ಕುಷ್ಟಗಿ,15 :- ತಾಲೂಕು ಮಾಜಿ ಸೈನಿಕರ ಸಂಘ ಕುಷ್ಟಗಿ ವತಿಯಿಂದ ಮೂರನೇ ವರ್ಷದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿ.ಆರ್.ಪಿ.ಎಫ್. ನ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನಮನ ಕಾರ್ಯಕ್ರಮ ನಡೆಯಿತು. ಇಲ್ಲಿನ ಮಲ್ಲಯ್ಯ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಹಾಗೂ ನಮನ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಚಾಲನೆ ನೀಡಿದರು.

ನಂತರ ಮಲ್ಲಯ್ಯ ವೃತ್ತದಿಂದ ಮೇಣದ ಬತ್ತಿ ಹಚ್ಚುವ ಮೂಲಕ ಶ್ರೀ ಬಸವೇಶ್ವರ ಸರ್ಕಲ್ ವರಗೆ ಬಂದು ಹುತಾತ್ಮರಾದ ಸೈನಿಕರಿಗೆ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಕೆ.ಮಹೇಶ ಮಾತನಾಡಿ ಈ ದೇಶದ ಹಿತ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗವನ್ನು ಮಾಡಿ ಈ ನಾಡಿನ ರಕ್ಷಣೆಗಾಗಿ ಜೀವ ಕೊಟ್ಟ ಸೈನಿಕರಿಗೆ ನಮನಗಳು ಎಂದರು. ಈ ಸಂದರ್ಭದಲ್ಲಿ ಮಾಜಿ ತಾಲೂಕು ಸೈನಿಕರ ಸಂಘದ ಗೌರವ ಅಧ್ಯಕ್ಷರಾದ ಶಿವಪ್ಪ ಕುಡತನಿ, ಉಪಾಧ್ಯಕ್ಷ ಶರಣಯ್ಯ ಹಿರೇಮಠ, ಶಿವಾಜಿ ಹಡಪದ್, ಶಂಕರಗೌಡ ಪಾಟೀಲ, ವಿಜಯಕುಮಾರ, ಯಲ್ಲಪ್ಪ, ಶಂಕ್ರಪ್ಪ ಕವಡಿಕಾಯಿ, ಮಲ್ಲಿಕಾರ್ಜುನ ಗುಗ್ಗರಿ, ಮಾರುತಿ ಹಲಗಿ, ಚಂದ್ರಕಾಂತ ವಡಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
