ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆಯನ್ನು ಸಿಬಿಐಗೆ ರ‍್ಗಾಯಿಸುವುದನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡದ ಮೇಲೆ ನಂಬಿಕೆ ಇಟ್ಟಿರುವುದಾಗಿ ಭಾನುವಾರ ಹೇಳಿದ್ದಾರೆ.
ಇಂತಹ ಬೇಡಿಕೆ ಇಡುವ ಬಿಜೆಪಿಯನ್ನು ಪ್ರಶ್ನಿಸಿದ ಅವರು, ಪೊಲೀಸರನ್ನು ಏಕೆ ನಂಬುವುದಿಲ್ಲ. ‘ನ್ಯಾಯಯುತ ತನಿಖೆ’ ನಡೆಸುತ್ತಿರುವ ಎಸ್‌ಐಟಿ ಬಗ್ಗೆ ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮ ಪೊಲೀಸರು (ಎಸ್‌ಐಟಿ) ತನಿಖೆ ನಡೆಸುತ್ತಿದ್ದಾರೆ, ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಅವರು ದಕ್ಷರು ಎಂದು ಅವರು ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಒಂದು ಕಾಲದಲ್ಲಿ ಸಿಬಿಐ ಅನ್ನು ‘ಭ್ರಷ್ಟಾಚಾರದ ತನಿಖಾ ದಳ’ ಎಂದು ಕರೆದಿತ್ತು ಮತ್ತು ಕಾಂಗ್ರೆಸ್ ಪದೇ ಪದೆ ಬೇಡಿಕೆಯಿದ್ದರೂ ಪಕ್ಷವು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನು ಕೇಂದ್ರದ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಿಲ್ಲ. ಸಿಬಿಐ ಮೇಲೆ ನಮಗೆ ನಂಬಿಕೆ ಇಲ್ಲ ಎಂದಲ್ಲ, ಸಿಬಿಐಗೆ ವಹಿಸಬೇಕಾದ ಪ್ರಕರಣಗಳನ್ನು ನೀಡಲಾಗುವುದು. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಏಳು ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೆ. ಆದರೆ, ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ. ಎಸ್‌ಐಟಿ ಕೂಡ ಸಿಬಿಐನಂತಹ ತನಿಖಾ ಸಂಸ್ಥೆಯಾಗಿದ್ದು, ನಾವು ನಮ್ಮ ಪೊಲೀಸರಿಂದ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ದೇವರಾಜೇಗೌಡರನ್ನು ಬಂಧಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಮತ್ತು ಪಕ್ಷದ ನಾಯಕರನ್ನು ರಕ್ಷಿಸಲು ಎಂದಿರುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸುಳ್ಳು ಆರೋಪ ಮಾಡುವುದೇ ಬಿಜೆಪಿಯ ಕೆಲಸ. ಮಹಿಳೆ ಮೇಲಿನ ಲೈಂಗಿಕ ದರ‍್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಅವರನ್ನು (ದೇವರಾಜೇಗೌಡ) ಬಂಧಿಸಲಾಗಿದೆ. ಏಪ್ರಿಲ್ ೧ ರಂದು ದೂರು ದಾಖಲಾಗಿದೆ. ನಾವು ಪೊಲೀಸರ (ಎಸ್‌ಐಟಿ) ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ, ಪೊಲೀಸರಿಗೆ ಸಂಪರ‍್ಣ ಸ್ವಾತಂತ್ರ‍್ಯ ನೀಡಲಾಗಿದೆ, ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸುವುದು ಅವರ ರ‍್ತವ್ಯವಾಗಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕರ‍್ಯರ‍್ತರನ್ನು ಕಾಂಗ್ರೆಸ್ ರ‍್ಕಾರ ಗುರಿಯಾಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಪ್ರಲ್ಹಾದ ಜೋಶಿ ಅವರು ಕೇಂದ್ರ ಸಚಿವರಾಗಿದ್ದು, ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಪುಣರು, ಸುಳ್ಳು ಆರೋಪಗಳನ್ನು ಮಾತ್ರ ಮಾಡುತ್ತಾರೆ. ಎಸ್‌ಐಟಿ ನ್ಯಾಯಯುತ ತನಿಖೆ ನಡೆಸುತ್ತಿದೆ. ತಪ್ಪುದಾರಿಗೆಳೆಯಲು ಮತ್ತು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸಲು ಉದ್ದೇಶಪರ‍್ವಕವಾಗಿ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.