ರಂಗೋಲಿಯಲ್ಲಿ ಅರಳಿದ ವಿಜ್ಞಾನ ಚಿತ್ರಗಳು

ಕುಷ್ಟಗಿ : “ಸರಕಾರಿ ಪ್ರೌಢಶಾಲೆ ಚಳಗೇರಿ ಯಲ್ಲಿ ರಂಗೋಲಿಯಲ್ಲಿ ಅರಳಿದ ವಿಜ್ಞಾನ ಚಿತ್ರಗಳು” ವಿಜ್ಞಾನ ವಿಷಯವನ್ನು ಹೀಗೂ ಕಲಿಯಬಹುದೇ?ಹೌದು ಕಲಿಯಬಹುದು ಎನ್ನುತ್ತಾರೆ ವಿಜ್ಞಾನ ಶಿಕ್ಷಕರಾದ ಶರಣಪ್ಪ ಪರಸಾಪುರ ಮಕ್ಕಳು ಬಣ್ಣ ಬಣ್ಣಗಳಿಂದ ರಂಗೋಲಿಯನ್ನು ಬಿಡಿಸಿ ಅದರ ಬಗ್ಗೆ ವಿವರಣೆ ಹೇಳಿದಾಗ ಚಟುವಟಿಕೆ ಮೂಲಕ ತುಂಬಾ ಆಕರ್ಷಕವಾಗಿ ವಿಜ್ಞಾನ ವಿಷಯ ಕಲಿಯಬಹುದು ಇದು ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು ರಾಯಪ್ಪ ಹೂಗಾರ ಹಿರಿಯ ಶಿಕ್ಷಕರಾದ ವಿಶಾಲಕ್ಷಮ್ಮ ಕರೀಂ ಸಾಹೇಬ್ ಇದ್ದಲಗಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು ಸುಂದರವಾಗಿ ಬಿಡಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ ಈ ಬಗ್ಗೆ ಸ್ಪರ್ಧೆಯ ಕುರಿತು ಶಿಕ್ಷಕರಾದ ಶಾಕೀರ್ ಬಾಬಾ ದೈಹಿಕ ಶಿಕ್ಷಕರಾದ ಎಚ್ಡಿ ನದಾಫ್ ಹಾಗೂ ಸಿದ್ದನಗೌಡ ಪೊಲೀಸ್ ಪಾಟೀಲ್ ಸಂತಸ ವ್ಯಕ್ತಪಡಿಸಿದರು ಸ್ಪರ್ಧೆಯಲ್ಲಿ ಪ್ರಥಮ ಪೂಜಾ ಕಮ್ಮಾರ್ ದ್ವಿತೀಯ ರೇಣುಕಾ ಕುಷ್ಟಗಿ ತೃತೀಯ ಬಸಯ್ಯ ಮಸ್ಕಿ ಮಠ ಪಡೆದುಕೊಂಡಿದ್ದಾರೆ ವಿಜ್ಞಾನ ರಂಗೋಲಿ ಸ್ಪರ್ಧೆಯಲ್ಲಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಮಕ್ಕಳ ದಿನಾಚರಣೆಯಂದು ವಿಜೇತರಿಗೆ ಬಹುಮಾನ ವಿತರಿಸಲಾಗುವುದು.


ಚಿತ್ರರಚನೆ ಸ್ಪರ್ಧೆಯಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ವಿಕಾಸ ಸಹಕಾರಿಯಾಗಿದೆ ಕಲಾತ್ಮಕ ಚಟುವಟಿಕೆ ಮೂಲಕ ಕಲಿಕೆಗೆ ತುಂಬಾ ಸಹಾಯಕಾರಿಯಾಗಿದೆ ಎಂದು ಶರಣಪ್ಪ ಪರಸಾಪುರ ಅಭಿಪ್ರಾಯಪಟ್ಟರು

ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಕಲಿಯಲು ಸುಲಭವಾಗಿ ಅರ್ಥೈಸಿಕೊಳ್ಳಲು ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ರಾಯಪ್ಪ ಹೂಗಾರ್ ಮುಖ್ಯೋಪಾಧ್ಯಾಯರು ಹೇಳಿದರುರಾಯಪ್ಪ. ಹೂಗಾರ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಚಳಗೇರಾ ಶರಣಪ್ಪ ಪರಸಾಪುರ ವಿಜ್ಞಾನ ಶಿಕ್ಷಕರು ಸ. ಪ್ರೌಢಶಾಲೆ ಚಳಗೇರಿ ರಾಯಪ್ಪ. ಹೂಗಾರ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಚಳಗೇರಾ.

Leave a Comment

Your email address will not be published. Required fields are marked *

Translate »
Scroll to Top