ಕೊಪ್ಪಳ,: ಮತ ಕ್ಷೇತ್ರದಾದ್ಯಂತವಾಗಿ ಅತಿವೃಷ್ಟಿಯಿಂದಾಗಿ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸುವುದ ಅವಶ್ಯವಿದ್ದು, ಈಗಾಗಲೇ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ರಸ್ತೆಗಳ ಸುಧಾರಣೆಗಾಗಿ ಅನುದಾನ ಬಿಡಗಡೆಯಾಗಿದೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು. ತಾಲೂಕಿನ ಹಳೆ ಬಂಡಿಹರ್ಲಾಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಶೀರ್ಷಿಕೆ 5054 ಯೋಜನೆಯಡಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ 22 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಟ್ನಾಳ್ ನಿಂದ ಬಸಾಪುರ ಗ್ರಾಮದವರಿಗೆ ಒಟ್ಟು 11 ಕೀ ಮೀ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ, ಮುಂದಿನ ದಿನಗಳಲ್ಲಿ ಮಹ್ಮದ್ ನಗರ ದಿಂದ ಹಳೇ ಬಂಡಿಹರ್ಲಾಪುರ ರಸ್ತೆಗೆ ಅನುದಾನ ಬಿಡುಗಡೆಗೆ ಪಯತ್ನಿಸುತ್ತೇನೆ. ಕೋವಿಡ್ ಸಂಕಷ್ಟ ಅನುದಾನ ಬರುತ್ತಿಲ್ಲ. ಈಗಾಗಲೇ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 40 ಲಕ್ಷ ಅನುದಾನ ಬಿಡುಗಡೆಯಾಗಿದೆ. ಸ್ಥಳದ ತೊಂದರೆ ಇರುವುದರಿಂದ ವಿಳಂಬವಾಗುತ್ತಿದೆ. ಅದನ್ನು ಸಹ ಪರಿಶೀಲನೆ ಮಾಡಿ ಕಾಮಗಾರಿ ಪ್ರಾರಂಭಿಸಲು ಸೂಚಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿ.ಜನರ್ಧಾನ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ದೇವಪ್ಪ ಮೆಕಾಳಿ, ಗ್ರಾಪಂ ಅಧ್ಯಕ್ಷ ಚನ್ನಕೃಷ್ಣ ಗೊಲ್ಲರ್,ಉಪಾಧ್ಯಕ್ಷೆ ಮದರಬೀ, ಸದಸ್ಯರಾದ ಹನುಮಂತಪ್ಪ ಕರಡಿ, ಸರ್ವರ್ ಅಲಿ, ಅಂಜಿ ಮೆಸಾನ್, ಕಾವ್ಯ ವಸಂತ, ಮಾಜಿ ಅಧ್ಯಕ್ಷೆ ರೇಣುಕಮ್ಮ ಕಟಗಿ, ಗುತ್ತಿಗೆದಾರ ನಿಂಗಪ್ಪ ಬಣಕಾರ, ಶ್ರೀಧರ ಕೊಪ್ಪಳ, ಸಿದ್ದಿಬಾಷ ಗೊರೆಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.