ರಾಯಚೂರು , ಮಾ,19 : ರಾಯಚೂರು ನಗರದಲ್ಲಿ ಏಕಾಏಕಿಯಾಗಿ ಸುರಿದ ಮಳೆಯಿಂದ ಜನರು ಪರದಾಡುವಂತಾಗಿತ್ತು. ಬಿರುಗಾಳಿ, ಗುಡುಗು, ಮಿಂಚು ಸಹಿತ 1ತಾಸಿನ ವರೆಗೆ ಮಳೆ ಸುರಿದಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆದು ಹಾಕಿ ಕೊಡಿರುವ ಸೆಡ್ ಗಳು, ಛತ್ರಿ, ಮತ್ತು ರಸ್ತೆಯಲ್ಲಿ ಹಾಕಿರುವ ಪೋಲಿಸರ ಬ್ಯಾರಿಕೇಡ್ ಗಳು ಗಾಳಿಗೆ ಮುಗುಚಿ ಬಿದ್ದಿವೆ. ಅಲ್ಲದೇ ಚರಂಡಿಗಳು ತುಂಬಿ ಹರಿದಿದ್ದು, ಸಂಚಾರಕ್ಕೆ ತೋಂದರೆ ಉಂಟಾಗಿತ್ತು.
ಕಳೆದ ನಾಲ್ಕೂ ಐದು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳಕ್ಕೆ ರಾಯಚೂರಿನ ಜನ ಸುಸ್ತಾಗಿ ಹೋಗಿದ್ದರು. ಇಂದು ನಾಲ್ಕು ಗಂಟೆಯಿಂದ ಐದು ಗಂಟೆಯವರೆ ಸುರಿದ ಬಾರಿ ಮಳೆಯಿಂದ ತಪ್ಪಾದ ವಾತವರಣ ಸೃಷ್ಟಿ ಯಾಗಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ.