ದೇವನಹಳ್ಳಿ:ಕೆಲವೊಂದು ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡಿರುವ ಜನರಿಗೆ ಮಾತ್ರ ರಕ್ತದ ಬೆಲೆ ಏನು ಎಂಬುದು ಅರಿವಿರುತ್ತದೆ ಆದ್ದರಿಂದ ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಿ ಕಷ್ಟದಲ್ಲಿರುವವರ ಪ್ರಾಣ ಉಳಿಸಬೇಕೆಂದು ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಕೆ.ಎನ್.ಮೂರ್ತಿ ತಿಳಿಸಿದರು.
ದೇವನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯ ಆವತಿ ಬಳಿಯ ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ನ ಶ್ರೀ ಸಾಯಿ ಮಧ್ಯಪಾನ ಮತ್ತು ಮಾದಕ ವ್ಯಸನಿಗಳ ಪರಿವರ್ತನಾ ಕೇಂದ್ರದಲ್ಲಿ ರಾಷ್ಟ್ರೋತ್ಥಾನ ರಕ್ತನಿಧಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಆಯೋಜಿಸಿದ್ದ ವೇಳೆ ಮಾತನಾಡಿ ನಮ್ಮ ಕೇಂದ್ರಕ್ಕೆ ಬರುವ ವ್ಯಸನಿಗಳಿಗೆ ಆರೋಗ್ಯದ ಬಗ್ಗೆ ಮತ್ತು ರಕ್ತದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ರಕ್ತದಾನ ಶಿಬಿರದ ಮೂಲಕ ಸಣ್ಣ ಪ್ರಯತ್ನ ಮಾಡುತ್ತದ್ದು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಲು ಪ್ರೇರೇಪಣೆ ನೀಡುತ್ತಿದ್ದೇವೆ.ಇಂದು ಕೇಂದ್ರದಲ್ಲಿನ ವ್ಯಸನಿಗಳು ಮತ್ತು ಸಿಬ್ಬಂದಿ ಸೇರಿ 35 ಯುನಿಟ್ ರಕ್ತ ಸಂಗ್ರಹಿಸಲಾಗಿದೆ ಹಾಗೂ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ಸಂಸ್ಥೆಯಿಂದ ಮಧ್ಯವಸನಿಯಿಂದ ವಿಮುಕ್ತರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಾಯಿ ಮಧ್ಯಪಾನ ಮತ್ತು ಮಾದಕ ವ್ಯಸನಿಗಳ ಪರಿವರ್ತನಾ ಕೇಂದ್ರದ ಮೇಲ್ವಿಚಾರಕ ಮಾಲತೇಶ್, ರಾಷ್ಟ್ರೋತ್ಥಾನ ರಕ್ತನಿಧಿಯ ಡಾ.ಅರುಣ್, ಸಿದ್ದಲಿಂಗಪ್ಪ, ನ್ಯಾಮೇಗೌಡ, ಶ್ವೇತ, ಶಿವು ಹಾಗು ಭಾಸ್ಕರ್, ಮಾರಪ್ಪ ಮತ್ತಿತರರು ಇದ್ದರು.