– ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನಿಲ್ಲ
– ವಿಧಾನ ಪರಿಷತ್’ನಲ್ಲಿ ಪ್ರತಿಪಕ್ಷದ ನಾಯಕನಿಲ್ಲ
– ಕಳಪೆ ಪ್ರದರ್ಶನ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷನ ಬದಲಾವಣೆ
– ಪ್ರತಿಪಕ್ಷವಾಗಿ ಬಿಜೆಪಿಯ ಸ್ಥಾನ ಕಸಿದುಕೊಳ್ಳುತ್ತಿರುವ ಜೆಡಿಎಸ್
– ದೊಡ್ಡ ಸಂಖ್ಯೆಯ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ
– ಬಿಜೆಪಿ ಟಿಕೆಟ್’ಗಾಗಿ ಉದ್ಯಮಿಗೆ 7 ಕೋಟಿ ರೂಪಾಯಿ ವಂಚಿಸಿ ಬಂಧನಕ್ಕೊಳಗಾಗಿರುವ ಬಿಜೆಪಿ ಕಾರ್ಯಕರ್ತರು
-ಬಿಎಸ್ವೈ ಅವರನ್ನು ನಿರ್ಲಕ್ಷಿಸಿದ್ದಕ್ಕಾಗಿ ಕೇಂದ್ರ ನಾಯಕರ ವಿರುದ್ಧ ತೊಡೆ ತಟ್ಟಿರುವ ಬಿಜೆಪಿಯ ಅತೃಪ್ತ ಶಾಸಕರು
– ಒಂದೇ ಒಂದು ಚುನಾವಣೆ ಗೆಲ್ಲಲಾಗದ ವ್ಯಕ್ತಿಯೊಬ್ಬ ಬಿಜೆಪಿಯ ಲಿಂಗಾಯತ ನಾಯಕತ್ವವನ್ನು ವ್ಯವಸ್ಥಿತವಾಗಿ ಮುಗಿಸುತ್ತಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗಳು
ಆದರೆ ಬಿಜೆಪಿಯ ಚಿಂತೆ ಕರ್ನಾಟಕದ ಬಗ್ಗೆ ಅವಹೇಳನ ಮಾಡುತ್ತಿರುವ ಒಬ್ಬ ಟಿವಿ ನಿರೂಪಕನ ಬಗ್ಗೆ ಮಾತ್ರ ಸೀಮಿತವಾಗಿದೆ.
ತಮ್ಮದೇ ಪಕ್ಷದ ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಆ ನಿರೂಪಕನಿಗೇ ನೇರವಾಗಿ ಆತ ಜೈಲಿಗೆ ಹೋಗಿದ್ದೇಕೆ? ಎಂದು ಪ್ರಶ್ನಿಸಿದ್ದು ಬಿಜೆಪಿ ಮರೆತುಹೋಗಿದೆ.
ರಾಜ್ಯ ಬಿಜೆಪಿಗೆ ಕರ್ನಾಟಕದ ಗೌರವಕ್ಕಿಂತ ತಮ್ಮ ಮುಖವಾಣಿಯಂತೆ ಕಾರ್ಯ ನಿರ್ವಹಿಸುವ ನಿರೂಪಕನ ಬಗೆಗಿನ ಕಾಳಜಿಯೇ ಹೆಚ್ಚಾಗಿದೆ.