ಸಂಡೂರು: ಬೆಂಗಳೂರಿನ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ “ಜನತಾ ಸಂಗಮ” ಮಿಷನ್-123 ಕಾರ್ಯಾಗಾರದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಘಟಕವಾರು ವಿಭಾಗಗಳ ಅಧ್ಯಕ್ಷರ ನೇಮಕ ಮತ್ತು ಸೇರ್ಪಡೆಯನ್ನು ಮಾಡಲಾಯಿತು ತಾಲೂಕಿನಲ್ಲಿ ಪಕ್ಷದ ಸಂಘಟನೆ ಕುರಿತು ವಿವರವಾಗಿ ಚರ್ಚಿಸಲಾಯಿತು ಎಂದು ತಾಲೂಕು ಅಧ್ಯಕ್ಷ ಎನ್ ಸೋಮಪ್ಪ ತಿಳಿಸಿದರು.ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಕಟ್ಟಲಾಗುತ್ತಿದೆ, ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲಿ ಯುವಕರಿಂದ ಹಿಡಿದು ಹಿರಿಯರ ತನಕ ಉತ್ತಮ ಪ್ರತಿಕ್ರಿಯೆ ದೊರೆತಿದೆ ಮುಂಬರುವ ಸಾರ್ವರ್ತಿಕ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಭೂತಪೂರ್ವವಾದ ಜಯವನ್ನು ಸಾಧಿಸುವುದು ಸತ್ಯ ಎಂದು ಹೇಳಿದರು.ಗಣಿಭಾದಿತ ರ ನೆರವಿಗೆ ಬರಬೇಕಾದ ಕೆಎಂಆರ್ ಸಿಯಲ್ಲಿ ಸಾವಿರಾರು ಕೋಟಿ ಹಣ ಇದೆ ಅದರ ಬಳಕೆಯಿಂದ ಹೈನುಗಾರಿಕೆ ಗುಡಿ ಕೈಗಾರಿಕೆ ಮಹಿಳಾ ಸ್ವಾವಲಂಬನೆ ಆರ್ಥಿಕ ನಿರ್ಮಾಣದ ಕಾರ್ಯಕ್ರಮಗಳು ಅನುಷ್ಠಾನಗೊಳಿಸಲು ಅವಕಾಶವಿದ್ದು ಜನಸಂಗ್ರಾಮ ಪರಿಷತ್ ನವರ ಜೊತೆ ನಾವುಗಳು ಸೇರಿಕೊಂಡು ಜನರ ನೆರವಿಗೆ ನೀಡಲಿದ್ದೇವೆ ಅದಲ್ಲದೆ 2018ರಲ್ಲಿ ಅಕ್ರಮ-ಸಕ್ರಮ ಹಾಗೂ ಬಗರ್ ಹುಕುಂ 9 ಸಾವಿರ ಅರ್ಜಿಗಳ ಇತ್ಯರ್ಥವಾಗಬೇಕಿದೆ ಜೊತೆಗೆ ತುಂಗಭದ್ರ ನೀರನ್ನು ತಾಲೂಕಿನ ಜನತೆಗೆ ನೀಡುವ ಯೋಜನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ಜೊತೆಗೆ ಚರ್ಚಿಸಲಾಗಿದೆ ಎಂದು ನುಡಿದರು.ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಕೆಲವೇ ದಿನಗಳಲ್ಲಿ ಸಂಡೂರಿಗೆ ಆಗಮಿಸಿ ತಾಲೂಕಿನ ನೂತನ ಕಚೇರಿ ಉದ್ಘಾಟನೆ ಜೊತೆಗೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸದಸ್ಯರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆಯ ಬೃಹತ್ ಸಮಾವೇಶಕ್ಕೆ ತಪ್ಪದೇ ಬರುವುದಾಗಿ ತಿಳಿಸಿದ್ದಾರೆ ಎಂದರು.ನೂತನವಾಗಿ ಪ್ರಾರಂಭವಾಗಿರುವ ಜೆಡಿಎಸ್ ಪಕ್ಷದ ಕಚೇರಿಯು ಪ್ರತಿದಿನ ಕ್ಷೇತ್ರದ ಸಾರ್ವಜನಿಕರ ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ಆಲಿಸಲು ಇರುತ್ತದೆ ಎಂದು ತಿಳಿಸಿದರು.
ಪಕ್ಷದ ನೂತನ ಘಟಕಗಳ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಖಾದರ್ ಭಾಷಾ-ಅಧ್ಯಕ್ಷರು ಯುವ ಜನತಾದಳ, ಆಶಾ ಸಿ-ಅಧ್ಯಕ್ಷರು ಮಹಿಳಾ ಯುವ ಘಟಕ, ಶಂಕ್ರಮ್ಮ-ಅಧ್ಯಕ್ಷರು ಮಹಿಳಾ ಘಟಕ, ಪ್ರಹ್ಲಾದ ನಲ್ಲಬಂಡೆ-ಅಧ್ಯಕ್ಷರು ವಿದ್ಯಾರ್ಥಿ ಘಟಕ, ಮೊಹಮದ್ ಯೂಸೂಫ್-ಅಧ್ಯಕ್ಷರು ಅಲ್ಪ ಸಂಖ್ಯಾತರ ಘಟಕ, ಧರ್ಮಾ ನಾಯ್ಕ್-ಅಧ್ಯಕ್ಷರು ರೈತ ಘಟಕ, ಮಲ್ಲೇಶ್ ಕಮತೂರ್-ಅಧ್ಯಕ್ಷರು ಪ.ಜಾ, ನೆಲ್ಲಕುದುರೆ ಮೂಕಪ್ಪ-ಅಧ್ಯಕ್ಷರು ಪ.ಪಂ, ಎಚ್ ನಾಗರಾಜ್-ಅಧ್ಯಕ್ಷರು ಹಿಂದುಳಿದ ವರ್ಗ, ಅನಂತ್ ಕುಮಾರ್ ಶೆಟ್ಟಿ-ನಿವೃತ್ತ ನೌಕರರ ವಿಬಾಗ, ಉಮರ್ ಪಾರುಕ್ ಎಸ್-ಅಧ್ಯಕ್ಷರು ಕಾನೂನು ಘಟಕ, ಎ. ವೈ. ಅಮಿತ್ ದೊರೆ-ಅಧ್ಯಕ್ಷರು ಮಾಹಿತಿ ತಂತ್ರಜ್ಞಾನ, ಪದ್ಮಶಾಲಿ ಹನುಮಂತಪ್ಪ- ಅಧ್ಯಕ್ಷರು ನೇಕಾರರ ವಿಬಾಗ, ಮೊಹಮದ್ ಶರಪ್-ಅಧ್ಯಕ್ಷರು ವೈದ್ಯಕೀಯ ವಿಬಾಗ, ಎನ್. ಶಿವಶಂಕರ-ಅಧ್ಯಕ್ಷರು ಕ್ರೀಡಾ ವಿಬಾಗ, ಸಿದ್ದೇಶ್-ಅಧ್ಯಕ್ಷರು ವಿಕಲಾ ಚೇತನ ವಿಬಾಗ, ಕುಮಾರಸ್ವಾಮಿ ತಬಲಾ-ಅಧ್ಯಕ್ಷರು ಸಾಂಸ್ಕೃತಿಕ ವಿಭಾಗ, ಮಾರೇಶ್ ಒಬಳಾಪುರ-ಅಧ್ಯಕ್ಷರು ಸೇವಾದಳ, ಅಬ್ಬಾಸ್ ಅಲಿ-ಅಧ್ಯಕ್ಷರು ಕೈಗಾರಿಕಾ ಉದ್ಯಮ, ಅಲ್ಲಾ ಭಕ್ಷಿ-ಅಧ್ಯಕ್ಷರು ತಾಂತ್ರಿಕ ವಿಬಾಗ, ಗಂಗಾಧರ ಎಚ್-ಅಧ್ಯಕ್ಷರು ಆ.ಸ.ಕ್ರೈಸ್ತ ವಿಬಾಗ, ಮಾರೇಶ್-ಅಧ್ಯಕ್ಷರು ಮೀನುಗಾರಿಕೆ ವಿಬಾಗ, ಕೆ ಮೊಹಮ್ಮದ್ ಸಾಬ್-ಅಧ್ಯಕ್ಷರು ಕಾರ್ಮಿಕ ವಿಬಾಗ, ಶಪಿಉಲ್ಲಾ-ಅಧ್ಯಕ್ಷರು ನಗರಘಟಕ, ಭೋವಿ ಪದ್ಮಣ್ಣ-ಅಧ್ಯಕ್ಷರು ಸಂಡೂರು ಹೋಬಳಿ ಘಟಕ, ಮೊಹಮ್ಮದ್ ಶಬ್ಬೀರ್ ಅಧ್ಯಕ್ಷರು ಅಲ್ಪಸಂಖ್ಯಾತ ಸಂಡೂರು ಹೋಬಳಿ, ಇವರುಗಳನ್ನು ಘೋಷಣೆ ಮಾಡಲಾಯಿತುಮುಖಂಡರುಗಳಾದ ಅನಂತ್ ಕುಮಾರ್ ಶೆಟ್ಟಿ, ಹೊನ್ನೂರಸಾಬ್ , ಹನುಮಂತಪ್ಪ ಬಂಡ್ರಿ, ಪ್ರದಾನ ಕಾರ್ಯದರ್ಶಿಗಳಾದ ಕೆ.ಕೆ.ಮೆಹಬೂಬ್ ಬಾಷಾ,ಸೈಯ್ಯದ್ ಹುಸೇನ್ ಪೀರಾ ದೊಡ್ಡಮನೆ,ಕುರೆಕುಪ್ಪ ಲಿಂಗಪ್ಪ, ಈರಪ್ಪ, ಕೃಷ್ಣನಗರ ತಿಮ್ಮಪ್ಪ, ಚೋರನೂರು ಪರಶುರಾಮ, ದೌಲತ್ ಪುರ ನಜೀರ್, ಅಲ್ಲಾಭಕ್ಷಿ, ಶಬ್ಬೀರ್ ಸಾಬ್, ಬಂಡ್ರೆಪ್ಪ, ಮಾರೆಪ್ಪ, ಎಚ್ ಹಸೇನ್ ಸಾಬ್, ಹೊನ್ನೂರ ಸಾಬ್, ಮಲ್ಲೇಶ್ ಕಮತೂರ್, ಪದ್ಮಣ್ಣ ಭೋವಿ, ಖಾದರ್ ಬಾಷಾ ಚೋರನೂರು, ಶಪಿ ಸಂಡೂರು, ಯೂಸೂಫ್ ಯಶವಂತನಗರ,ಮಾರೆಪ್ಪ ದೌಲತ್ ಪುರ,ವಿಜಯನಗರ ಜಿಲ್ಲಾ ಮುಖಂಡ ಶ್ರೀಕಾಂತ್ ಬಡಿಗೇರ್ ಹಾಗೂ ಪಕ್ಷದ ಹಿರಿಯ ಮುಖಂಡರು ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.