ಕಾಲ ಭೈರವ ನುಂಕೇಮಲೆ ಸಿದ್ದೇಶ್ವರ ಸ್ವಾಮಿಗಳ ರಾಥೋತ್ಸವ ಮತ್ತು ಸಿಡಿ ಉತ್ಸವ

ಮೊಳಕಾಲ್ಮುರು : ತಾಲ್ಲೂಕಿನ ಕಾಲ ಭೈರವ ನುಂಕೇಮಲೆ ಸಿದ್ದೇಶ್ವರ ಸ್ವಾಮಿಗಳ ರಾಥೋತ್ಸವ ಮತ್ತು ಸಿಡಿ ಉತ್ಸವ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರತಿ ವರ್ಷದ ಪದ್ಧತಿಯಂತೆ ಕೊಮ್ಮಾನಪಟ್ಟಿಯ ಗ್ರಾಮಸ್ಥರು ಸಿಡಿ ಉತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಡಿ ಉತ್ಸವವನ್ನು ಸಾವಿರಾರು ಭಕ್ತರು ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದು ವೀಕ್ಷಣೆ ಮಾಡಿದರು ಹೊರ ತಾಲ್ಲೂಕಗಳಾದ ಚಳ್ಳಕೆರೆ ಚಿತ್ರದುರ್ಗ ರಾಯದುರ್ಗ ಕಲ್ಯಾಣ ದುರ್ಗ ಕೂಡ್ಲಿಗಿ ಸಂಡೂರ್ ಬಳ್ಳಾರಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಎಲ್ಲಾ ಗ್ರಾಮಗಳಿಂದ ಭಾಗವಹಿಸಿ ಸಂತೋಷ ಪಟ್ಟು ನುಂಕೇಮಲೆ ಸಿದ್ದೇಶ್ವರ ಸ್ವಾಮಿಗಳ ಧರ್ಶನ ಪಡೆದರು. ಸಂದರ್ಭದಲ್ಲಿ ಪಕ್ಷತೀತವಾಗಿ ಗುತ್ತಿಗೆದಾರರು ಪರಮೇಶ್ವರ್, ಶ್ರೀರಾಮುಲು ಆಪ್ತರು ಪಾಪೇಶ್, ದಿಲೀಪ್, ಡಾ ಮಂಜುನಾಥ್ ಹಾಗೂ ತಾಲ್ಲೂಕಿನ ಎಲ್ಲಾ ಮುಖಂಡರು ಭಾಗವಹಿದ್ದರು.

Leave a Comment

Your email address will not be published. Required fields are marked *

Translate »
Scroll to Top