ಚುನಾವಣಾ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ

ಕನ್ಯಾಕುಮಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿರುವ ಬಂಡೆ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಅಂದರೆ ಮೇ 31ರಂದು ವಿವೇಕಾನಂದ ರಾಕ್ ಮೆಮೋರಿಯಲ್ ಹಾಲ್ನಲ್ಲಿ ಮೋದಿ ಧ್ಯಾನ ಮಾಡಲಿದ್ದಾರೆ. ಮೇ 31 ರ ಸಂಜೆಯಿಂದ ಜೂನ್ ೧ರ ಸಂಜೆಯವರೆಗೆ ಧ್ಯಾನ ಮಂಟಪದಲ್ಲಿ ನರೇಂದ್ರ ಮೋದಿ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತ ಮಾತೆಯ ರ‍್ಶನ ಪಡೆದ ಸ್ಥಳ ಕನ್ಯಾಕುಮಾರಿ. ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ದೊಡ್ಡ ಪ್ರಭಾವ ಬೀರಿತು. ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂದು ಜನರು ನಂಬುತ್ತಾರೆ. ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ.

ಪಾರ್ವತಿ ದೇವಿಯು ಸಹ ಅದೇ ಸ್ಥಳದಲ್ಲಿ ಭಗವಾನ್ ಶಿವನಿಗಾಗಿ ಕಾಯುತ್ತಾ ಒಂದೇ ಕಾಲಿನಲ್ಲಿ ನಿಂತು ಧ್ಯಾನ ಮಾಡಿದ್ದಳು ಎಂಬ ನಂಬಿಕೆಯಿದೆ. ಕನ್ಯಾಕುಮಾರಿ ಭಾರತದ ದಕ್ಷಿಣದ ತುದಿಯಾಗಿದೆ. ಇದಲ್ಲದೆ, ಇದು ಭಾರತದ ಪರ‍್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಸ್ಥಳವಾಗಿದೆ. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ. ಪ್ರಧಾನಿ ಮೋದಿಯವರು ಕನ್ಯಾಕುಮಾರಿಗೆ ಹೋಗುವ ಮೂಲಕ ರಾಷ್ಟ್ರೀಯ ಏಕತೆಯ ಸಂಕೇತವನ್ನು ನೀಡುತ್ತಿದ್ದಾರೆ.

ಚುನಾವಣೆ ಮುಗಿದ ನಂತರವೂ ಅವರು ಕನ್ಯಾಕುಮಾರಿಗೆ ಭೇಟಿ ನೀಡುತ್ತಿರುವುದು ಪ್ರಧಾನಿಯವರ ಆಳವಾದ ಬದ್ಧತೆ ಮತ್ತು ತಮಿಳುನಾಡಿನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಚುನಾವಣಾ ಪ್ರಚಾರದ ಕೊನೆಯಲ್ಲಿ ಪ್ರಧಾನಮಂತ್ರಿ ಆಧ್ಯಾತ್ಮಿಕ ಯಾತ್ರೆಗಳನ್ನು ಕೈಗೊಳ್ಳುತ್ತಾರೆ.

ನರೇಂದ್ರ ಮೋದಿಯವರು ಕಳೆದ ೨ ಬಾರಿಯೂ ಚುನಾವಣೆ ಮುಗಿದ ಬಳಿಕ ಫಲಿತಾಂಶ ಬರುವುದಕ್ಕೂ ಮೊದಲು ಆಧ್ಯಾತ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಈ ಬಾರಿ ನರೇಂದ್ರ ಮೋದಿ ಅವರು ಮೇ ೩೦ರಂದು ಕನ್ಯಾಕುಮಾರಿ ತಲುಪುತ್ತಾರೆ ಮತ್ತು ಜೂನ್ ೧ರವರೆಗೆ ಅಲ್ಲಿಯೇ ಇರುತ್ತಾರೆ. ೨೦೧೯ರಲ್ಲಿ ಚುನಾವಣೆಯ ಬಳಿಕ ಮೋದಿ ಅವರು ಕೇದಾರನಾಥಕ್ಕೆ ಭೇಟಿ ನೀಡಿದ್ದರು. ೨೦೧೪ರಲ್ಲಿ ಅವರು ಶಿವಾಜಿಯ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು.

 

೨೦೧೯ರ ಲೋಕಸಭಾ ಚುನಾವಣೆಯ ಮತ ಎಣಿಕೆಗೂ ಕೆಲವು ದಿನಗಳ ಮೊದಲು ಪ್ರಧಾನಿ ಮೋದಿ ಉತ್ತರಾಖಂಡದ ಕೇದಾರನಾಥ ದೇಗುಲದಲ್ಲಿ ಪ್ರರ‍್ಥನೆ ಸಲ್ಲಿಸಿದ್ದರು. ಪ್ರಧಾನಿ ಮೋದಿ ಹಿಮಾಲಯದ ೧೧,೭೦೦ ಅಡಿ ಎತ್ತರದ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಕೇದಾರನಾಥದಿಂದ ೧ ಕಿಲೋ ಮೀಟರ್ ದೂರದಲ್ಲಿರುವ ಈಗ ಪ್ರಸಿದ್ಧವಾದ ರುದ್ರ ಧ್ಯಾನದ ಗುಹೆಯಲ್ಲಿ ಅವರು ರಾತ್ರಿಯನ್ನು ಕಳೆದಿದ್ದರು.

Facebook
Twitter
LinkedIn
Telegram
WhatsApp
Print
Email

Leave a Comment

Your email address will not be published. Required fields are marked *

Translate »
Scroll to Top