ಬೆಂಗಳೂರು: ಆಹಾರ ವ್ಯಾಪಾರದ ಭವಿಷ್ಯ ಅನ್ವೇಷಿಸುವ ಬೆಂಗಳೂರಿನ ಪ್ರೀಮಿಯರ್ ಇಂಟಿಗ್ರೇಟೆಡ್ ಬಿ2ಬಿ ಆಹಾರ ಎಕ್ಸ್ ಪೋ ನಗರದ ಅರಮನೆ ಮೈದಾನದಲ್ಲಿ ಜ. 28 ರಿಂದ 30 ರ ವರೆಗೆ ನಡೆಯಲಿದೆ. ಆಹಾರ ವಲಯದ ಭವ್ಯ ಭವಿಷ್ಯ ರೂಪಿಸುವ ನಾವೀನ್ಯತೆಯ ಸಮ್ಮೇಳನ ತ್ರಿಪುರ ವಾಸಿನಿಯಲ್ಲಿ ಅನಾವರಣಗೊಳ್ಳಲಿದೆ. ಸಿನರ್ಜಿ ಎಕ್ಸ್ ಪೋಷರ್ಸ್ ಅಂಡ್ ಇವೆಂಟ್ಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ನಿಂದ ಈ ಎಕ್ಸ್ ಪೋ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನರ್ಜಿ ಎಕ್ಸ್ ಪೋಷರ್ಸ್ ಅಂಡ್ ಇವೆಂಟ್ಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಉಪಾಧ್ಯಕ್ಷ ಜಿ. ಶಶಿಕುಮಾರ್, ಆಹಾರ ವಲಯಕ್ಕೆ ಉಜ್ವಲ ಭವಿಷ್ಯವಿದ್ದು, ಇದು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಆಹಾರ ವಲಯದ ನಾವೀನ್ಯಕಾರರಿಗೆ ಇದು ಉತ್ತಮ ವೇದಿಕೆಯಾಗಿದೆ. ಆಹಾರ ವಲಯದ ಹೊಸ ತಂತ್ರಜ್ಞಾನ, ವೈವಿಧ್ಯತೆಗಳನ್ನು ಈ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದರು. ಎಕ್ಸ್ ಪೋದಲ್ಲಿ ಬೇಕರ್ಸ್ ತಂತ್ರಜ್ಞಾನ ಮೇಳ, ಆಹಾರ ಮತ್ತು ಪಾನೀಯ ಸಂಸ್ಕರಣೆ, ಇಂಡಿಯಾ ಫುಡ್ ಪ್ಯಾಕ್ ಹಾಗೂ ಇಂಡಿಯಾ ಡೈರಿ ಸಂಸ್ಕರಣಾ ವಲಯಗಳು ಭಾಗವಹಿಸುತ್ತಿದ್ದು. ಇದೊಂದು ಆಹಾರ ಸಂಗಮವಾಗಿದೆ. ಅತ್ಯಾಧುನಿಕ ಉತ್ಪನ್ನಗಳು, ಉಪಕರಣಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸುವ 200 ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳನ್ನು ಒಂದೇ ವೇದಿಕೆಯಲ್ಲಿ ನೋಡಲು ಇದು ಉಜ್ವಲ ಅವಕಾಶವಾಗಿದೆ. ಬೇಕರಿ ಮತ್ತು ಕೆಫೆ ವ್ಯವಹಾರಗಳಿಗೆ ಅವರ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಲು ವಿಶೇಷ ಕಾರ್ಯಾಗಾರವನ್ನು ವಿನ್ಯಾಸಗೊಳಿಸಲಾಗಿದೆ. ತಯಾರಕರು, ಪೂರೈಕೆದಾರರು ಮತ್ತು ಉದ್ಯಮ ವಲಯದ ಹತ್ತು ಸಾವಿರಕ್ಕೂ ಅಧಿಕ ಮಂದಿ ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ, ಸಣ್ಣ ಕೈಗಾರಿಕಾ ಸಂಘ, ಸೊಸೈಟಿ ಆಫ್ ಇಂಡಿಯನ್ ಬೇಕರ್ಸ್, ಅಟಲ್ ಇನ್‌ಕ್ಯುಬೇಷನ್ ಸೆಂಟರ್ ಸಹಯೋಗದಲ್ಲಿ ಈ ಎಕ್ಸ್ ಪೋ ನಡೆಯುತ್ತಿದೆ ಎಂದು ಹೇಳಿದರು.