ಬೆಂಗಳೂರು: ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ನ ಮೊದಲ ಮೆಗಾ ಲಕ್ಕಿ ಡ್ರಾ ಕಾರ್ಯಕ್ರಮ ಮಲ್ಲೇಶ್ವರಂನ ಮಂತ್ರಿಮಾಲ್ ನಲ್ಲಿ ಶನಿವಾರ ರಾತ್ರಿ ನಡೆಯಿತು.
ವಿಧಾನಪರಿಷತ್ತಿನ ಶಾಸಕರಾದ ಡಾ.ಟಿ.ಎ. ಶರವಣ, ದಿ. ಜುವೆಲ್ಲರಿ ಅಸೋಸಿಯೇಷನ್ ಸಂಘದ ಅಧ್ಯಕ್ಷ ಸುರೇಶ್ ಗನ್ನಾ, ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ಅಧ್ಯಕ್ಷರಾದ ಡಿ.ವಿ. ರಮೇಶ್, ಇಂಡಿಯನ್ ಜ್ಯೂವೆಲರಿ ಅಸೋಸಿಯೇಷನ್ ಉಪಾಧ್ಯಕ್ಷ ಚೇತನ್ ಕುಮಾರ್ ಮೆಹ್ತಾ ಅವರ ಸಮ್ಮುಖದಲ್ಲಿ ವಿಜೇತರನ್ನು ಆಯ್ಕೆಮಾಡಲಾಯಿತು.
ಬೆಂಗಳೂರಿನ 150 ಆಭರಣ ಮಳಿಗೆಗಳು ಒಳಗೊಂಡಂತೆ ರಾಜ್ಯದ 2೦೦ ಕ್ಕೂ ಅಧಿಕ ಮಳಿಗೆಗಳಲ್ಲಿ ಚಿನ್ನ ಖರೀದಿಸಿ ಡಿಜಿಟಲ್ ಕೂಪನ್ ಪಡೆದ ಅದೃಷ್ಟಶಾಲಿ ಮೊದಲ ಹತ್ತು ಮಂದಿ ವಿಜೇತರನ್ನು ಆಯ್ಕೆ ಮಾಡಲಾಯಿತು.
ಚಿನ್ನದ ಹಬ್ಬದ ಸಂದರ್ಬದಲ್ಲಿ 3ಕೆ.ಜಿ ಚಿನ್ನ 45 ಕೆ.ಜಿ.ಬೆಳ್ಳಿ ಮತ್ತು ಹ್ಯುಂಡೆಯ್ ಕಾರ್ ಅನ್ನು ಗೆಲ್ಲುವ ಅವಕಾಶ ಗ್ರಾಹಕರಿನಿಗೆ ನೀಡಲಾಗಿದೆ. 3 ಸಾವಿರಕ್ಕೂ ಹೆಚ್ಚಿನ ಬಹುಮಾನಗಳನ್ನು ಗ್ರಾಹಕರು ಗೆಲ್ಲಬಹುದಾಗಿದೆ.
ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಅನ್ನು ದುಬೈ ಗೋಲ್ಡ್ ಫೆಸ್ಟಿವಲ್ ಮಾದರಿಯಲ್ಲಿ ಆಚರಿಸುತ್ತಿದ್ದು, ದುಬೈ ಶಾಪಿಂಗ್ ಫೆಸ್ಟಿವಲ್‌ನಂತೆಯೇ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಸಿಸುವ ಗುರಿ ಹೊಂದಲಾಗಿದೆ. ನಗರದ ವೈವಿಧ್ಯತೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ವಿಜೇತ ಅದೃಷ್ಟಶಾಲಿಗಳ ವಿವರ ಈ ಲಿಂಕ್ ನಲ್ಲಿ ಲಭ್ಯವಿದೆ.
https://goldfestival.in/winners