ಬೆಂಗಳೂರು: ನೈಋತ್ಯ ರೈಲ್ವೆ ಸುರಕ್ಷತಾ ದಳ 2024ರ ಏಪ್ರಿಲ್ನಲ್ಲಿ ಆಪರೇಷನ್ ’ನನ್ಹೆ ಫರಿಸ್ತೆಹ್ ಅಡಿಯಲ್ಲಿ 4 ಬಾಲಕಿಯರು ಸೇರಿದಂತೆ 22 ಮಕ್ಕಳನ್ನು ರಕ್ಷಿಸಿದೆ. ಆಪರೇಷನ್ “ನನ್ಹೆ ಫರಿಸ್ತೆಹ್” – ಕಳೆದುಹೋದ ಮಕ್ಕಳನ್ನು ರಕ್ಷಿಸುವ ಕಾರ್ಯವಾಗಿದೆ.
ಆಪರೇಷನ್ “ಉಪಲಬ್ಧ್” ಅಡಿಯಲ್ಲಿ ರೈಲ್ವೆ ಸುರಕ್ಷತಾ ದಳವು 24 ದಲ್ಲಾಳಿಗಳನ್ನು ಬಂಧಿಸಿದೆ. ಏಪ್ರಿಲ್ 2024 ರಲ್ಲಿ ಆರ್.ಪಿ.ಎಫ್ 3 ವ್ಯಕ್ತಿಗಳನ್ನು ಬಂಧಿಸಿ ಅವರಿಂದ 49 ಲಕ್ಷದ 90 ಸಾವಿರದ 500 ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಕೊಂಡಿದೆ.
ರೈಲ್ವೆ ಆಸ್ತಿ, ಪ್ರಯಾಣಿಕರ ಸಂಚಾರ ಪ್ರದೇಶ ಮತ್ತು ಪ್ರಯಾಣಿಕರ ಯೋಗಕ್ಷೇಮವನ್ನು ರಕ್ಷಿಸುವ ಬದ್ಧತೆಯಲ್ಲಿ ರೈಲ್ವೆ ಸುರಕ್ಷತಾ ಪಡೆ ಕಾರ್ಯನಿರ್ವಹಿಸುತ್ತಿದೆ. ಪ್ರಯಾಣಿಕರಿಗೆ ಸುರಕ್ಷಿತ, ಸುಭದ್ರ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸಲು ಪಡೆ ಹಗಲಿರುಳು ಶ್ರಮಿಸುತ್ತಿದೆ.
Facebook
Twitter
LinkedIn
Telegram
WhatsApp
Email
Print