ರಿಯಲ್ ಸ್ಟಾರ್ ರಿಲೀಸ್ ಮಾಡಿದ ’ಓ ಮೈ ಲವ್’ ಮೆಲೋಡಿ ಗೀತೆಗೆ ಪ್ರೇಕ್ಷಕ ಪಿಧಾ!

ಬೆಂಗಳೂರು : ನಿರ್ದೇಶಕ ಸ್ಮೈಲ್ ಶ್ರೀನು ಆಕ್ಷನ್-ಕಟ್ ಹೇಳಿರುವ ’ಓ ಮೈ ಲವ್’ ಸಿನಿಮಾ ಇದೀಗ ಸುದ್ದಿಯಲ್ಲಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಸುಂದರವಾದ ಗೀತೆಯೊಂದನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಹೌದು ಓ ಮೈ ಲವ್ ಚಿತ್ರದ ಮೆಲೋಡಿ ಗೀತೆಯಾದ ’ಏನಾಯ್ತೋ ಕಾಣೆ …’ ಲಿರಿಕಲ್ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕ ಸ್ಮೈಲ್ ಶ್ರೀನು ’ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿ ಸಂಗೀತ ನಿರ್ದೇಶಕರು ಈ ಹಾಡಿನ ಟ್ಯೂನ್ ಕಳುಹಿಸಿಕೊಟ್ಟರು. ಅದನ್ನು ಕೇಳುತ್ತಿದ್ದ ಹಾಗೆ ರೋಮಾಂಚನವಾಯಿತು. ಪಲ್ಲವಿ ಚೆನ್ನಾಗಿದೆ. ಚರಣ ಬದಲಾವಣೆ ಮಾಡೋಣವೆಂದು ಹೇಳಲಾಯಿತು. ನಂತರ ಎರಡು ದಿವಸದಲ್ಲೆ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಚರಣ ಕೊಟ್ಟರು.

ಅನುರಾಧ ಭಟ್-ನಿಚರಾಜನ್ ಧ್ವನಿಯಾಗಿದ್ದಾರೆ. ಗೀತೆಗೆ ಎಲ್ಲಾ ಕಡೆಯಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದ್ದು, ಹಾಡಿನ ಪ್ರೋಮೋ ನೋಡಿ ಎಲ್ಲರು ಖುಷಿಯಾಗಿದ್ದಾರೆ. ಪೂರ್ತಿ ಹಾಡನ್ನು ಬಿಡುಗಡೆ ಮಾಡಿಲ್ಲ. ಈಗ ನೋಡಿದ್ದು ಶೇಕಡ ಐದರ? ಮಾತ್ರ. ಬಾಕಿ ಶೇಕಡ ೯೫ರ? ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜಾನೇ ಬೇರೆ ಇರುತ್ತದೆ. ಹಾಡನ್ನು ಬೂಸ್ಟ್ ಮಾಡಿಲ್ಲ. ನಿಜವಾಗಿ ನೋಡಲೆಂದು ಬಿಡಲಾಗಿದೆ. ಗೀತೆಯನ್ನು ಅನಾವರಣಗೊಳಿಸಿದ್ದಕ್ಕೆ ವಿಶೇ?ವಾಗಿ ಉಪ್ಪಿ ಸರ್‌ಗೆ ಥ್ಯಾಂಕ್ಸ್ ಹೇಳಬೇಕು’ ಎಂದರು. ಜಿಸಿಬಿ ಪ್ರೊಡಕ್ಷನ್ ಲಾಂಛನದಲ್ಲಿ ಸಿದ್ದಗೊಂಡಿರುವ ಹೊಸ ಥರದ ನಿರೂಪಣೆ ಒಳಗೊಂಡ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಿಸಿದ್ದಾರೆ ಜಿ.ರಾಮಾಂಜಿನಿ. ’ನನಗೆ ಚಿಕ್ಕಂದಿನಿಂದಲೂ ಚಿತ್ರ ಮಾಡಬೇಕೆಂಬ ಬಯಕೆ ಇತ್ತು. ಅದು ಈಗ ಈಡೇರಿದೆ. ಉಪೇಂದ್ರ ಸರ್ ನಮ್ಮ ಸಾಂಗ್ ಲಾಂಚ್ ಮಾಡಿ ಕೊಟ್ಟು ಒಳ್ಳೆ ಸಾಂಗ್ ಮಾಡಿದ್ದಿರಾ ಎಂದು ಹೇಳಿದ್ದಾರೆ. ಫ್ಯಾಮಿಲಿ, ಮನರಂಜನೆ, ಲವ್, ರೋಮ್ಯಾಂಟಿಕ್ ಹಾಗೂ ಆಕ್ಷನ್ ಅಂಶ ಒಳಗೊಂಡ ಸಿನಿಮಾ ಇದು.

ಒಳ್ಳೆ ರೀತಿಯಿಂದ ಸಿನಿಮಾ ಮಾಡಿದ್ದು, ಶಿಘ್ರದಲ್ಲೇ ಸಿನಿಮಾ ರಿಲೀಸ್ ಮಾಡಲಿದ್ದೇವೆ’ ಎಂಬುದು ನಿರ್ಮಾಪಕರ ಮಾತು. ’ಉಪ್ಪಿ ಸರ್ ಅಭಿಮಾನಿಯಾದ ನಾನು ಮೊದಲ ಚಿತ್ರದ ಮೆಲೋಡಿ ಸಾಂಗ್ ಅವರಿಂದಲೇ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ನಾವು ಕೇಳಿದ ತಕ್ಷಣ ’ಕಬ್ಜಾ’ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ಹಾಡನ್ನು ವೀಕ್ಷಿಸಿ ಶುಭ ಹಾರೈಸಿದರು’ ಎಂದು ನಾಯಕ ಅಕ್ಷಿತ್ ಶಶಿಕುಮಾರ್ ಹೇಳಿದರು. ಮತ್ತೋರ್ವ ನಟ ಪೃಥ್ವಿರಾಜ್ ’ನಮ್ಮ ಮೂರು ಪಾತ್ರಗಳ ಮೇಲೆ ಸಿನಿಮಾ ಸಾಗುತ್ತದೆ. ನನ್ನ ಪಾತ್ರಕ್ಕೆ ಎಲ್ಲಾ ಅಂಶಗಳು ಇವೆ. ಇದು ನಂಗೆ ೨ನೇ ಸಿನಿಮಾ. ಚಿತ್ರದ ನನ್ನ ಪಾತ್ರಕ್ಕೂ ಕೂಡ ಪೃಥ್ವಿರಾಜ್ ಹೆಸರು ಇರುತ್ತದೆ’ ಎನ್ನುವರು. ಇನ್ನು ನಾಯಕಿ ಕೀರ್ತಿ ಕಲ್ಕೇರಿ ಹೆಚ್ಚೇನು ಮಾತನಾಡಲಿಲ್ಲ. ನಿರ್ಮಾಪಕರ ಸಹೋದರ ರಾಘವೇಂದ್ರ ’ಇದು ಆಕ್ಷನ್, ಲವ್, ಫ್ಯಾಮಿಲಿ ಕಥೆ ಒಳಗೊಂಡ ಸಿನಿಮಾ. ಅಣ್ಣ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ಮಾಡುವ ಕನಸು ಕಂಡಿದ್ದರು.

ಸದ್ಯ ರಿಚ್ ಆಗಿ ಬಂದ ಸಾಂಗ್ ಬಂದಿದ್ದು, ಸಿನಿಮಾವನ್ನು ರಿಚ್ ಆಗಿ ಮಾಡಲಾಗಿದೆ. ನಿರ್ದೇಶಕರು ತುಂಬಾ ಶ್ರಮ ಹಾಕಿ ಈ ಸಿನಿಮಾ ಮಾಡಿದ್ದಾರೆ’ ಎನ್ನುವರು. ಇದೇ ಸಂದರ್ಭದಲ್ಲಿ ನಿರ್ಮಾಪಕರ ಭಾವಮೈದ ರಾಮಕೃ? ಕೂಡ ಸಿನಿಮಾ ಬಗ್ಗೆ ಮಾತನಾಡಿದರು. ಚರಣ್ ಅರ್ಜುನ್ ಸಂಗೀತ, ಹಾಲೇಶ್.ಎಸ್ ಛಾಯಾಗ್ರಹಣ, ಡಿ.ಮಲ್ಲಿ ಸಂಕಲನ, ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರವನ್ನು ಬೆಂಗಳೂರು, ಓರ್ಚ, ಭೂಪಾಲ್, ಕಜರಾಬ್ ಸೇರಿದಂತೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾರಗಣದಲ್ಲಿ ದೇವಗಿಲ್, ಎಸ್.ನಾರಾಯಣ್, ಸಾಧುಕೋಕಿಲ, ಪವಿತ್ರ ಲೋಕೇಶ್, ಪೃಥ್ವಿ, ಲಿಂಗರಾಜ್, ಸುವೇದ, ಅಕ್ಷತ, ಟೆನ್ನಿಸ್ ಕೃ? ಮುಂತಾದವರು ಇದ್ದಾರೆ.

Leave a Comment

Your email address will not be published. Required fields are marked *

Translate »
Scroll to Top