ಕರುಣ್‌ ನಾಯರ್ ಆಟ ಮೆಚ್ಚಿದ ಸಚಿನ್ ತೆಂಡೂಲ್ಕರ್

Kannada Nadu
ಕರುಣ್‌ ನಾಯರ್ ಆಟ ಮೆಚ್ಚಿದ ಸಚಿನ್ ತೆಂಡೂಲ್ಕರ್

ನವದೆಹಲಿ: ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕರುಣ್‌ ನಾಯರ್‌ ಬಾರೀ ಸದ್ದು ಮಾಡುತ್ತಿದ್ದಾರೆ. ದೇಶೀಯ ಏಕದಿನ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಕರುಣ್ ಅವರ ಆಟವನ್ನು ಕಂಡು ಮಾಜಿ ಆಟಗಾರರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಇವರಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ನೀಡುಬೇಕು ಎಂದು ಒತ್ತಾಯ ಹೆಚ್ಚಾಗಿದೆ. ಕರುಣ್ ಅವರ ಮನಮೋಹಕ ಆಟವನ್ನು ಕಂಡು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್‌ ಸಹ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಹೌದು.. ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ವಿಧರ್ಭ ಬ್ಯಾಟ್ಸ್‌ ಮನ್ ಕರುಣ್ ನಾಯರ್ ಕೇವಲ 7 ಇನ್ನಿಂಗ್ಸ್ ಗಳಲ್ಲಿ 5 ಶತಕ, 1 ಅರ್ಧ ಶತಕದ ಸಹಿತ 752 ರನ್ ಕಲೆಹಾಕಿದ್ದಾರೆ. ಅವರು ಬರೊಬ್ಬರಿ 125.96 ಸ್ಟ್ರೈಕ್ ರೇಟ್ ನಲ್ಲಿ ಇಷ್ಟು ರನ್ ಕಲೆಹಾಕಿದ್ದು, ಅಜೇಯ 163 ರನ್ ಟೂರ್ನಿ ಯಲ್ಲಿ ಅವರ ಗರಿಷ್ಠ ವೈಯುಕ್ತಿಕ ಮೊತ್ತವಾಗಿದೆ. ಇನ್ನೂ ಅಚ್ಚರಿ ಎಂದರೆ ಆರು ಇನ್ನಿಂಗ್ಸ್ ಗಳ ಲ್ಲಿ ಕರುಣ್ ನಾಯರ್ ಅಜೇಯರಾಗಿ ಉಳಿದಿದ್ದರು.
ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರುದ್ಧವನ್ನು ಮುನ್ನಡೆಸುತ್ತಿರುವ ನಾಯರ್, ವಡೋದರಾದಲ್ಲಿ ತಮ್ಮ ಮಾಜಿ ತಂಡ ಕರ್ನಾಟಕ ವಿರುದ್ಧದ ಪ್ರಶಸ್ತಿ ಪಂದ್ಯವನ್ನು (ಫೈನಲ್) ಆಡಲಿದ್ದಾರೆ. ನಾಯರ್ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಏಳು ಪಂದ್ಯಗಳಲ್ಲಿ 752.00 ರ ಸರಾಸರಿಯಲ್ಲಿ 752 ರನ್ ಗಳಿಸಿದ್ದಾರೆ.
ಗುರುವಾರ ಮಹಾರಾಷ್ಟ್ರ ವಿರುದ್ಧದ ಸೆಮಿಫೈನಲ್‌ನಲ್ಲಿ, ನಾಯರ್ 44 ಎಸೆತಗಳಲ್ಲಿ 9 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳೊಂದಿಗೆ 88* ರನ್ ಗಳಿಸುವ ಮೂಲಕ ವಿರ್ಭ ತಂಡವು ಪಂದ್ಯ ಗೆಲ್ಲುವ 380 ರನ್‌ಗಳನ್ನು ಗಳಿಸಲು ಸಹಾಯ ಮಾಡಿದರು. ಈ ಪಂದ್ಯದಲ್ಲಿ ಮಹಾರಾಷ್ಟ್ರ ಕೇವಲ 311/7 ಗಳಿಸಲು ಸಾಧ್ಯವಾಯಿತು.

ಕ್ರಿಕೆಟ್ ದೇವರಿಗೇ ಅಚ್ಚರಿ
ಇನ್ನು ಕರುಣ್ ನಾಯರ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ‘ಈ ರೀತಿಯ ಪ್ರದರ್ಶ ನಗಳು ಆಕಸ್ಮಿಕವಾಗಿ ಸಂಭವಿಸುವುದಿಲ್ಲ, ಅವು “ಅಗಾಧ ಗಮನ ಮತ್ತು ಕಠಿಣ ಪರಿಶ್ರಮದಿಂದ” ಬರುತ್ತವೆ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿನ್, ‘7 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳೊಂದಿಗೆ 752 ರನ್ ಗಳಿಸುವುದು ಅಸಾಧಾರಣ, @karun126″ ಎಂದು ಸಚಿನ್ ಬರೆದಿದ್ದಾರೆ. ಇಂತಹ ಪ್ರರ್ಶ್ನಗಳು ಕೇವಲ ಸಂಭವಿಸುವುದಿಲ್ಲ, ಅವು ಅಪಾರ ಗಮನ ಮತ್ತು ಕಠಿಣ ಪರಿಶ್ರಮದಿಂದ ಬರುತ್ತವೆ. ಬಲಿಷ್ಠವಾಗಿ ಮುಂದುವರಿಯಿರಿ ಮತ್ತು ಪ್ರತಿಯೊಂದು ಅವಕಾಶವನ್ನೂ ಗಣನೆಗೆ ತೆಗೆದುಕೊಳ್ಳಿ! ಎಂದು ಕರುಣ್ ನಾಯರ್ ಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ ಪರೋಕ್ಷವಾಗಿ ಆಯ್ಕೆ ಸಮಿತಿಗೂ ಇಂತಹ ಪ್ರತಿಭೆಗಳನ್ನು ಪರಿಗಣಿಸಿ ಎಂದು ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ.

ಮತ್ತೆ ತಂಡಕ್ಕೆ ಆಯ್ಕೆ ಮಾಡುವಂತೆ ಒತ್ತಾಯ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿನ ಈ ಅದ್ಭುತ ಪ್ರದರ್ಶನವು ನಾಯರ್ ಅವರನ್ನು ಕ್ರಿಕೆಟ್ ವಲಯ ಮತ್ತು ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿಸಿದೆ, ಅನೇಕರು ಅವರನ್ನು ಭಾರತೀಯ ತಂಡಕ್ಕೆ ಮತ್ತೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮಾರ್ಚ 2017 ರಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದ ನಾಯರ್, ದಂತಕಥೆಯ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಂತರ ಭಾರತ ಪರ ಟೆಸ್ಟ್ ತ್ರಿಶತಕ ಬಾರಿಸಿದ ಏಕೈಕ ಆಟಗಾರರಾಗಿದ್ದಾರೆ. 2016 ರಲ್ಲಿ ಭಾರತ ಪರ ಆಡಿದ ನಾಯರ್ ಈ ವರೆಗೂ ಆರು ಟೆಸ್ಟ್ ಪಂದ್ಯಗಳಲ್ಲಿ, ಅವರು ಏಳು ಇನ್ನಿಂಗ್ಸ್‌ಗಳಲ್ಲಿ 62.33 ಸರಾಸರಿಯಲ್ಲಿ 374 ರನ್ ಗಳಿಸಿದ್ದಾರೆ, ಅವರ ಅತ್ಯುತ್ತಮ ಸ್ಕೋರ್ 303*. ನಾಯರ್ ಭಾರತ ಪರ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು 46 ರನ್ ಗಳಿಸಿದ್ದಾರೆ, ಅತ್ಯುತ್ತಮ ಸ್ಕೋರ್ 39 ರನ್ ಆಗಿತ್ತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";