ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಆರ್ ಅಶ್ವಿನ್ : ಲೇಡಿ ಅಂಪೈರ್ ಜೊತೆ ಜಗಳ !

ಇಂಡಿಯನ್ ಆಟಗಾರ ಆರ್ ಅಶ್ವಿನ್ ತಮಿಳುನಾಡು ಪ್ರೀಮಿಯರ್ ಲೀಗ್ ಒಂದರಲ್ಲಿ ಬಾಗಿ !

Kannada Nadu
ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಆರ್ ಅಶ್ವಿನ್ : ಲೇಡಿ ಅಂಪೈರ್ ಜೊತೆ ಜಗಳ !

ಇಂಡಿಯನ್ ಆಟಗಾರ ಆರ್ ಅಶ್ವಿನ್ ತಮಿಳುನಾಡು ಪ್ರೀಮಿಯರ್ ಲೀಗ್ ಒಂದರಲ್ಲಿ ಬಾಗಿ !

ಮಂಕಡಿಂಗ್ ಗೆ ವಿಶ್ವಖ್ಯಾತರಾಗಿರುವ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದೀಗ ಮಹಿಳಾ ಅಂಪೈರ್ ಅವರ ಜೊತೆ ಮೈದಾನದಲ್ಲಿ ಜಗಳವಾಡಿರುವ ಘಟನೆ ನಡೆದಿದೆ. ಇದು ನಡೆದಿರುವುದು ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಪಂದ್ಯದಲ್ಲಿ. ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕರಾಗಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಎಲ್ ಬಿಡಬ್ಲ್ಯೂ ತೀರ್ಪು ನೀಡಿದ್ದನ್ನು ವಿರೋಧಿಸಿ ಅವರು ವಾದಿಸಿದರು. ಅಂಪೈರ್ ತನ್ನ ತೀರ್ಪು ಬದಲಿಸದಾಗ ಕೋಪಗೊಂಡ ಅವರು ಬ್ಯಾಟಿನಿಂದ ಪ್ಯಾಡಿಗೆ ಹೊಡೆಯುತ್ತಾ ಮೈದಾನದಿಂದ ಹೊರನಡೆದಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೈಲೈಟ್ಸ್‌:

ತಮಿಳುನಾಡು ಪ್ರೀಮಿಯರ್ ಲೀಗ್ (TNPL) 2025 ರಲ್ಲಿ ದಿಂಡಿಗಲ್ ಡ್ರಾಗನ್ಸ್ ಪರ ಆಡುತ್ತಿರುವ ರವಿಚಂದ್ರನ್ ಅಶ್ವಿನ್
ಮಹಿಳಾ ಅಂಪೈರ್ ಕೃತಿಕಾ ನೀಡಿದ LBW ತೀರ್ಪಿಗೆ ವಿರುದ್ಧವಾಗಿ ವಾದ ನಡೆಸಿದ ಟೀಂ ಇಂಡಿಯಾ ಮಾಜಿ ಸ್ಪಿನ್ನರ್
ಈ ವೇಳೆ ಅಂಪೈರ್ ತೀರ್ಪು ಬದಲಿಸದ್ದರಿಂದ ಅಶ್ವಿನ್ ಅವರು ಸಿಟ್ಟಿನಿಂದ ಪೆವಿಲಿಯನ್ ಗೆ ಮರಳಿದ ವಿಡಿಯೋ ವೈರಲ್

ಟೀಂ ಇಂಡಿಯಾ ಮಾಜಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಇದೀಗ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್ (TNPL) 2025 ರಲ್ಲಿ ಅವರು ಮಹಿಳಾ ಅಂಪೈರ್ ನೀಡಿದ ತೀರ್ಪನ್ನು ವಿರೋಧಿಸಿ ವಾದ ಮಾಡಿದ್ದು ಅದರ ವಿಡಿಯೋ ಇದೀಗ ವೈರಲ್ ಆಗಿದೆ.

ಕೊಯಮತ್ತೂರಿನ ಎಸ್ಎನ್ಆರ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಭಾನುವಾರದಂದು ನಡೆದ ಡಿಂಡಿಗಲ್ ಡ್ರಾಗನ್ಸ್ ಮತ್ತು ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕರಾಗಿರುವ ರವಿಚಂದ್ರನ್ ಅಶ್ವಿನ್ ಅವರು ಇನ್ನಿಂಗ್ಸ್ ಆರಂಭಿಸಿದರು. ಆದರೆ ಆರ್. ಸಾಯಿ ಕಿಶೋರ್ ಬೌಲಿಂಗ್ ನಲ್ಲಿ ಕೇವಲ 18 ರನ್ ಗಳಿಸಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು. ಆದರೆ ಮೈದಾನದಲ್ಲಿದ್ದ ಲೇಡಿ ಅಂಪೈರ್ ಕೃತಿಕಾ ಅವರು ನೀಡಿದ LBW ನಿರ್ಧಾರವನ್ನು ಅಶ್ವಿನ್ ಒಪ್ಪಿಕೊಳ್ಳಲಿಲ್ಲ. ಈ ಸಂದರ್ಭದಲ್ಲಿ ಅವರು ಅಂಪೈರ್ ಜತೆ ವಾಗ್ವಾದಕ್ಕಿಳಿದರು. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದ ಅರ್ಧದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದ 38ರ ಹರೆಯದ ಅಶ್ವಿನ್ ಐಪಿಎಲ್ ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಆದರೆ ಆಡಿದ ಒಂಬತ್ತು ಪಂದ್ಯಗಳಲ್ಲಿ 40.42 ಸರಾಸರಿಯಲ್ಲಿ ಕೇವಲ ಏಳು ವಿಕೆಟ್ ಮಾತ್ರ ಪಡೆಯುವಲ್ಲಿ ಸಫಲರಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೇ ಸ್ಥಾನಿಯಾಗಿ ಟೂರ್ನಿ ಮುಗಿಸಿದ್ದರ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದರು.ಏನಿದು ಘಟನೆ?
ದಿಂಡಿಗಲ್ ಡ್ರಾಗನ್ಸ್ ಮತ್ತು ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ನಡುವಿನ TNPL 2025 ಪಂದ್ಯದಲ್ಲಿ ಅಶ್ವಿನ್ ವಿವಾದಕ್ಕೆ ಸಿಲುಕಿದ್ದು ಹೀಗೆ. ಐದನೇ ಓವರ್‌ನ ಐದನೇ ಎಸೆತದಲ್ಲಿ ಸಾಯಿಕಿಶೋರ್ ಎಸೆದ ಚೆಂಡು ಅಶ್ವಿನ್ ಅವರ ಪ್ಯಾಡಿಗೆ ಬಡಿಯಿತು. ಇದಕ್ಕೇ ಸಾಯಿಕಿಶೋರ್ ಅವರು ಅಪೀಲ್ ಮಾಡಿದಾಗ ಅಂಪೈರ್ ಎಲ್ ಬಿಡಬ್ಲ್ಯೂ ತೀರ್ಪು ನೀಡಿದರು. ಆದರೆ ಈ ತೀರ್ಪು ಅವರಿಗೆ ಸರಿ ಎನಿಸಲಿಲ್ಲ.

ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಪಿಚ್ ಆಗಿರುವುದರಿಂದ ಇದು ನಾಟೌಟ್ ಅಂದು ಎಂದು ಅವರು ಮೈದಾನದಲ್ಲಿದ್ದ ಅಂಪೈರ್ Kritika ಅವರ ಬಳಿ ತೆರಳಿ ವಾದಿಸಿದರು. ಚೆಂಡು ಲೆಗ್ ಸ್ಟಂಪ್‌ನಿಂದ ಹೊರಗೆ ಪಿಚ್ ಆಗಿರುವುದನ್ನು ವಿವರಿಸಲು ಪ್ರಯತ್ನಿಸಿದರು. ಅಶ್ವಿನ್ ಪಿಚ್ ಕಡೆಗೆ ಕೈ ತೋರಿಸಿ ವಾದ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ಅಶ್ವಿನ್, ಬ್ಯಾಟ್‌ನಿಂದ ಪ್ಯಾಡ್‌ಗೆ ಹೊಡೆದು ಅಸಮಾಧಾನದಿಂದ ಹೊರನಡೆದರು.

ಅಶ್ವಿನ್ ಪರವಾಗಿತ್ತು ರಿಪ್ಲೇ
ಅಶ್ವಿನ್ ಅವರ ವಾದದಂತೆ “ಚೆಂಡು ಲೆಗ್-ಸ್ಟಂಪ್ ಲೈನ್‌ನ ಹೊರಗೆ ಪಿಚ್ ಆಗಿರುವುದನ್ನು ರಿಪ್ಲೇ ದೃಶ್ಯಾವಳಿಗಳು ತೋರಿಸಿವೆ” ಎಂದು ವರದಿಯಾಗಿದೆ. ಅಶ್ವಿನ್ ಅವರ ವಾದವನ್ನು ಬೆಂಬಲಿಸುವಂತೆ ರಿಪ್ಲೇ ವಿಡಿಯೋ ಸಹ ಇತ್ತು. ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಪಿಚ್ ಆಗಿರುವುದು ಅದರಲ್ಲಿ ಸ್ಪಷ್ಟವಾಗಿತ್ತು. ಈ ಪಂದ್ಯದಲ್ಲಿ ಡಿಂಡಿಗಲ್ ಡ್ರಾಗನ್ಸ್ ಕೇವಲ 93 ರನ್‌ಗಳಿಗೆ ಕುಸಿತ ಕಂಡಿತು. ಇದನ್ನು ತಿರುಪ್ಪೂರ್ ಸುಲಭವಾಗಿ ಗುರಿ ಬೆನ್ನಟ್ಟಿ ಒಂಬತ್ತು ವಿಕೆಟ್‌ಗಳಿಂದ ಜಯ ಸಾಧಿಸಿತು. ಪಂದ್ಯದಲ್ಲಿ ಅಶ್ವಿನ್ ಅವರ ವಿಕೆಟ್ ನಿರ್ಣಾಯಕವಾಗಿತ್ತು.

ಇನ್ನು ಈ ಹಿಂದೆ ಮಂಕಡಿಂಗ್ ಔಟ್ ಮಾಡುವ ಮೂಲಕ ದೊಡ್ಡ ಸುದ್ದಿಯಾಗಿದ್ದ ಆರ್ ಅಶ್ವಿನ್ ಅವರು ಇತ್ತೀಚೆಗೆ ಲಖನೌ ಸೂಪರ್ ಜೈಂಟ್ಸ್ ಮತ್ತು ಆರ್ ಸಿಬಿ ಪಂದ್ಯ ನಡೆದ ವೇಳೆ ಮಂಕಡಿಂಗ್ ಔಟ್ ಮಾಡಲು ಯತ್ನಿಸಿದ್ದ ಲಖನೌ ಬೌಲರ್ ದಿಗ್ವೇಶ್ ರಾಠಿ ಪರ ಹೇಳಿಕೆ ನೀಡಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";