ಬಳ್ಳಾರಿ: ರಾಜ್ಯ ಮತ್ತು ಜಿಲ್ಲಾ ರಾಘವ ಪ್ರಶಸ್ತಿಯನ್ನು ನೀಡುವಲ್ಲಿ ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ. ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡದೆಯೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಭಿನಯ ಕಲಾ ಕೇಂದ್ರ ಅಧ್ಯಕ್ಷ ಜಗದೀಶ್ ಆರೋಪ ಮಾಡಿದರು.
ನಗರದ ಶ್ರೀ ಮುಂಡ್ಲೂರು ರಾಮಪ್ಪ ಸಭಾಂಗಣದ ಸ್ನೇಹ ಸಂಪುಟದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಘವ ಪ್ರಶಸ್ತಿಯನ್ನು ಪಡೆಯಲು ಸುಮಾರು 20 ವರ್ಷಗಳು ರಂಗಭೂಮಿಯ ಕಾರ್ಯಕ್ರಮದಲ್ಲಿ ನಿರತರಾಗಿರಬೇಕು. ಸುಮಾರು 50 ವರ್ಷ ವಯಸ್ಸಾಗಿರಬೇಕು. ಆಲ್ಲದೆ ಸ್ಥಳೀಯರು ಆಗಿರಬೇಕು ಎಂಬ ನಿಯಮಗಳಿದ್ದರೂ ಸಹ ಇದ್ಯಾವುದನ್ನು ಪಾಲಿಸದೇ, ಬೈಲಾವನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಆರೋಪಿಸಿದರು.
ಹಾಲಿ ಅಧ್ಯಕ್ಷ ಚನ್ನಪ್ಪ, ಕೋಟೇಶ್ವರ ರಾವ್, ಧನುಂಜಯ ಸೇರಿದಂತೆ ಹಲವು ಪದಾಧಿಕಾರಿಗಳಿಂದ ಇಂದು ರಾಘವ ಟ್ರಸ್ಟ್ ಹಳ್ಳ ಹಿಡಿಯುತ್ತಿದೆ. ರಾಘವ ಪ್ರಶಸ್ತಿಯನ್ನು ಇಂದು ನಾಮಕಾವಸ್ತೆಯ ಕಲಾವಿದರಿಗೆ ನೀಡುತ್ತಿದ್ದಾರೆ. ಯೋಗ ನಟರಾಜ್ ಸೇರಿದಂತೆ ಹಲವು ಅಯೋಗ್ಯ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಅರ್ಹತೆ ಹೊಂದಿರುವ ಹಲವು ಕಲಾವಿದರು ಅರ್ಜಿ ಸಲ್ಲಿಸಿದರೂ ತಿರಸ್ಕೃತ ಮಾಡುತ್ತಿದ್ದಾರೆ. ನಿಜವಾದ ಕಲಾವಿದರಿಗೆ ಪ್ರಶಸ್ತಿ ದೊರೆಯುತ್ತಿಲ್ಲ ಎಂದು ಅಭಿನಯ ಕಲಾ ಕೇಂದ್ರ ಅಧ್ಯಕ್ಷರಾದ ಜಗದೀಶ್ ಆರೋಪಿಸಿದರು.