ರಾಯಚೂರು, ಮಾ, 7 : 371(ಜೆ)ಕಲಂ ಪ್ರಶ್ನಿಸಿ ಅದನ್ನು ರದ್ದುಪಡಿಸುವಂತೆ ನವೋದಯ ಶಿಕ್ಷಣ ಸಂಸ್ಥೆ ಯ ಎಸ.ಆರ್. ರೆಡ್ಡಿ ಹೈಕೊರ್ಟಗೆ ಹೋಗಿದ್ದು ಅದನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ 371(ಜೆ) ಅನುಷ್ಠಾನ ಹೋರಾಟ ಸಮಿತಿ ರಾಯಚೂರು ಬಂದ್ ಗೆ ಕರೆನೀಡಿದ್ದು ಬಂದ್ ಯಶಸ್ವಿ ಯಾಗಿತ್ತು. ರಾಯಚೂರು ಬಂದ್ ಗೆ ಹಲವು ಕನ್ನಡ ಪರ ಸಂಘಟನೆಗಳು, ದಲಿತಪರ ಮತ್ತು ಎಲ್ಲಾ ಪಕ್ಷದ ಮುಂಖಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷಾತೀತವಾಗಿ ಹೋರಾಟಮಾಡುವ ಮುಲಕ ನವೋದ ಶಿಕ್ಷಣ ಸಂಸ್ಥೆ ಗೆ ಎಚ್ಚರಿಕೆ ನೀಡಿದರು. ಶಾಲಾ ಕಾಲೇಜು, ಪೆಟ್ರೋಲ್ ಬಂಕ್, ತರಕಾರಿ ಮಾರುಕಟ್ಟೆ, ಅಂಗಡಿ ಮುಗ್ಗಟುಗಳು ಬಂದಾಗಿದ್ದವು, ಕೆಲ ವ್ಯಾಪಾರಸ್ತರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚುವ ಮೂಲಕ ಹೋರಟಕ್ಕೆ ಬೆಂಬಲಸೂಚ್ಚಿದರು. ಬಸ್ ಸಂಚಾರ ಸ್ಥಗಿತಗೋಳಿಸಿದ್ದರಿಂದ ಬಸ್ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿತು. ಇನ್ನು ರಾಯಚೂರು ಬಂದ್ ಗೋತ್ತಿಲ್ಲದೆ ಆಗಮಿಸಿದ ಕಾಲೇಜಿನ ವಿದ್ಯಾಯ, ಪ್ರಯಾಣಿಕರು ಬಸ್ ಇಲ್ಲದೆ ಇರುವುದರಿಂದ ಪರದಾಡಿದರು. ಆಸ್ಪತ್ರೆ, ಮೆಡಿಕಲ್ ಗಳು ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಮುಗ್ಗಟ್ಟು ಗಳು ಬಂದಾಗಿದ್ದವು, ಬಟದಟೆಯ ಬಜಾರ, ಸರಾಫ್ , ಪಟೇ ರಸ್ತೆಯಲ್ಲಿ ಅಂಗಡಿಗಳು ಬಂದಾಗಿದ್ದವು.
ಹೋರಾಟಗಾರರು ಸುಪರ್ ಮಾರ್ಕೆಟ್ ಹತ್ತಿರ ಕುಳಿತು ನವೋದ ಶಿಕ್ಷಣ ಸಂಸ್ಥೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಬದಲ್ಲಿ ಮಾತನಾಡಿದ ೩೭೧ಜೆ ಹೋರಾಟ ಸಮಿತಿಯ ಸಂಚಾಲಕ ಮಾತನಾಡಿ ೩೭೧ ಜೆ ವಿರುದ್ದ ನಾನು ಕೋರ್ಟಗೆ ಹೋಗಿಲ್ಲ ಎಂದು ಪತ್ರಿಕೆ ಗಳಲ್ಲಿ ಜಾಹಿರಾತು ಕೊಡುವುದರ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದು ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ನಾವು ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಕೂಡಲೇ ದಾವೆಯನ್ನು ಹಿಂಪಡೆಯದಿದ್ದರೆ ಹಂತ ಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.