಷ್ಯದ ಕಾರ್ಯಕ್ರಮಗಳಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದಾರೆ. ತನ್ನ ಸ್ವಂತ ರಾಜ್ಯ ತೆಲಂಗಾಣ ಮತ್ತು ಕರ್ನಾಟಕಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ವಿಶೇಷ ಪ್ರಯತ್ನವನ್ನು ಸಹ ಮಾಡಿದರು. ಹಲವಾರು ಜನರಿಗೆ ಉದ್ಯೋಗಾವಕಾಶ ಒದಗಿಸಿರುವ ಅವರು ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಲು ಸಜ್ಜಾಗಿದ್ದಾರೆ.