ಈ ಬಾರಿ ಅವಧಿಗೆ ಮೊದಲೇ ಜಿಲ್ಲೆಗೆ ಮುಂಗಾರು ಎಂಟ್ರಿ ಕೊಟ್ಟಿದೆ. ಜೂನ್ ಒಂದರಿಂದ ಮುಂಗಾರು ಅಧಿಕೃತವಾಗಿ ಅಬ್ಬರಿಸಲಾರಂಭಿಸುವ ನಿರೀಕ್ಷೆ ಇದೆ. ಕಳೆದ ರ‍್ಷ ಮಳೆಯೇ ಇಲ್ಲದೆ ಅಂರ‍್ಜಲ ಬರಿದಾಗಿದೆ. ಎಲ್ಲೆಡೆ ನೀರಿನ ಹಾಹಾಕಾರ ತಲೆದೋರಿತ್ತು. ಆದ್ರೆ ಈ ರ‍್ಷ ಉತ್ತಮ ಮಳೆಯ ನಿರೀಕ್ಷೆ ಇದ್ದು, ಕೊಡಗು ಜಿಲ್ಲೆ ಎಂದಿನ ಮಳೆಗಾಲದ ವೈಭವಕ್ಕೆ ಮರಳುವ ಸಂಭವವಿದೆ.
ಸುಮಾರು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭರ್ತಿ ಬತ್ತಿ ಹೋಗಿದ್ದ ಕಾವೇರಿ ಮತ್ತೆ ತನ್ನ ಗತವೈಭವಕ್ಕೆ ಮರಳುತ್ತಿದೆ. ತೀವ್ರ ಬರದಿಂದಾಗಿ ಹರಿಯುವಿಕೆಯನ್ನೇ ನಿಲ್ಲಿಸಿದ್ದ ಜೀವನದಿ ಕಾವೇರಿ ಮತ್ತೆ ಮೈದುಂಬಿಕೊಳ್ಳುತ್ತಿದೆ. ಇದು ಕಾವೇರಿ ಕೊಳ್ಳದ ಜನ ರ‍್ಗದಲ್ಲಿ ಸಂತಸ ತಂದಿದೆ. ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗ್ತಾ ಇರೋದ್ರಿಂದ ಕಾವೇರಿ ಮಾತ್ರವಲ್ಲ ಕೊಡಗಿನ ಎಲ್ಲಾ ನದಿ ತೊರೆಗಳು ಜೀವ ಪಡೆದುಕೊಂಡಿವೆ. ಎಲ್ಲೆಡೆ ಮತ್ತೆ ಹಸಿರು ನಳನಳಿಸುತ್ತಿದೆ.
ಅದು ಏಪ್ರಿಲ್ ಮೊದಲ … ಎಲ್ಲೆಲ್ಲೂ ಸುಡು ಬಿಸಿಲು.. ಭೀಕರ ಬರ.. ಪರಿಣಾಮ ಕೊಡಗಿನಲ್ಲಿ ಜೀವ ನದಿ ಹರಿಯುವಿಕೆ ನಿಲ್ಲಿಸಿ ಬಟಾಬಯಲಾಗಿದ್ದ ಭೀಕರ ದೃಶ್ಯವದು.. ಎಲ್ಲಿ ನೋಡಿದರೂ ಬರೀ ಬಂಡೆಗಲ್ಲುಗಳು.. ನೀರಿನ ಸುಳಿವೇ ಇಲ್ಲ.. ಕಾವೇರಿಯನ್ನ ನೀರಿಗಾಗಿ ಆಶ್ರಯಿಸಿದ್ದ ಹಳ್ಳಿಗಳು, ಪಟ್ಟಣಗಳು, ನಗರಗಳಂತೂ ಹನಿ ಹನಿ ನೀರಿಗೂ ತತ್ವಾರ ಪಡುವಂತಾಗಿತ್ತು.
ಆದ್ರೆ ಈಗಿನ ದೃಶ್ಯ ಹೇಗಿದೆಯೆಂದರೆ ಜೀವನದಿ ಮತ್ತೆ ಜೀವ ಪಡೆದುಕೊಂಡಿದೆ. ಉತ್ತಮ ಎನಿಸುವಷ್ಟರ ಮಟ್ಟಿಗೆ ಸರಾಗವಾಗಿ ನದಿ ಹರಿಯುತ್ತಿದೆ. ಕೊಡಗಿನ ದುಬಾರೆ, ವಾಲ್ನೂರು, ತೆಪ್ಪದಕಂಡಿ, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ರ‍್ತಿ ೫೦ ದಿನಗಳ ಬಳಿಕ ಹರಿಯುವಿಕೆ ಶುರು ಮಾಡಿದೆ. ಸುಮಾರು ೭೦ ರ‍್ಷ ಗಳ ಹಿಂದೆ ಕಾವೇರಿ ನದಿ ಭೀಕರ ಬರಗಾಲಕ್ಕೆ ತುತ್ತಾಗಿ ಹರಿಯುವಿಕೆ ನಿಲ್ಲಿಸಿತ್ತು. ಅದಾದ ಬಳಿಕ ಈ ರ‍್ಷವೇ ಇಷ್ಟೊಂದು ಕನಿಷ್ಟ ಮಟ್ಟಕ್ಕೆ ನದಿ ಇಳಿದಿತ್ತು. ಜಲಚರಗಳ ಮಾರಣಹೋಮವಾಗಿತ್ತು. ಆದ್ರೆ ಕೊಡಗಿನ ಹಲವೆಡೆ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದ ಪಶ್ಚಿಮ ಘಟ್ಟದ ಹಳ್ಳಕೊಳ್ಳಗಳು ನದಿ ತೊರೆಗಳಲ್ಲಿ ನೀರು ಹರಿದು ಅದು ಕಾವೇರಿ ಒಡಲು ಸೇರುತ್ತಿದೆ. ಪರಿಣಾಮ ಕಾವೇರಿಯು ನಿಧಾನವಾಗಿ ಮೈದುಂಬಿಕೊಳ್ಳುತ್ತಿದೆ ಎನ್ನುತ್ತಾರೆ ಚಂದ್ರಮೋಹನ್, ಕಾವೇರಿ ನದಿ ಬಚಾವೋ ಆಂದೋಲನ ಸಂಚಾಲಕ.
ಇನ್ನು ಕಾವೇರಿ ಮೈ ದುಂಬಿಕೊಂಡಿರುವುದು ಕಾವೇರಿ ಕೊಳ್ಳದ ಜನರಲ್ಲಿ ರ‍್ಷ ಮೂಡಿಸಿದೆ. ವಿಶೇಷವಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳು ಕುಡಿಯುವ ನೀರಿಗಾಗಿ ಇನ್ನಿಲ್ಲದ ಬವಣೆ ಪಡುವಂತಾಗಿತ್ತು. ಆದ್ರೆ ಇದೀಗ ಕಾವೇರಿಯಲ್ಲಿ ನೀರು ಹರಿಯುತ್ತಿರುವುದು ಸದ್ಯ ನೀರಿನ ಬವಣೆ ದೂರವಾಗುವಂತೆ ಮಾಡಿದೆ. ಇದು ಸ್ಥಳೀಯ ಜನರಲ್ಲಿ ರ‍್ಷ ಮೂಡಿಸಿದೆ ಎನ್ನುತ್ತಾರೆ ವನಿತಾ ಸಿಎಂ, ಕುಶಾಲನಗರ ನಿವಾಸಿ.
ಈ ಬಾರಿ ಅವಧಿಗೆ ಮೊದಲೇ ಜಿಲ್ಲೆಗೆ ಮುಂಗಾರು ಎಂಟ್ರಿ ಕೊಟ್ಟಿದೆ. ಜೂನ್ ಒಂದರಿಂದ ಮುಂಗಾರು ಅಧಿಕೃತವಾಗಿ ಅಬ್ಬರಿಸಲಾರಂಭಿಸುವ ನಿರೀಕ್ಷೆ ಇದೆ. ಕಳೆದ ರ‍್ಷ ಮಳೆಯೇ ಇಲ್ಲದೆ ಅಂರ‍್ಜಲ ಬರಿದಾಗಿದೆ. ಎಲ್ಲೆಡೆ ನೀರಿನ ಹಾಹಾಕಾರ ತಲೆದೋರಿತ್ತು. ಆದ್ರೆ ಈ ರ‍್ಷ ಉತ್ತಮ ಮಳೆಯ ನಿರೀಕ್ಷೆ ಇದ್ದು, ಕೊಡಗು ಜಿಲ್ಲೆ ಎಂದಿನ ಮಳೆಗಾಲದ ವೈಭವಕ್ಕೆ ಮರಳುವ ಸಂಭವವಿದೆ.