ರಾಯಚೂರು: ಕಾಶ್ಮೀರದಲ್ಲಿ ಇಂದಿನ ಉಗ್ರವಾದ ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅವರಿಂದು ನಗರದಲ್ಲಿ ಆಯೋಜಿಸಿದ್ದ ಜನಾಕ್ರೋಶ ಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಭಾರತೀಯರಿಗೆ ಸಂತಾಪ ಸೂಚಿಸಿ ಮಾತನಾಡಿದರು. ಕಾಶ್ಮೀರದಲ್ಲಿ ಉಗ್ರವಾದ ಸಮಸ್ಯೆ ನಿವಾರಣೆಯಾಗದೆ ಹಾಗೆ ಉಳಿಯಲು ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್ ಕಾರಣವೆಂದ ಅವರು ಬಿಜೆಪಿ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿಯವರು ಅಂದು ಹೇಳಿದ್ದರು 370 ಕಾಯ್ದೆ ರದ್ದು ಆಗಿದ ಹೊರತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದಿದ್ದರು ಅವರು ಬಿಜೆಪಿ ಅಧಿಕಾರಕ್ಕೆ ಬಂದಾಗ 370 ರದ್ದುಗೊಳಿಸುವುದಾಗಿ ಹೇಳಿದ್ದರು. ಅದನ್ನು ಇಂದಿನ ಪ್ರಧಾನಿ ಮೋದಿಯವರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ರೀತಿಯಿರುವ ಅಮಿತ್ ಶಾ ಮಾಡಿ ತೋರಿಸಿದ್ದಾರೆ. ಉಗ್ರರ ಕೃತ್ಯ ಸಹಿಸುವುದಿಲ್ಲ ಪ್ರಧಾನ ಮಂತ್ರಿಗಳು ಬಳೆ ತೊಟ್ಟಿಲ್ಲ ಮೋದಿಯವರು ಹಿಂದಿನ ಪ್ರದಾನಿಯಂತಲ್ಲ ದಿಟ್ಟ ಪ್ರಧಾನಿಯಾಗಿದ್ದಾರೆ ಎಂದರು.
ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಘಟನೆ ಬಗ್ಗೆ ಬಿಜೆಪಿ ಮೇಲೆ ಗೂಬೆ ಕೂರಿಸಿದ್ದಾರೆ. ಅವರು ನಮ್ಮ ದೇಶದ ಇತಿಹಾಸದ ಬದಲು ಇಟಲಿ ದೇಶದ ಇತಿಹಾಸ ಹೆಚ್ಚು ತಿಳಿದುಕೊಂಡಿದ್ದಾರೆ ಎಂದರು. ಜನಾಕ್ರೋಶ ಯಾತ್ರೆಯನ್ನು ಮೊಟಕುಗೊಳಿಸಿ ಯಾವುದೆ ಜಯಘೋಷ, ಹಾರ ,ಪಟಾಕಿ ಸಿಡಿಸದೆ ಉಗ್ರರ ಕೃತ್ಯವನ್ನು ಖಂಡಿಸಿ ಸರಳವಾಗಿ ಮಾಡಿದ್ದೇವೆಂದ ಅವರು, ಉಗ್ರರ ಕೃತ್ಯದಲ್ಲಿ ಸಾವಿಗೀಡಾದವರ ನಿವಾಸಕ್ಕೆ ಭೇಟಿ ನೀಡುತ್ತೇನೆ ಎಂದರು.
ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲ ರಂಗದಲ್ಲಿ ವಿಫಲವಾಗಿದೆ ಎಂದು ಅವರು, ಭ್ರಷ್ಟಾಚಾರದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ ಎಂದು ಕುಟುಕಿದರು. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಮಾತನಾಡಿ ಕಾಶ್ಮೀರದ ಇಂದಿನ ಘಟನೆಗೆ ಕಾಂಗ್ರೆಸ್ ತುಷ್ಟೀಕರಣ ನೀತಿ ಕಾರಣವೆಂದ ಅವರು ಕಾಶ್ಮೀರದಲ್ಲಿ 370ರದ್ದು ನಂತರ ಇದು ಮೊದಲ ಕೃತ್ಯ ದೇಶದಲ್ಲಿ ಉಗ್ರವಾದ ನೆಲೆಗೊಳ್ಳಲು ಬಿಡುವುದಿಲ್ಲವೆಂದು ಮೋದಿ ಹೇಳಿದ್ದಾರೆ ಅದರಂತೆ ಅವರು ಈ ಹಿಂದಿನ ಉಗ್ರರ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಸರಿಯಾದ ಪಾಠ ಕಲಿಸಿದ್ದಾರೆ ಈಗಲು ಉಗ್ರರ ಅಟ್ಟಹಾಸ ತೊಡೆದು ಹಾಕುತ್ತಾರೆ ಎಂದರು. ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಮಾತನಾಡಿ ಪಹಲ್ಗಾಮ ಘಟನೆ ಅತ್ಯಂತ ಹೀನ ಕೃತ್ಯಆಗಿದೆ ಎಂದ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥರವರು ನುಡಿದಂತೆ “ಬಟೇಂಗೆ ತೋ ಕಟೇಂಗೇ” ನಾವು ಒಡೆದರೆ ಉಳಿಯಲ್ಲವೆಂದು ಹಿಂದೂಗಳು ಒಂದಾಗದ ಹೊರತು ನಮಗೆ ಇದೆ ರೀತಿ ಆಗುತ್ತದೆ ಇದಕ್ಕೆಲ ಕಾರಣ ದೇಶವನ್ನಾಳಿದ ಕಾಂಗ್ರೆಸ್ ಎಂದರು.
ವಿಧಾನ ಪರಿಷತ್ ಸದಸ್ಯ ಶಿಶೀಲ ನಮೋಶಿ ಮಾತನಾಡಿ ಉಗ್ರರ ಕೃತ್ಯ ಅತ್ಯಂತ ಪೈಶಾಚಿಕವಾಗಿದೆ ಇದಕ್ಕೆ ಕಡಿವಾಣವನ್ನು ಮೋದಿಯವರು ಹಾಕುತ್ತಾರೆ ಎಂದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ತುಷ್ಟೀಕರಣ ನಿಲ್ಲಿ ಸದಿದ್ದರೆ ಸಮಾಜದಲ್ಲಿ ಅಶಾಂತಿ ನೆಲೆಗೊಳ್ಳುತ್ತದೆ ಎಂದರು. ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ ಉಗ್ರವಾದವನ್ನು ಈ ದೇಶದಿಂದ ಕಿತ್ತೋಗೆಯಬೇಕು ಪ್ರಧಾನಿ ಮೋದಿಯವರು ಉಗ್ರವಾದ ಎದುರಿಸಲು ಸಮರ್ಥರಾಗಿದ್ದಾರೆ ಎಂದರು. ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ ಮಾತನಾಡಿ ಉಗ್ರವಾದ ಈ ದೇಶದಲ್ಲಿ ನೆಲೆಗೊಳ್ಳಲು ಕಾಂಗ್ರೆಸ್ ನೀತಿ ಕಾರಣವೆಂದರು. ಇದೆ ವೇಳೆ ಉಗ್ರರ ಕೃತ್ಯದಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.
ವೇದಿಕೆ ಮೇಲೆ ಮಾಜಿ ಸಚಿವ ಶ್ರೀ ರಾಮುಲು ಶಾಸಕರಾದ ಮಾನಪ್ಪ ವಜ್ಜಲ್, ದೊಡ್ಡನಗೌಡ ಪಾಟೀಲ್, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಬಿ.ವಿ.ನಾಯಕ, ಮಾಜಿ ಶಾಸಕ ತಿಪ್ಪ ರಾಜು ಹವಾಲ್ದಾರ್, ಬಸನಗೌಡ ಬ್ಯಾಗವಾಟ್,ಬಸವರಾಜ ಧಡೇಸೂಗೂರು, ಗಂಗಾಧರ ನಾಯಕ,ಪ್ರತಾಪಗೌಡ ಪಾಟೀಲ್, ಕೆ.ಕರಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಸೇರಿದಂತೆ
ಅನೇಕ ಮುಖಂಡರು ಇದ್ದರು.