ಬೆಂಗಳೂರು, ಜನವರಿ 24 : ಸೋಮವಾರಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು 2021-22ನೇ ಸಾಲಿನಲ್ಲಿ ಕೃಷಿ ಸಾಲ ವಿತರಣೆ ಹಾಗೂ ವಸೂಲಾತಿ ಕುರಿತಂತೆ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ವರ್ಚ್ಯುವಲ್ ಮೂಲಕ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಮಾರ್ಚ್ ಅಂತ್ಯದ ವೇಳೆಗೆ 30.86 ಲಕ್ಷ ರೈತರಿಗೆ 20810 ಕೋಟಿ ರೂ. ಸಾಲ ವಿತರಣೆ ಗುರಿ ಮುಟ್ಟಬೇಕು. ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆ ಎಲ್ಲಾ ರೈತರಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಸಚಿವರು ಸೂಚನೆ ನೀಡಿದರು.

ಸಭೆಯಲ್ಲಿ ಸಹಾಕರ ಸಂಘಗಳ ನಿಬಂಧಕರಾದ ಎಸ್.ಜಿಯಾಉಲ್ಲಾ, ಸಹಕಾರ ಸಂಘಗಳ ಅಪರ ನಿಬಂಧಕರಾದ (ವಸತಿ ಮತ್ತು ಇತರೆ) ಕೆ.ಎಸ್.ನವೀನ್, ಸಹಕಾರ ಸಂಘಗಳ ಅಪರ ನಿಬಂಧಕರಾದ (ಪತ್ತು) ಎ.ಸಿ.ದಿವಾಕರ್, ಸಹಕಾರ ಸಂಘಗಳ ಅಪರ ನಿಬಂಧಕರಾದ (ಕೈಗಾರಿಕೆ ಮತ್ತು ಹೈನುಗಾರಿಕೆ) ವೈ.ಎಚ್.ಗೋಪಾಲಕೃಷ್ಣ, ಸಹಕಾರ ಸಂಘಗಳ ಅಪರ ನಿಬಂಧಕರಾದ (ಬಳಕೆ ಮತ್ತು ಮಾರಾಟ) ಕೆ.ಎಂ.ಆಶಾ, ಸಹಕಾರ ಸಂಘಗಳ ಬೆಂಗಳೂರು ಪ್ರಾಂತದ ಜಂಟಿ ನಿಬಂಧಕರಾದ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.