ಬೆಂಗಳೂರು: ರೋಟರಿ ಬೆಂಗಳೂರು ಪ್ರೈಮ್ ಅಂತಿಮ ವರ್ಷದ ಬಿಕಾಂ,ಬಿಸಿಎ, ಬಿಬಿಎಂ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಎಪಿಎಸ್ ವಾಣಿಜ್ಯ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು 70-80 ಗಂಟೆಗಳ ಅವಧಿಯದ್ದಾಗಿದ್ದು, ಟ್ಯಾಲಿ ಪ್ರೋಗ್ರಾಂ, ಜಿಎಸ್ಟಿ, ಎಂಎಸ್ ಆಫೀಸ್, ಪಿಪಿಟಿ ಮತ್ತು ಇತರ ಸಾಫ್ಟ್ ಸ್ಕಿಲ್ ತರಬೇತಿಯನ್ನು ಒಳಗೊಂಡಿರುತ್ತದೆ.
ರೋಟರಿ ಬೆಂಗಳೂರು ಪ್ರೈಮ್ ಕಳೆದ 5 ವರ್ಷಗಳಿಂದ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಅನೇಕ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ ಮತ್ತು ಹಲವಾರು ನೂರಾರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದೆ ಮತ್ತು ಅವರಿಗೆ ಉದ್ಯೋಗವನ್ನು ಖಾತರಿಪಡಿಸಲು ಸಹಾಯ ಮಾಡಿದೆ.
ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ವಿಷ್ಣು ಭರತ್ ಆಲಂಪಲ್ಲಿ ಅವರು ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ತರಬೇತಿಯ ಮಹತ್ವವನ್ನು ತಿಳಿಸಿದರು. ಟ್ಯಾಲಿ, ಜಿಎಸ್ಟಿ, ಎಂಎಸ್ ಆಫೀಸ್, ಪಿಪಿಟಿ ಮತ್ತು ಇತರ ಸಾಫ್ಟ್‌ರ್ಗಳಂತಹ ಅಗತ್ಯ ವಿಷಯಗಳಲ್ಲಿ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಉದ್ಯೋಗಾವಕಾಶವನ್ನು ಹೆಚ್ಚಿಸಿಕೊಳ್ಳಲುಇದೊಂದು ಸುವರ್ಣಾವಕಾಶವಾಗಿದೆ ಎಂದು ಅವರು ಒತ್ತಿ ಹೇಳಿದರು.
ಡಾ.ವಿಷ್ಣು ಭರತ್ ಆಲಂಪಲ್ಲಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಇತ್ತೀಚಿನ ಹೊಸ ಕೌಶಲ್ಯ ಮತ್ತು ತಂತ್ರಜ್ಞಾನಗಳೊಂದಿಗೆ ಶಿಕ್ಷಣ ದ ಅಗತ್ಯವನ್ನು ಒತ್ತಿ ಹೇಳಿದರು. ಉದ್ಯಮದ ಕ್ಷಿಪ್ರ ಗತಿಯ ಬದಲಾವಣೆಯ ವೇಗಕ್ಕೆ ತಮ್ಮ ವೃತ್ತಿಜೀವನದ ಬೆಳವಣಿಗೆಯನ್ನು ಹೊಂದಿಸಿಕೊಳ್ಳಬೇಕು ಇಲ್ಲವಾದರೆ ಕೆಲಸ ಮಾಡುವ ತಮ್ಮ ಗೆಳೆಯರ ಹಿಂದೆ ಬೀಳುವ ಅಪಾಯವನ್ನು ಅವರು ಸೂಚಿಸಿದರು.
ನಿರ್ದಿಷ್ಟವಾಗಿ ಹೇಳಬೇಕಾದರೆ, ಬಿ.ಕಾಂ, ಬಿಬಿಎಂ ಮತ್ತು ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಮೌಲ್ಯ ಧಾರಿತ ಕೋರ್ಸ್‌ಳ ಲಾಭವನ್ನು ಪಡೆಯಲು ಪ್ರೋತ್ಸಾಹಿಸಿದರು. ಇದಕ್ಕೆ ಪೂರಕವಾಗಿ ನಮ್ಮ ಎಪಿಎಸ್ ಇಂಜಿನಿಯರಿಂಗ್ ಕಾಲೇಜ್‌ನ್ನೂ ಉದಾಹರಣೆಯಾಗಿ ತೆಗೆದುಕೊಂಡು ರಾಷ್ಟ್ರ ನಿರ್ಮಾಣದ ಗುರಿಯನ್ನು ಹೊಂದಿದೆ.
ಪ್ರತಿ ವಿದ್ಯಾರ್ಥಿಯನ್ನು ಶೈಕ್ಷಣಿಕವಾಗಿ ಮಾತ್ರವಲ್ಲದೆ ವೃತ್ತಿಪರ ಕೌಶಲ್ಯಗಳಲ್ಲಿಯೂ ಉತ್ತಮ ಗೊಳಿಸಿವ ಮಹದಾಸೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.