ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಗಣೇಶ ಚತುರ್ಥಿ ಪ್ರಯುಕ್ತ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಬಳ್ಳಾರಿ ನಗರದ ರಾಜು ಕಾಲುವೆಗಳಲ್ಲಾಗಲಿ ಅಥವಾ ಬಾವಿಗಳಲ್ಲಾಗಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಬಾರದೆಂದು ಆದೇಶಿಸಿದೆ. ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ತಮ್ಮ ಮನೆಯಲ್ಲಿಯೇ ಬಕೇಟುಗಳಲ್ಲಿ ವಿಸರ್ಜಿಸಲು ಕೋರಲಾಗಿದೆ.
ಬಳ್ಳಾರಿ ನಗರದ ಕೆಲವೊಂದು ಸ್ಥಳಗಳಲ್ಲಿ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ರಾಜು ಕಾಲುವೆಗಳಲ್ಲಿ ಮತ್ತು ಬಾವಿಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲು ನಿಷೇಧಿಸಿದೆ, ಆದರೆ ಅದರ ಪಕ್ಕದಲ್ಲಿರುವ ಹೊಂಡಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲು
1). ತಾಳೂರು ರಸ್ತೆಯ ಹೊಸಕೋರ್ಟ್ ಹಿಂಭಾಗದಲ್ಲಿರುವ ಕಾಲುವೆಯ ಹೊಸ ಬ್ರಿಡ್ಜ್ ಹತ್ತಿರ
2). ಕಪ್ಪುಗಲ್ ರಸ್ತೆಯ ಬ್ರಹ್ಮಯ್ಯ ದೇವಸ್ಥಾನದ ಹತ್ತಿರದ ಕಾಲವೇ ಪಕ್ಕದಲ್ಲಿ
3). ಸಿರುಗುಪ್ಪ ರಸ್ತೆಯ ಕಾಲುವೆ ಪಕ್ಕದಲ್ಲಿ ರಾಮನಗುಡಿ ಹತ್ತಿರ
4). ಗುಗರಟ್ಟಿ ಹೊನ್ನಳ್ಳಿ ರಸ್ತೆಯ ಕಾಲುವೆ ಪಕ್ಕದಲ್ಲಿ ಎಡಬಾಗದಲ್ಲಿ
5). ಗುಗರಟ್ಟಿ ಬೆಂಗಳೂರು ರಸ್ತೆಯ ಕಾಲುವೆ ಪಕ್ಕದಲ್ಲಿ ಎಡಭಾಗ
6). ಮುಂಡರಗಿ ಕಾಲುವೆ ಹತ್ತಿರ ಬಲಭಾಗ
7). ಅಲ್ಲಿ ಪುರದ ಕಾಲುವೆ ಹತ್ತಿರ ತಾತನ ಮಠದ ಹತ್ತಿರ
8). ಬೆಳಗಲ್ ಕ್ರಾಸ್ ಡಿಸಿ ನಗರ ಕಾಲುವೆ ಪಕ್ಕದಲ್ಲಿ
9). ಬಂಡಿಹಟ್ಟಿ ಕಾಲುವೆ ಪಕ್ಕದಲ್ಲಿ
10). ದೇವಿ ನಗರದ ಬಸವನ ಕುಂಟೆ ಒಳಗೆ