ರಾಜ್ಯದಾದ್ಯಂತ ಪಟಾಕಿ ಗೋದಾಮುಗಳ ಸುರಕ್ಷತಾ ಸಮೀಕ್ಷೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದಾದ್ಯಂತ ಇರುವ ಪಟಾಕಿ ಗೋದಾಮುಗಳ ಸರ್ವೆ ನಡೆಸಿ, ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿಎಂ ಡಿ‌.ಕೆ.ಶಿವಕುಮಾರ್ ತಿಳಿಸಿದರು.

 

          ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಭಾನುವಾರ ಬೆಳಿಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಇನ್ನು ಮುಂದೆ ಯಾವುದೇ ಅವಘಡ ಆಗದಂತೆ ಎಚ್ಚರವಹಿಸಲಾಗುವುದು. ರಾಜ್ಯದಲ್ಲಿ ಇರುವ ಪಟಾಕಿ ಗೋದಾಮುಗಳಿಗೆ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ನೋಟೀಸ್ ನೀಡಿ ಸುರಕ್ಷತೆ ಪರಿಶೀಲನೆ ಮಾಡಲು  ಸೂಚನೆ ನೀಡಿರುವುದಾಗಿ ಹೇಳಿದರು.

ತಮಿಳುನಾಡಿನ ಕಾರ್ಮಿಕರು ದುರಂತದಲ್ಲಿ ಸಾವನ್ನಪ್ಪಿದ್ದಾರೆ, ಯುವಕರ ಸಾವು ದುಃಖಕರ ಸಂಗತಿ. ರಾಜ್ಯ ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ತಮಿಳುನಾಡಿನವರು 3 ಲಕ್ಷ ಮೊತ್ತದ ಚೆಕ್ ಈಗಾಗಲೇ ವಿತರಣೆ ಮಾಡಿದ್ದಾರೆ. ಅವಘಡಕ್ಕೆ ಏನು ಕಾರಣ ಎಂದು ಶೀಘ್ರ ತನಿಖೆ ನಡೆಸಲಾಗುವುದು ಎಂದರು.

          ಒಳಗೆ ಹೋಗಲು ಆಗದ ಕಾರಣ ಕಟ್ಟಡದ ಹಿಂದಿನ ಗೋಡೆ ಒಡೆದು ಹಾಕುವಂತೆ ಸೂಚನೆ ನೀಡಿದ್ದೆ. ಇನ್ನು ಮುಂದೆ ಅಯಾಮಕರ ಸಾವು ಸಂಭವಿಸದಂತೆ ಮುನ್ನೆಚರಿಕೆವಹಿಸುತ್ತೇವೆ. ಸಾವಿನ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ, ಯುವಕರ ಸಾವು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

 

          ಮುಖ್ಯಮಂತ್ರಿಗಳು ದುರಂತ ನಡೆದ ಸ್ಥಳ ಪರಿಶೀಲನೆಗೆ ಹೋಗುತ್ತಿದ್ದು, ನಾನು ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಬೊಮ್ಮಾಯಿ ಅವರ ಹೇಳಿಕೆಯಂತೆ ನಡೆಯುತ್ತಿದ್ದೇವೆ

          ಕ್ಷೇತ್ರಗಳಿಗೆ ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ತಾರತಮ್ಯ ಮಾಡುತ್ತಿದ್ದು ಬಿಜೆಪಿ ಈ ರೀತಿ ಮಾಡಿರಲಿಲ್ಲ ಎನ್ನುವ ಬೊಮ್ಮಾಯಿ ಅವರ ಆರೋಪಕ್ಕೆ “ಬೊಮ್ಮಾಯಿ ಅವರು ವಿಧಾನ ಪರಿಷತ್ತಿನಲ್ಲಿ ಏನು ಹೇಳಿಕೆ, ಉತ್ತರ ನೀಡಿದ್ದರೊ, ಅದನ್ನೇ ನಾವು ಪಾಲನೆ ಮಾಡುತ್ತಿದ್ದೇವೆ. ಎಂದು ತಿರುಗೇಟು ನೀಡಿದರು.

          ಸೋಮವಾರ ಬ್ರಾಂಡ್ ಬೆಂಗಳೂರು ಸಭೆ

          ಬ್ರಾಂಡ್ ಬೆಂಗಳೂರು ವಿಚಾರದಲ್ಲಿ 70,000 ಸಲಹೆಗಳು ಬಂದಿದ್ದು,‌ ಅವುಗಳನ್ನು ಒಂದು ಕಡೆ ಕ್ರೂಡಿಕರಿಸಿ ವಿಂಗಡಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಏಳು ತಂಡಗಳನ್ನು ಮಾಡಿದ್ದು, ಈ ತಂಡಗಳು ಉತ್ತಮ ಸಲಹೆಗಳನ್ನು ಆಯ್ಕೆ ಮಾಡುತ್ತದೆ. Voice of the citizens, should be voice of the karnataka ಮಾತಿನಂತೆ ಜನಸಾಮಾನ್ಯರ ಮಾತುಗಳಿಗೆ ಮನ್ನಣೆ ನೀಡಲು ಸರ್ಕಾರ ಮುಂದಾಗಿದೆ.

 

          ಸೋಮವಾರ ಬೆಳಿಗ್ಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

Facebook
Twitter
LinkedIn
WhatsApp
Print
Email
Telegram
Mix

Leave a Comment

Your email address will not be published. Required fields are marked *

Translate »
Scroll to Top