ಕೊಪ್ಪಳ,ಮಾ,20 :- ಜಿಲ್ಲೆಯ ಕುಷ್ಟಗಿ ತಾಲೂಕಿನ ತವರಗೇರಾ ಹೋಬಳಿ ಓಮಿನಾಳ ಗ್ರಾಮದಲ್ಲಿ ನಿನ್ನೆ ಸಂಜೆ ೫ ಗಂಟೆಗೆ ಏಕಾಏಕಿಯಾಗಿ ಮೋಡಕವಿದ ವಾತವರಣ ಕಂಡ ಇನ್ನಲೆ ಗುಡುಗು ಸಿಡಿಲು ಆರಂಭವಾಗಿದೆ ಗಾಳಿ ಮಳೆ ಪ್ರಾರಂಭವಾದ ನಂತರ ಸುನೀಲ್ ತಂದೆ ಯಮನಪ್ಪ ಬಸರಿಹಾಳ ಎಂಬ ಕುರಿಗಾಯಿ ಕುರಿಗಳನ್ನು ಹೊಡೆದುಕೊಂಡು ತನ್ನ ಹಟ್ಟಿಕಡೆಗೆ ಹೋಗಬೇಕು ಎನ್ನುವಷ್ಟರಲ್ಲಿ ದಿಢೀರನೆ ಸಿಡಿಲು ಬಡಿದ ಪರಿಣಾಮ ಕುರಿಗಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಮತ್ತು ಸ್ಥಳದಲ್ಲಿ ೧೪ ಕುರಿಗಳು ಮೃತಪಟ್ಟಿವೆ.

ಆದರೆ ಕುರಿಗಾಯಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ವ್ಯಕ್ತಿ ಎಂದು ಗುರುತಿಸಲಾಗಿದ್ದು ಮೃತಪಟ್ಟ ವ್ಯಕ್ತಿಯ ಹೆಸರು ಸುನೀಲ್ ತಂದಿ ಯಮನಪ್ಪ ಬಸರಿಹಾಳ ವಯಸ್ಸು ೨೧ ಎಂದು ಗುರುತಿಸಲಾಗಿದೆ.