ಕುಷ್ಟಗಿ:- ಒಬ್ಬ ಈ ಸಮಾಜದಲ್ಲಿ ಮನುಷ್ಯ ಮನುಷ್ಯ ನಾಗಿ ಬಾಳಬೇಕು ಎನ್ನುವದು ಮಹರ್ಷಿ ವಾಲ್ಮೀಕಿಯ ಉದ್ದೇಶವಾಗಿತ್ತೆಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ. ಕರ್ನಾಟಕ ಸರಕಾರ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಪುರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕುಷ್ಟಗಿ ಇವರ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ರಾಮಯಣ ಮಾಹಾ ಭಾರತವನ್ನು ನಮ್ಮ ಇಡಿ ದೇಶಾದ್ಯಂತ ಪೂಜಿಸುತ್ತಾರೆ. ಅಂತಹ ವಾಲ್ಮೀಕಿ ಬರೆದಂತಹ ರಾಮಾಯಣವನ್ನು ಈ ದೇಶದ ಯುವಕರಿಗೆ ಸ್ಪೂರ್ತಿದಾಯಕವಾಗಬೇಕಾಗಿದೆ ಎಂದರು. ಆದರೆ ಯಾವುದೇ ವ್ಯಕ್ತಿ ಇರಲಿ ಸಮಾಜದಲ್ಲಿ ಸದೃಢ ಸಮಾಜವನ್ನು ಕಟ್ಟಬೇಕಾದರೆ ಹಿರಿಯರ ಮಾರ್ಗದರ್ಶನ ಮತ್ತು ಗುರುವಿನ ಅನುಗ್ರಹ ಇದ್ದಾಗ ಮಾತ್ರ ಸದೃಢ ಸಮಾಜವನ್ನು ಕಟ್ಟಲು ಸಾದ್ಯ.
ಶ್ರೀ ವಾಲ್ಮೀಕಿಯು ಕಾಡಿನಲ್ಲಿ ಗುರುವಿನ ಅನುಗ್ರಹ ದೊರೆತಾಗ ಶ್ರೀವಾಲ್ಮೀಕಿಯು ರಾಮಾಯಣ ಚರಿತ್ರೆ ಬರೆದು ಸಮಾಜದ ಒಳಿತಿಗಾಗಿ ಸ್ಪೂರ್ತಿದಾಯಕರಾಗಿ ಈ ನಾಡಿನ ಮಹಾತ್ಮರಾಗಿ ಈ ಭಾರತ ದೇಶಕ್ಕೆ ಒಳ್ಳೆಯ ಸಂದೇಶ ನೀಡಿ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ ಆದ್ದರಿಂದ ಯುವಕರು ಶ್ರೀರಾಮ ಲಕ್ಷ್ಮಣರಂತೆ ಸದೃಢ ಸಮಾಜ ಕಟ್ಟಬೇಕಾದರೆ ಹಿರಿಯರ ಮಾರ್ಗದರ್ಶನದಲ್ಲಿ ನಡೆದು ವಾಲ್ಮೀಕಿ ಬರೆದಿರುವ ಶ್ರೀರಾಮ ತತ್ವವನ್ನು ಅಳವಡಿಸಿಕೊಂಡು ಪ್ರತಿಯೊಬ್ಬರು ಸದೃಢ ಸಮಾಜವನ್ನು ಕಟ್ಟಬೇಕಾಗಿದೆ.ಜೀವನದಲ್ಲಿ ಒಬ್ಬನಿಗೆ ಒಳ್ಳೆಯದನ್ನು ಮಾಡಬೇಕಾದರೆ ಯುವಕರು ರಾಮಯಣ ಮಾಹಾಭಾರತ ಓದಬೇಕು. ಶ್ರೀ ರಾಮಾಯಣ ಚರಿತ್ರೆ ಯುವಕರಿಗೆ ಸ್ಪೂರ್ತಿದಾಯಕ ಎಂದು ಹೇಳಿದರುಕಾರ್ಯಕ್ರಮವನ್ನು ಕುರಿತು ಗವಿಸಿದ್ದೇಶ್ವರ ಪ್ರೌಡ ಶಾಲೆ ಸಹ ಶಿಕ್ಷಕ ಆರ್.ಕೆ ಸುಭೇದಾರ್ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಭಾರತಿ ನೀರಲಗೇರಿ, ಮಾಲತಿ ನಾಯಕ, ಸಿ.ಪಿ.ಐ ನಿಂಗಪ್ಪ ರುದ್ರಪ್ಪಗೋಳ್, ಜೆ.ಡಿ.ಎಸ್.ಪಕ್ಷದ ರಾಜ್ಯ ಸಂಘಟನೆ ಕಾರ್ಯದರ್ಶಿ ಸಿ.ಎಂ ಹಿರೇಮಠ, ತಹಶೀಲ್ದಾರ ಎಂ.ಸಿದ್ದೇಶ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ.ಕೆ. ಹಿರೇಮಠ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ಬಿ.ಇ.ಓ ಚನ್ನಬಸಪ್ಪ ಮಗ್ಗದ್, ತಾಲೂಕು ಪಂಚಾಯತ ಇಒ ಜಯರಾಂ ಚವ್ಹಾಣ,ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಪಿ.ಎಸ್.ಐ ತಿಮ್ಮಣ್ಣ ನಾಯಕ, ಫಕೀರಪ್ಪ ಚಳಗೇರಿ ವಕೀಲರು, ಪುರಸಭೆ ಸದಸ್ಯರಾದ ಅಂಬಣ್ಣ ಭಜೇಂತ್ರಿ, ಮೈಬುಸಾಬ ಕಮ್ಮಾರ, ಮಾಹಾಂತೇಶ ಕಲಬಾವಿ, ಬಸವರಾಜ ಬುಟಕುಂಟಿ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಶೈಲ ಸೋಮನಕಟ್ಟಿ, ವಾಲ್ಮೀಕಿ ಸಮಾಜದ ಬಸವರಾಜ ನಾಯಕ, ರಮೇಶ ಕೊನಸಾಗರ, ಈರಪ್ಪ ನಾಯಕ, ರಮೇಶ ಕೊಳ್ಳಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.