ಮರಿಯಮ್ಮನಹಳ್ಳಿ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಪಟ್ಟಣದ ಪುನೀತ್ ರಾಜ್‍ಕುಮಾರ್ ರವರ ಅಭಿಮಾನಿಗಳು ಎ.ಕೆ.ಕಾಲೋನಿಯಲ್ಲಿ ಹಮ್ಮಿಕೊಂಡು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ನಂತರ ಲೈಟ್ಸ್ ಆಫ್ ಮಾಡಿ ನೂರಾರು ಅಭಿಮಾನಿಗಳು ಮೊಂಬತ್ತಿಗಳನ್ನು ಹಿಡಿದು ಮೌನಚಾರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಕ್ಕಳು ಅಪ್ಪು ಹೆಸರಿನ ಆಕಾರದಲ್ಲಿ ಮೊಂಬತ್ತಿಗಳನ್ನು ಹಿಡಿದು ಕುಳಿತಿದ್ದರು. ನಂತರ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಪುನೀತ್ ರವರ ಅಧ್ಬುತ ಅಭಿನಯದಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ ಕನ್ನಡ ಚಿತ್ರರಂಗದ ಜನಪ್ರಿಯ ನಟ ಪುನೀತ ರಾಜಕುಮಾರ ಅಕಾಲಿಕ ನಿಧನದಿಂದ ರಾಜ್ಯದಲ್ಲಿ ಪ್ರತಿ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಶೋಕ ಸಾಗರದಲ್ಲಿ ಮುಳುಗಿತ್ತು.
ಕನ್ನಡ ಚಿತ್ರರಂಗಕ್ಕೆ ಅತಿದೊಡ್ಡ ನಷ್ಟ ಅಲ್ಲದೆ, ಯುವಕರಿಗೆ ಸ್ಫೂರ್ತಿ ಯಾಗಿದ್ದವರು ಎಂದು ಮನನೊಂದು ಕಣ್ಣೀರ ಹಾಕಿದರು. ನಂತರ ಹಲವು ಕಾರ್ಯಕ್ರಮಗಳು ಜರುಗಿದವು.ಈ ಸಂಧರ್ಭದಲ್ಲಿ ಪಟ್ಟಣದ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಹಾಗೂ ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ್, ಪೇದೆಗಳಾದ ಪ್ರವೀಣ್, ಅಂಗಡಿ ಕೊಟ್ರೇಶ್, ಸಂಜೀವ್ ಮೂರ್ತಿ ಇದ್ದರು.