71ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟ: ಶಾರುಕ್ ಖಾನ್, ವಿಕ್ರಾಂತ್ ಮೇಸಿ ಅವರಿಗೆ ‘ಆತ್ಯುತ್ತಮ ನಟ’ ಪ್ರಶಸ್ತಿ
ನವದೆಹಲಿ: 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಲಾಗಿದ್ದು, ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ವಿಕ್ರಾಂತ್ ಮೇಸಿ ಅವರು ‘ಆತ್ಯುತ್ತಮ ನಟ’ ಪ್ರಶಸ್ತಿಯನ್ನು ಹಂಚಿಕೊAಡಿದ್ದಾರೆ.
‘ಮಿಸ್ಟ್ರೆಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರದ ಅಭಿನಯಕ್ಕಾಗಿ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶಾರುಕ್ ಅವರು ತಮ್ಮ 37 ವರ್ಷಗಳ ವೃತ್ತಿಜೀವನದಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವುದು ಇದೇ ಮೊದಲು. ‘ಜವಾನ್’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಈ ಗೌರವ ಸಂದಿದೆ. ವಿಕ್ರಾಂತ್ ಅವರು ‘ಟ್ವೆಲ್ತ್ ಫೇಲ್’ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
71ನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು, ಪುರಸ್ಕೃತರ ಪಟ್ಟಿಯನ್ನು ತೀರ್ಪುಗಾರರ ಮಂಡಳಿಯ ಅಧ್ಯಕ್ಷ, ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ಘೋಷಿಸಿದರು. ವಿಧು ವಿನೋದ್ ಚೋಪ್ರಾ ನಿರ್ದೇಶನದ ‘ಟ್ವೆಲ್ತ್ ಫೇಲ್’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದರೆ, ‘ದಿ ಕೇರಳ ಸ್ಟೋರಿ’ ಚಿತ್ರಕ್ಕಾಗಿ ಸುದಿಪ್ತೋ ಸೇನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.
ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗೆ ಅತ್ಯುತ್ತಮ ಮನರಂಜನಾ ಸಿನಿಮಾ ಪ್ರಶಸ್ತಿ ಲಭಿಸಿದೆ. ಮೇಘನಾ ಗುಲ್ಜಾರ್ ಅವರ ‘ಸ್ಯಾಮ್ ಬಹಾದೂರ್’ ಸಿನಿಮಾ ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.
ಹಿAದಿ ಸಿನಿಮಾಗಳು ಪ್ರಮುಖ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದರೆ, ಪ್ರಾದೇಶಿಕ ಸಿನಿಮಾಗಳು ಅತ್ಯುತ್ತಮ ಪೋಷಕ ನಟ, ಪೋಷಕ ನಟಿ ಮತ್ತು ತಾಂತ್ರಿಕ ವಿಭಾಗಗಳಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡವು.
ಮಲಯಾಳA ಸಿನಿಮಾ ‘ಪೂಕ್ಕಳಂ’ನ ಅಭಿನಯಕ್ಕಾಗಿ ವಿಜಯರಾಘವನ್, ತಮಿಳು ಸಿನಿಮಾ ‘ಪಾರ್ಕಿಂಗ್’ನ ಅಭಿನಯಕ್ಕಾಗಿ ಮುತ್ತುಪೆಟ್ಟೈ ಸೋಮು ಭಾಸ್ಕರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಹಂಚಿಕೊAಡರು.
ಮಲಯಾಳA ಚಿತ್ರ ‘ಉಳ್ಳೊಝುಕ್ಕ್’ನ ಅಭಿನಯಕ್ಕಾಗಿ ಊರ್ವಶಿ ಮತ್ತು ಗುಜರಾತಿ ಸಿನಿಮಾ ‘ವಶ್’ನ ಅಭಿನಯಕ್ಕಾಗಿ ಜಾನಕಿ ಬೋದೀವಾಲಾ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದುಕೊಂಡರು.
ಕೆ.ಯಶೋಧ ಪ್ರಕಾಶ್ ನಿರ್ದೇಶನದ ‘ಕಂದೀಲು’ ಕನ್ನಡದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿದಾನಂದ ನಾಯ್ಕ್ ಅವರ ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಸಿನಿಮಾ ನಾನ್ ಫೀಚರ್ ವಿಭಾಗದಲ್ಲಿ ‘ಅತ್ಯುತ್ತಮ ಚಿತ್ರಕಥೆ’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂಪೂರ್ಣ ಲಿಸ್ಟ್:
ಅತ್ಯುತ್ತಮ ನಟ – ಶಾರುಖ್ ಖಾನ್ ಮತ್ತು ವಿಕ್ರಾಂತ್ ಮ್ಯಾಸ್ಸೆ
ಅತ್ಯುತ್ತಮ ಧ್ವನಿ ವಿನ್ಯಾಸ – ಅನಿಮಲ್
ಅತ್ಯುತ್ತಮ ಚಲನಚಿತ್ರ – 12ಣh ಫೇಲ್
ಅತ್ಯುತ್ತಮ ನಟಿ – ರಾಣಿ ಮುಖರ್ಜಿ
ಅತ್ಯುತ್ತಮ ನಿರ್ದೇಶಕ – ಸುದೀಪ್ತೋ ಸೇನ್ (ದಿ ಕೇರಳ ಸ್ಟೋರಿ)
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಶಿಲ್ಪಾ ರಾವ್ (ಜವಾನ್)
ಅತ್ಯುತ್ತಮ ತೆಲುಗು ಚಿತ್ರ – ಭಗವಂತ ಕೇಸರಿ
ಅತ್ಯುತ್ತಮ ತಮಿಳು ಚಲನಚಿತ್ರ – ಪಾರ್ಕಿಂಗ್
ಅತ್ಯುತ್ತಮ ಪಂಜಾಬಿ ಚಿತ್ರ – ಗೊಡ್ಡೆ ಗೊಡೆ ಚಾ
ಅತ್ಯುತ್ತಮ ಒಡಿಯಾ ಚಿತ್ರ – ಪುಷ್ಕರ
ಅತ್ಯುತ್ತಮ ಮರಾಠಿ ಚಿತ್ರ – ಶ್ಯಾಮ್ಚಿ ಆಯಿ
ಅತ್ಯುತ್ತಮ ಮಲಯಾಳಂ ಚಿತ್ರ – ಉಲ್ಲೋಜುಕ್ಕು
ಅತ್ಯುತ್ತಮ ಕನ್ನಡ ಚಿತ್ರ – ಕಂದಿಲು
ಅತ್ಯುತ್ತಮ ಸಾಹಸ ನಿರ್ದೇಶನ – ನಂದು ಪೃಧ್ವಿ (ಹನುಮಾನ್)
ಅತ್ಯುತ್ತಮ ನೃತ್ಯ ಸಂಯೋಜಕ – ವೈಭವಿ ವ್ಯಾಪಾರಿ (ದಿಂಧೋರಾ ಬಜೆ ರೆ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಸಂಗೀತ ನಿರ್ದೇಶಕ – ಜಿವಿ ಪ್ರಕಾಶ್ ಕುಮಾರ್ (ವಾತಿ), ಹರ್ಷವರ್ಧನ್ ರಾಮೇಶ್ವರ್ (ಅನಿಮಲ್)
ಅತ್ಯುತ್ತಮ ನಿರ್ಮಾಣ ವಿನ್ಯಾಸ – ಮೋಹನದಾಸ್ (2018)
ಅತ್ಯುತ್ತಮ ಸಂಕಲನ – ಮಿಧುನ್ ಮುರಳಿ (ಪೂಕಕಾಲಂ)
ಅತ್ಯುತ್ತಮ ಚಿತ್ರಕಥೆ – ಸಾಯಿ ರಾಜೇಶ್ (ಬೇಬಿ), ರಾಮ್‌ಕುಮಾರ್ ಬಾಲಕೃಷ್ಣನ್ (ಪಾರ್ಕಿಂಗ್)
ಅತ್ಯುತ್ತಮ ಸಂಭಾಷಣೆ – ದೀಪಕ್ ಕಿಂಗ್ರಾನಿ (ಸಿರ್ಫ್ ಏಕ್ ಬಂದಾ ಕಾಫಿ ಹೈ)
ಅತ್ಯುತ್ತಮ ಚಲನಚಿತ್ರ ವಿಮರ್ಶಕ – ಉತ್ಪಲ್ ದತ್ತಾ (ಅಸ್ಸಾಂ)
ಅತ್ಯುತ್ತಮ ಛಾಯಾಗ್ರಹಣ – ದಿ ಕೇರಳ ಸ್ಟೋರಿ
ಅತ್ಯುತ್ತಮ ಪುರುಷ ಗಾಯಕ – ಬೇಬಿ
ಅತ್ಯುತ್ತಮ ಸಾಹಸ ನಿರ್ದೇಶನ – ಹನು ಮ್ಯಾನ್
ಅತ್ಯುತ್ತಮ ಚೊಚ್ಚಲ ಚಿತ್ರ – ದಿ ಸ್ಪಿರಿಟ್ ಡ್ರೀಮ್ಸ್ ಆಫ್ ಚೆರೋ
ಅತ್ಯುತ್ತಮ ಕಿರುಚಿತ್ರ – ಗಿದ್ಧ್ ದಿ ಸ್ಕ್ಯಾವೆಂಜರ್