‘ಬಿಗ್ ಬಾಸ್’ ಸ್ಪರ್ಧಿಗಳನ್ನು ಸೆಲೆಕ್ಟ್ ಮಾಡೋದು ಯಾರು ಗೊತ್ತಾ : ಪ್ರಥಮ್ ಬಿಚ್ಚಿಟ್ಟ ರಹಸ್ಯ !
‘ಬಿಗ್ ಬಾಸ್’ ಕನ್ನಡ ಸೀಸನ್ 12ರ ತಯಾರಿ ಆರಂಭ ಆಗಿದ್ದು, ಸ್ಪರ್ಧಿಗಳ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿದೆ. ಆದರೆ ಈ ಬಗ್ಗೆ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಅವರು ಒಂದು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಶೋಗೆ ಸ್ಪರ್ಧಿಗಳನ್ನು ಯಾರು ಆಯ್ಕೆ ಮಾಡುತ್ತಾರೆ ಎಂಬುದನ್ನು ಅವರು ಹೇಳಿದ್ದಾರೆ. ಅಲ್ಲದೆ, ‘ದುಡ್ಡು ಕೊಟ್ಟು ಬಿಗ್ ಬಾಸ್ ಹೋಗ್ತಿನಿ ಅನ್ನೋ ಭ್ರಮೆಯನ್ನು ಬಿಡಿ’ ಎಂದು ಪ್ರಥಮ್ ಮನವಿ ಮಾಡಿದ್ದಾರೆ.
ಹೈಲೈಟ್ಸ್:
ಬಿಗ್ ಬಾಸ್ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವುದರ ಬಗ್ಗೆ ಪ್ರಥಮ್ ಹೇಳಿದ್ದೇನು?
ಬಿಗ್ ಬಾಸ್ ಶೋಗೆ ಕಳುಹಿಸುತ್ತೇವೆ ಎಂದು ವಂಚಿಸುವ ಜಾಲ ಇದೆಯಾ?
ಅದೊಂದು ಕೆಲಸ ಮಾಡಿ ಸುದೀಪ್‌ಗೆ ಬೇಸರ ತರಿಸಬೇಡಿ ಎಂದ ಪ್ರಥಮ್!
‘ಬಿಗ್ ಬಾಸ್’ ಸ್ಪರ್ಧಿಗಳನ್ನು ಸೆಲೆಕ್ಟ್ ಮಾಡೋದು ‘ಅವರಿಬ್ಬರು’ ಮಾತ್ರ! ಪ್ರಥಮ್ ರಹಸ್ಯ ಬಿಚ್ಚಿಟ್ಟಿದ್ದು ಯಾಕೆ?
ಪ್ರತಿಬಾರಿ ಬಿಗ್ ಬಾಸ್ ಕನ್ನಡ ಶೋ ಆರಂಭ ಆಗುವಾಗ ಕೇಳಿಬರುವ ಸಾಮಾನ್ಯ ಪ್ರಶ್ನೆ, ಸ್ಪರ್ಧಿಗಳು ಯಾರು ಎಂಬುದು. ಅಲ್ಲದೆ, ಸಾಕಷ್ಟು ಮಂದಿ ಈ ಶೋಗೆ ಹೋಗೋದಕ್ಕೆ ಏನೇನೆಲ್ಲಾ ಮಾಡ್ತಾರೆ ಅನ್ನೋದನ್ನು ನಾವು ನೋಡಿದ್ದೇವೆ. ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಹಲವು ಹುಚ್ಚಾಟಗಳನ್ನೆಲ್ಲಾ ಮಾಡ್ತಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಆಗಲೇ ಈ ದೊಡ್ಮನೆ ಒಳಗೆ ಹೋಗೋದಕ್ಕೆ ಅನೇಕರು ನಾ ಮುಂದು ತಾ ಮುಂದು ಆಟ ಆರಂಭಿಸಿದ್ದಾರೆ.
50 ವರ್ಷದ ಬಳಿಕ ವಿಪರೀತ ರಾಜಯೋಗ: ಈ 3 ರಾಶಿಗೆ ಬಂಪರ್ ಲಾಟರಿ..!
ದಾವಣಗೆರೆ PSI ಸಾವು: ಚಿನ್ನ ಜಪ್ತು ಮಾಡಿ ತಂದ ಮರುದಿನವೇ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ!
Photos: ಜ್ವಾಲಾ ಗುಟ್ಟಾ ಮಗಳಿಗೆ ಹೆಸರಿಡಲು ಹೈದರಾಬಾದ್‌ಗೆ ಬಂದ ಆಮಿರ್ ಖಾನ್; ನೆಟ್ಟಿಗರಿಂದ ಭಾರಿ ಮೆಚ್ಚುಗೆ
ಕಡೆಗೂ ವೀರ್ಯ ದಾನಿ ಬಗ್ಗೆ ಬಾಯ್ಬಿಟ್ಟ ತುಂಬು ಗರ್ಭಿಣಿ ಭಾವನಾ ರಾಮಣ್ಣ!
ಪ್ರಥಮ್ ಹಂಚಿಕೊಂಡ್ರು ಪೋಸ್ಟ್
ಬಿಗ್ ಬಾಸ್ ಕನ್ನಡ ವಿನ್ನರ್ ಆಗಿರುವ ಒಳ್ಳೆ ಹುಡುಗ ಪ್ರಥಮ್ ಅವರು ಇದೀಗ ಬಿಗ್ ಬಾಸ್ ಕುರಿತಂತೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದ್ರೆ, ಅವರಿಗೂ ಕೂಡ ಅನೇಕರು ಕರೆಮಾಡಿ, ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗಿ ಹೋಗೋಕೆ ನಮಗೊಂದು ಚಾನ್ಸ್ ಕೊಡಿಸಿ ಅಂತ ಕೇಳ್ತಿದ್ದಾರಂತೆ. ಆ ಕರೆಗಳಿಂದ ಕಿರಿಕಿರಿ ಅನುಭವಿಸಿರುವ ಪ್ರಥಮ್, ಒಂದು ಇಂಪಾರ್ಟೆಂಟ್ ವಿಚಾರವನ್ನು ಹಂಚಿಕೊಂಡಿದ್ದಾರೆ.
‘ಬಿಗ್ ಬಾಸ್‌ನಿಂದ ಚಕ್ರವರ್ತಿ ಚಂದ್ರಚೂಡ್ ಚೇಂಜ್ ಆದ್ರು’; ‘ಕಿಚ್ಚ’ ಸುದೀಪ್ ಹಿಂಗ್ಯಾಕೆ ಹೇಳಿದ್ರು?
ಪ್ರಥಮ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಥಮ್, “ಬಿಗ್ ಬಾಸ್ ಪ್ರೆಸ್ ಮೀಟ್ ಆದ್ಮೇಲೆ ನೂರಾರು ಜನ ನಮ್ಮ ಆಫಿಸ್‌ಗೆ ಮತ್ತು ನನ್ನ ಆಪ್ತರ ಮೂಲಕ ಕಾಲ್ ಮಾಡ್ತಾನೇ ಇದ್ದಾರೆ. ಎಲ್ಲರಿಗೂ ಒಂದೇ ಮಾತು, ಯಾವ influence ಕೂಡ ನಡೆಯಲ್ಲ. ನಮ್ಮ ಬಾಸ್ ಕಲರ್ಸ್ ಕನ್ನಡ ಹೆಡ್ ಪ್ರಶಾಂತ್ ನಾಯಕ್ ಸರ್ & ಪ್ರಕಾಶ್ ಸರ್ ಅವ್ರದ್ದೇ ತಂಡವಿದೆ! ಅವ್ರೇ ಕಾಂಟ್ಯಾಕ್ಟ್ ಮಾಡ್ತಾರೆ. ಯಾವ ಕಾಸ್ಟಿಂಗ್ ಮಾತು ನಡೆಯಲ್ಲ” ಎಂದು ಹೇಳಿದ್ದಾರೆ.
ಯಾರ್ ಯಾರನ್ನೋ ನಂಬಿ ಮೋಸ ಹೋಗಬೇಡಿ
“ದುಡ್ಡು ಕೊಟ್ಟು ಬಿಗ್ ಬಾಸ್‌ಗೆ ಹೋಗ್ತಿನಿ ಅನ್ನೋ ಭ್ರಮೆ ಬಿಡಿ. ಆಮೇಲೆ most important ಬಿಗ್ ಬಾಸ್ ಶೋಗೆ ಹೋಗೋಕೆ ಅಂತಲೇ ಮಾಡುವ ಆನ್‌ಲೈನ್ ಹುಚ್ಚಾಟಗಳನ್ನು ನಿಲ್ಲಿಸಿ. ಇದ್ರಿಂದಲೇ ಸುದೀಪ್ ಸರ್ ಬೇಸರವಾಗೋದು! ಪ್ರಶಾಂತ್ ನಾಯಕ್ ಸರ್ ಮತ್ತು ಪ್ರಕಾಶ್ ಸರ್ ಬಿಟ್ಟು ಬೇರೆ ಯಾರೇ ಹೇಳಿದರೂ ಅದು ಫೇಕ್. ಯಾಮಾರಬೇಡಿ, ಆನ್‌ಲೈನ್ ಹುಚ್ಚಾಟ ನಿಲ್ಲಿಸಿ” ಎಂದು ಪ್ರಥಮ್ ಮನವಿ ಮಾಡಿದ್ದಾರೆ.
ಅಂದಹಾಗೆ, ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ ಕೊನೇ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಸುದೀಪ್ ಅವರೇ ನಿರೂಪಕರಾಗಿ ಕೆಲಸ ಮಾಡಲಿದ್ದಾರೆ.