ಬೆಂಗಳೂರು: ಸದ್ಯ ಭಾರತದಲ್ಲಿ ’ಕೆಜಿಎಫ್ ಚಾಪ್ಟರ್ ೨’ ಹವಾ! ಜೋರಾಗಿಯೇ ಇದೆ. ಬಹು ನೀರಿಕ್ಷೆಯ ಈ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ನಿನ್ನೆ (ಏ. ೧೪) ವಿಶ್ವಾದ್ಯಂತ ಸುಮಾರು ೧೦,೦೦೦ ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿಯೇ ೫೫೦ ಪ್ಲಸ್ ಸ್ಕ್ರೀನ್ಗಳಲ್ಲಿ ಕೆಜಿಎಫ್ ಪ್ರದರ್ಶನವಾಗುತ್ತಿದೆ. ಎಲ್ಲಾ ಭಾಷೆಯ ಪ್ರೀ-ಬುಕ್ಕಿಂಗ್ನಲ್ಲಿ ಮೊದಲ ದಿನದ ಟಿಕೆಟ್ಗಳು ಶೋಲ್ಡ್ ಔಟ್ ಆಗಿದ್ದವು. ಜೊತೆಗೆ ಮೊದಲ ದಿನ ಶೋಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕರ್ನಾಟಕವೊಂದರಲ್ಲೇ ೨ ಸಾವಿರಕ್ಕೂ ಹೆಚ್ಚು ಶೋಗಳ ಪ್ರದರ್ಶನ ಕಂಡಿದೆ. ಕೆಲವು ಚಿತ್ರಮಂದಿರಗಳಲ್ಲಿ ಬುಧವಾರ ಮಧ್ಯರಾತ್ರಿ ೧೨ ಗಂಟೆಯಿಂದಲೇ ಶೋ ಪ್ರಾರಂಭವಾದವು. ಆಲ್ಮೋಸ್ಟ್ ಭಾನುವಾರದವರೇಗೂ ಚಿತ್ರಮಂದಿರಗಳು ತುಂಬಿದ ಪ್ರದರ್ಶನ ನಡೆಯುವ ಲಕ್ಷಣವಿದ್ದು, ಈಗಾಗಲೇ ಸಾಕಷ್ಟು ಶೋಗಳ ಬುಕ್ಕಿಂಗ್ ಕೂಡ ಫುಲ್ ಆಗಿವೆ. ಅಲ್ಲಿಗೆ ಬಾಕ್ಸ್ ಆಫಿಸ್ನಲ್ಲಿ ಕೆಜಿಎಫ್ ಮಾಡಬಹುದಾದ ಮ್ಯಾಜಿಕ್ ಮೇಲೆ ಸಿನಿ ರಸಿಕರ ಕಣ್ಣು ಬಿದ್ದಿದೆ.
ಕೆಜಿಎಫ್ ಕನ್ನಡದ ಪ್ರತಿಷ್ಠಿತ ಚಿತ್ರ. ಅದ್ದೂರಿತನ ಈ ಚಿತ್ರದ ಹೆಚ್ಚುಗಾರಿಕೆ. ಬಿಡುಗಡೆಯ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾದ್ಯಮ ಗೋಷ್ಠಿ ನಡೆಸಿತು ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ’ದೇಶದಲ್ಲಿ ಸುಮಾರು ೯೫೦೦ ಚಿತ್ರಮಂದಿರಗಳಿವೆ, ಈ ಪೈಕಿ ಐದೂವರೆ ಸಾವಿರ ಚಿತ್ರಮಂದಿರಗಳಲ್ಲಿ ಕೆಜಿಎಫ್ ೨ ಪ್ರದರ್ಶನ ಕಾಣಲಿದೆ. ಇನ್ನು ಚಿತ್ರಕ್ಕೆ ಎಷ್ಟು ಖರ್ಚಾಗಿದೆ ಎನ್ನುವ ಲೆಕ್ಕ ಇಟ್ಟಿಲ್ಲ. ಚಿತ್ರ ಚೆನ್ನಾಗಿ ಬರಬೇಕು ಎನ್ನುವ ನಿಟ್ಟಿನಲ್ಲಿ ಬಂಡವಾಳ ಹೂಡಿಕೆ ಆಗಿದೆ’ ಎನ್ನುವರು. ಇದೇ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ’ಕೆಜಿಎಫ್ ಮೊದಲ ಭಾಗ ಚಿತ್ರದ ಆರಂಭ ಮಾತ್ರ. ಇಲ್ಲಿ ಗರುಡ-ರಾಕಿ, ತಾಯಿ-ಮಗನ ಮೇಲೆ ಪಾತ್ರ ಕೇಂದ್ರೀಕೃತವಾಗಿತ್ತು. ಕೆಜಿಎಫ್ ೨ನಲ್ಲಿ ಕಥೆ ವಿಸ್ತಾರವಾಗಿದೆ. ಪ್ರಧಾನಿ ಹಾಗೂ ಅಧೀರನ ಪಾತ್ರ ವಿಜೃಂಭಿಸಿದೆ. ಮುಖ್ಯವಾಗಿ ಹೇಳಬೇಕಂದರೆ ಈ ಚಿತ್ರ ಎಲ್ಲಾ ವಿಷಯದಲ್ಲೂ ವೈಭವೋಪೇತವಾಗಿದೆ. ಇದು ಆರಂಭಿಕ ಚಿತ್ರದ ಯಶಸ್ಸಿನಿಂದ ಪೋಷಿಸಿದ ಪಾತ್ರವಲ್ಲ. ಇದನ್ನೆಲ್ಲಾ ಮೊದಲೇ ಯೋಚಿಸಲಾಗಿತ್ತು’ ಎಂದು ವಿವರಿಸಿದರು. ಇನ್ನು ನಿಮ್ಮ ಚಿತ್ರದಲ್ಲಿ ನಿಜವಾದ ಹೀರೋ ಯಾರು ಎಂಬ ಪ್ರಶ್ನೆಗೆ ನನ್ನ ಚಿತ್ರದಲ್ಲಿ ಕಥೆಯೇ ಹೀರೋ ಅದರಲ್ಲಿ ಎರಡು ಮಾತಿಲ್ಲ ಎಂದು ಪ್ರಶಾಂತ್ನೀಲ್ ಸ್ಪಷ್ಟಪಡಿಸಿದರು. ಕೆಜಿಎಫ್ನ ಮುಂದುವರೆದ ಭಾಗ ಇರಬಹುದಾ? ಎಂಬ ಪ್ರಶ್ನೆಗೆ ಯಾವುದೂ ಅಂತಿಮ ಅಲ್ಲ, ಯಾಕಾಗಬಾರದು? ಎಂಬ ಪ್ರಶ್ನೆಯೂ ಇದೆ. ಕೆಜಿಎಫ್ ಟು ಚಿತ್ರ ಬಿಡುಗಡೆಗೊಂಡ ನಂತರ ಎಲ್ಲಕ್ಕೂ ಒಂದು ಉತ್ತರ ಸಿಗಬಹುದು ಎಂದು ಪ್ರಶಾಂತ್ನೀಲ್ ಉತ್ತರಿಸಿದರು.
ಈಗಾಗಲೇ ಟೀಸರ್, ಟ್ರೇಲರ್, ಹಾಡುಗಳಿಂದ ವಿಶ್ವದ ಗಮನ ಸೆಳೆದಿರುವ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದು, ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಚಿತ್ರವು ಗ್ರೀಸ್ ಸೇರಿದಂತೆ ಯುರೋಪ್, ಅಮೇರಿಕಾ, ವಿಶ್ವದ ಹಲವು ಪ್ರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ವಿಶೇವೆಂದರೆ ಎಲ್ಲೆಡೆ ಕನ್ನಡ ಸೇರಿದಂತೆ ತೆಲುಗು, ಹಿಂದಿ ಮೊದಲಾದ ಭಾ?ಗಳಲ್ಲೂ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಇದೀಗ ಗ್ರೀಸ್ನಲ್ಲಿ ರಿಲೀಸ್ ಆಗಲಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಯನ್ನು ಕೆಜಿಎಫ್ ಬರೆಯಲಿದೆ. ಯಶ್ ನಾಯಕರಾಗಿರುವ ಈ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ಚಿತ್ರದಲ್ಲಿ ಬಾಲಿವುಡ್ನ ಸಂಜಯ್? ದತ್?, ರವೀನಾ ಟಂಡನ್?, ಪ್ರಕಾಶ್ ರಾಜ್, ಮಾಳವಿಕಾ, ಅರ್ಚನಾ ಜೋಯಿಸ್, ವಸಿ? ಸಿಂಹ, ರಾವ್? ರಮೇಶ್? ಸೇರಿದಂತೆ ಸಾಕಷ್ಟು ಕಲಾವಿದರ ದಂಡೆ ಇದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಸಂಕಲನವಿದೆ.