ಬೆಂಗಳೂರು: ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ 50 ನೇ ಜನ್ಮ ದಿನವನ್ನು ಸ್ಮರಣೀಯಗೊಳಿಸುವ ಹಿನ್ನೆಲೆಯಲ್ಲಿ ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ನ ಅಪ್ಪು ಗಂಧದಗುಡಿ ಅಗರಬತ್ತಿ ಸಹಯೋಗದಲ್ಲಿ ಇಂಡಿಯಾ ಪೋಸ್ಟ್ ಪುನಿತ್ ರಾಜ್ ಕುಮಾರ್ ಅವರ ಐದು ವಿಶೇಷ ಪೋಸ್ಟ್ ಪೋಸ್ಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿತು.
ನಗರದ ಜಿಪಿಒ ಸಭಾಂಗಣದಲ್ಲಿ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅವರು ವಿಶೇಷ ಪೋಸ್ಟ್ ಪೋಸ್ಟ್ ಕಾರ್ಡ್ ಗಳನ್ನು ಲೋಕಾರ್ಪಣೆ ಮಾಡಿದರು. ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಂದ್ರಶೇಖರ್ ಕಾಕಮಾನು, ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರಘುನಂದನ್, ಅಪ್ಪು ಗಂಧದ ಗುಡಿ ಅಗರಬತ್ತಿ ಸಂಸ್ಥೆಯ ಸಹ ಸಂಸ್ಥಾಪಕರಾದ ಸ್ವಪ್ನಾ ರಾಜೇಶ್ ಉಪಸ್ಥಿತರಿದ್ದರು. ಪವರಸ್ಟಾರ್, ಅಪ್ಪು, ನಗು ಮುಖ ರಾಜಕುಮಾರ, ಕರ್ನಾಟಕ ರತ್ನ, ಅಭಿಮಾನಿಗಳ ದೇವರು ಎಂಬ ಪೋಸ್ಟ್ ಗಳನ್ನು ಅನಾವರಣಗೊಳಿಸಲಾಯಿತು. ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರು ಸಹ ಅಪ್ಪು ಗಂಧದಗುಡಿ ಅಗರಬತ್ತಿ ಜೊತೆ ಸಹಯೋಗ ಹೊಂದಿದ್ದು, ಎರಡು ಅಗರ ಬತ್ತಿ ಸಣ್ಣ ಪ್ಯಾಕೆಟ್ ಮಾರಾಟವಾದರೆ 1 ರೂಪಾಯಿ ಮೊತ್ತವನ್ನು ಪುನಿತ್ ರಾಜ್ ಕುಮಾರ್ ಪ್ರತಿಷ್ಠಾನಕ್ಕೆ ದೇಣಿಗೆ ನೀಡಲು ತೀರ್ಮಾನಿಸಿದೆ.
ನಂತರ ಮಾತನಾಡಿದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಇಂದು ಪುನಿತ್ ರಾಜ್ ಕುಮಾರ್ ಅವರ ವಿಶೇಷ ಪೋಸ್ಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಸಿದ್ಧ. ಇದಕ್ಕೆ ಖಾಸಗಿ ವಲಯದಿಂದ ಬೇಡಿಕೆ ಬಂದ ನಂತರ ರಾಷ್ಟ್ರಮಟ್ಟದಲ್ಲಿ ತೀರ್ಮಾನವಾಗಬೇಕು. ಪ್ರಸ್ತಾವನೆ ಸಲ್ಲಿಕೆಯಾದ ನಂತರ ಕನಿಷ್ಟ ಒಂದು ವರ್ಷದ ಅವಧಿ ಅಗತ್ಯವಾಗಿದೆ ಎಂದರು.
ಪ್ರತಿಯೊಂದು ಪೋಸ್ಟ್ ಕಾರ್ಡ್ ಗಳು ಡಾ. ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಪರಂಪರೆಯನ್ನು ಒಳಗೊಂಡಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಮಾರ್ಚ್ 17 ರಂದು ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವಿದ್ದು, ಅಂದಿನಿಂದ ವಿಶೇಷ ಪೋಸ್ಟ್ ಕಾರ್ಡ್ ಗಳು ಲಭ್ಯವಾಗಲಿದೆ. ಪೋಸ್ಟ್ ಕಾರ್ಡ್ ಗಳ ಸಂಗ್ರಾಹಕರಿಗೆ ಇದು ನಿಜಕ್ಕೂ ಅಪೇಕ್ಷಿತ ವಸ್ತುವಾಗಿದೆ. ಇವು ಜಿಪಿಒ ಕೌಂಟರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ. ನಾವಾಡುವ ನುಡಿಯೇ ಕನ್ನಡ `ಹಾಡು ಈಗಲೂ ಮೈ ನವಿರೇಳಿಸುತ್ತದೆ. ಅಪ್ಪು ಕೇವಲ ನಟರಷ್ಟೇ ಅಲ್ಲದೇ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.
ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮಾತನಾಡಿ, ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್, ಪ್ರೀಮಿಯಂ ಧೂಪದ್ರವ್ಯ ಕಡ್ಡಿಗಳು ಮತ್ತು ಸಂಬಂಧಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. 1950 ರಲ್ಲಿ ಬಾಲಾಜಿ ಸ್ಟೋರ್ಸ್ ಮತ್ತು ಪಲ್ವರೈಸರ್ಸ್‌ನೊಂದಿಗೆ ಪ್ರಾರಂಭವಾದ ಪರಂಪರೆಯನ್ನು ಆಧರಿಸಿ, ಕಂಪನಿಯು ನಿರಂತರವಾಗಿ ನಾವೀನ್ಯತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿದೆ. ಇತ್ತೀಚಿನ ಬಿಡುಗಡೆಯಾದ “ಅಪ್ಪುಸ್ ಗಂಧದಗುಡಿ ಅಗರಬತ್ತಿ”, ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಪರಂಪರೆಯ ಬದ್ಧತೆಗೆ ಸಾಕ್ಷಿಯಾಗಿದೆ. ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರೊಂದಿಗೆ ಅಪ್ಪು ಗಂಧದಗುಡಿ ಅಗರಬತ್ತಿ ಸಹಯೋಗ ಹೊಂದಿದ್ದು, ಎರಡು ಅಗರ ಬತ್ತಿ ಸಣ್ಣ ಪ್ಯಾಕೆಟ್ ಮಾರಾಟವಾದರೆ 1 ರೂಪಾಯಿ ಮೊತ್ತವನ್ನು ಪುನಿತ್ ರಾಜ್ ಕುಮಾರ್ ಪ್ರತಿಷ್ಠಾನಕ್ಕೆ ಒದಗಿಸಲಾಗುವುದು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಉರ್ವಿ ಫ್ರೇನ್ಸಸ್ ಪ್ರೈವೇಟ್ ಲಿಮಿಟೆಡ್ ; www.urvifragrances.com