ಬಳ್ಳಾರಿ: ಕಳೆದ ತಿಂಗಳು 30ನೇ ತಾರೀಕು ಹೊಸಪೇಟೆಯ ವಡ್ಡರಹಳ್ಳಿ ಬ್ರಿಡ್ಜ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತರಾದ ಬಳ್ಳಾರಿಯ ಕೌಲ್ ಬಜಾರ್ ಮತ್ತು ನಗರ ವ್ಯಾಪ್ತಿಯ ಮೃತರ ಕುಟುಂಬಗಳಿಗೆ ಗುರುವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.
ಅಪಘಾತದಲ್ಲಿ ಒಟ್ಟು 9 ಜನ ಮೃತರಾಗಿದ್ದು, ಮೃತರ ಪೈಕಿ ಕೌಲ್ ಬಜಾರ್ ವ್ಯಾಪ್ತಿಯ 7 ಜನರು ಮೃತರಾಗಿದ್ದರು. ಮೃತರಾದವರಿಗೆ ಸದ್ಯ 7 ಜನರಿಗೆ ಮಾತ್ರ ಚೆಕ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಇಬ್ಬರ ಕುಟುಂಬಗಳಿಗೆ ಶೀಘ್ರದಲ್ಲೇ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಚೆಕ್ ವಿತರಿಸುವರು ಎಂದು ಸಚಿವ ಬಿ.ನಾಗೇಂದ್ರ ಅವರು ತಿಳಿಸಿದರು. ಇದೇ ವೇಳೆ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಹಾಗೂ ಬಳ್ಳಾರಿ ತಹಶೀಲ್ದಾರ್, ಕಾಂಗ್ರೆಸ್ ಮುಖಂಡ ಬಿ.ವೆಂಕಟೇಶ್ ಪ್ರಸಾದ್, ಮೇಯರ್ ಆದ ಡಿ.ತ್ರಿವೇಣಿ ಉಪ ಮೇಯರ್ ಆದ ಶ್ರೀಮತಿ ಜಾನಕಮ್ಮ, ಮಾಜಿ ಮೇಯರ್ ಆದ ಶ್ರೀಮತಿ ರಾಜೇಶ್ವರಿ ಸುಬ್ಬರಾಯ್ಡು, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸುಕ್ಕುಂ, ನಾಜು, ಎನ್.ಎಂ.ಡಿ ಆಸೀಫ್ ಭಾಷಾ ಕಾಂಗ್ರೆಸ್ ಪಕ್ಷದ ಮುಖಂಡರು ಅಯಾಜ್, ರಿಯಾಜ್, ಅಲ್ಲಭಕಾಷ್, ಕೆ.ಹೊನ್ನಪ್ಪ, ನಾಗಲಕೆರೆ ಗೋವಿಂದ, ಗುಜರಿ ಬಸವರಾಜ್, ಮುದ್ದಿ ಮಲ್ಲಯ್ಯ, ಜರಾಲ್ಡ್ ಜೆರ್ರಿ, ಚಿನ್ನ, ಹಗರಿ ಗೋವಿಂದ ಸೇರಿದಂತೆ ಹಲವರು ಹಾಜರಿದ್ದರು.