ರಾಜ್ಯದ ವೈಶಿಷ್ಟ್ಯಪೂರ್ಣ ಶ್ರೀ ವೈಷ್ಣೋಮಾ ದೇವಿಯ ಉತ್ಸವ: ವೈಭವದ ರಥೋತ್ಸವ

ಬೆಂಗಳೂರು:  ಬನ್ನೇರುಘಟ್ಟ ರಸ್ತೆಯ ಹುಳಿಮಾವುದಲ್ಲಿರುವ ಮಾತಾ ಶ್ರೀ ವೈಷ್ಣೋಮಾ ದೇವಿ ಮಂದಿರದ ಚಾರಿಟೇಬಲ್ ಟ್ರಸ್ಟ್ ನಿಂದ 19ನೇ ಶ್ರೀ ವೈಷ್ಣೋಮಾ ಮಹೋತ್ಸವ ಆರಂಭವಾಗಿದೆ.

 

ವಿಶೇಷ ಪೂಜೆ, ರಥೋತ್ಸವದ ಕಾರ್ಯಕ್ರಮಗಳಿಗೆ ವಿಜಯನಗರದ ಶಾಸಕರು ಎಂ ಕೃಷ್ಣಪ್ಪ  ಮತ್ತು ಸಬ್ರಮಣ್ಯ ಶರ್ಮ ಸ್ವಾಮೀಜಿ, ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್,ಪೂಜ ದುಗ್ಗಲ್ ಚಾಲನೆ ನೀಡಿದರು. ಉತ್ಸವ ಮೂರ್ತಿಯ ಜೊತೆಯಲ್ಲಿ ಸಹಸ್ರಾರು ಮಹಿಳೆಯರು ಕಳಸ ಹೊತ್ತು ಪ್ರಮುಖ ರಾಜಬೀದಿಯಲ್ಲಿ ಸಾಗಿದರು.

ದೇವಸ್ಥಾನದ ಟ್ರಸ್ಟಿ ರಾಕೇಶ್ ದುಗ್ಗಲ್ ಮಾತನಾಡಿ, ವೈಷ್ಣೋದೇವಿ ದೇವಸ್ಥಾನ ಕತ್ರಾದ ತ್ರಿಕುಟ ಬೆಟ್ಟದ 1700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಅದರೆ ವಯಸ್ಸುದಾವರು, ಮಕ್ಕಳು ಅಲ್ಲಿ ಹೋಗಲು ಸಾಧ್ಯವಾಗದೇ ಇರುವವರಿಗೆ ಬೆಂಗಳೂರಿನಲ್ಲಿ ಮೂಲ ಮಾದರಿಯ ವೈಷ್ಣೋದೇವಿಯ ಮೂರ್ತಿ ಸ್ಥಾಪಿಸಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ದೇವಸ್ಥಾನ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಮೊದಲ ವೈಷ್ಣೋದೇವಿ ದೇವಸ್ಥಾನ ಇದಾಗಿದ್ದು, 19 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿದೆ. ಮೂಲ ವೈಷ್ಣೋಮ ದೇವಿ ಮಂದಿರದಷ್ಟೇ ಪ್ರಭಾವ ಹೊಂದಿರುವ ಇಲ್ಲಿಗೆ ಭಕ್ತ ಸಮೂಹವೇ ಹರಿದು ಬರುತ್ತಿದೆ. ರಥೋತ್ಸವದ ಸಂದರ್ಭದಲ್ಲಿ ಗಣಪತಿ ಪೂಜೆ, ಪುಣ್ಯಾಹ, ರಕ್ಷಾ ಬಂಧನ, ಕಲಶ ಸ್ಥಾಪನೆ, ನವಗ್ರಹ, ಆಂಜನೇಯ ಮತ್ತು ಮಹಾಮುತ್ಯುಂಜಯ ಹೋಮ ಮತ್ತು ಪಂಚರುದ್ರ, ಮಹಾಲಕ್ಷ್ಮೀ,ಕಾಲಭೈರವ, ಸುಬ್ರಮಣ್ಯ ಸ್ವಾಮಿ ಹೋಮ  ಮತ್ತು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Facebook
Twitter
LinkedIn
WhatsApp
Email
Telegram
Print

Leave a Comment

Your email address will not be published. Required fields are marked *

Translate »
Scroll to Top