ಹವಾಲ್ದಾರ್ ಕಾಶಿರಾಯ ಬಮ್ಮನಳ್ಳಿ ಅವರಿಗೆ ಶೋರ್ಯಚಕ್ರ ಪ್ರಶಸ್ತಿ

ಬೆಂಗಳೂರು: ಕಳೆದ ಜುಲೈನಲ್ಲಿ ಪಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ವಿಜಯಪುರ ಜಿಲ್ಲೆಯ ಕಾಶಿರಾಯ ಬಮ್ಮನಳ್ಳಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿ ರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ
ಕನ್ನಡಿಗ ಯೋಧನೊಬ್ಬ ಪಡೆದಿರುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಬಮ್ಮನಳ್ಳಿ ಅವರ ಶೌರ್ಯ, ಸಾಹಸ, ಬಲಿದಾನ ಗಳಿಗೆ ಸಂದ ಗೌರವ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಬಮ್ಮನಳ್ಳಿ ಅವರ ಕುಟುಂಬಕ್ಕೆ ಸರ್ಕಾರ ನಿಯಮಾನುಸಾರ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top