ರಾಜ್ಯೋತ್ಸವ ಹಿನ್ನೆಲೆ: ನಾಡು ರಕ್ಷಣೆಗೆ ದುಡಿದ ನಿವೃತ್ತ ಯೋಧರಿಗೆ ಗೌರವ ಸಲ್ಲಿಕೆ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶ ರಕ್ಷಣೆಗೆ ಹೋರಾಟ ಮಾಡಿದ ನಾಡಿನ ನಿವೃತ್ತ ಯೋಧರನ್ನು ಕರುನಾಡ ಜನಸ್ಪಂದನಾ ವೇದಿಕೆಯಿಂದ ಗೌರವಿಸಲಾಯಿತು.

 

ನಯನ ಸಭಾಂಗಣದಲ್ಲಿ ವೇದಿಕೆ ಐದನೇ ವರ್ಷದ ವಾರ್ಷಿಕ ಸಮಾರಂಭದ ಅಂಗವಾಗಿ ನಿವೃತ್ತ ಯೋಧರು, ಶಿಕ್ಷಕರು, ಕಲಾವಿದರು, ಸಮಾಜಸೇವಕರು, ಹೋರಾಟಗಾರರನ್ನು ಸನ್ಮಾನಿಸಿ ಮಾತನಾಡಿದ ಕೋಲಾರ ಡಿವೈಎಸ್ಪಿ ರಮೇಶ್, ಯುದ್ಧ ಮತ್ತು ಶಾಂತಿಕಾಲದಲ್ಲಿ ಜನರ ರಕ್ಷಣೆಗೆ ಸೇವೆ ಸಲ್ಲಿಸುವ ಯೋಧರ ಕೊಡುಗೆ ಅನನ್ಯ ಎಂದು ಹೇಳಿದರು.

ಪತ್ರಕರ್ತ ವಿ.ನಂಜುಂಡಪ್ಪ ಮಾತನಾಡಿ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ. ಈ ಬಾರಿ ರಾಜ್ಯೋತ್ಸವವನ್ನು ವರ್ಷ ಪೂರ್ತಿ ಆಚರಿಸುತ್ತಿದ್ದು, ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ಎಂದರು.

 

ಈ ಸಂದರ್ಭದಲ್ಲಿ 80ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ನಟರಾದ ಗಣೇಶ್ ರಾವ್, ಭಾಗ್ಯಶ್ರೀ, ಹಿರಿಯ ಹೋರಾಟಗಾರರಾದ ನಾಗಲೇಖ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top