ಪೋತ್ನಾಳ್ ಅಕ್ರಮ ಮರಳು ಫುಲ್ ಜೋರು- ಹೇಳೋರಿಲ್ಲ ಕೇಳೋರಿಲ್ಲ

ಮಾನ್ವಿ: ತಾಲೂಕಿನ ಪೋತ್ನಾಳ್ ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಮುದ್ದಂಗುಡಿ, ಖರಾಬದಿನ್ನಿ ಹಾಗೂ ಜೀನೂರು ಮತ್ತು ತಡಕಲ್ ಗ್ರಾಮಗಳಲ್ಲಿ ದಿನನಿತ್ಯವೂ ಅಕ್ರಮವಾಗಿ ಮರಳು ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೋತ್ನಾಳ್ ಪಟ್ಟಣದಲ್ಲಂತು ಹಗಲು ರಾತ್ರಿ ಎನ್ನದೆ ಎಗ್ಗಿಲ್ಲದೇ ದಿನನಿತ್ಯವು ಅಕ್ರಮವಾಗಿ ಮರಳು ಮಾಫೀಯಾ ಜೋರಾಗಿ ನಡೆಯುತ್ತಿದೆ. ಇಷ್ಟೇಲ್ಲಾ ಪೋಲಿಸ್ ಇಲಾಖೆ ಹಾಗೂ ತಾಲೂಕ ಆಡಳಿತಕ್ಕೆ ಮತ್ತು ಭೂವಿಜ್ಞಾನ ಇಲಾಖೆಗೆ ಗೊತ್ತಿದ್ದರೂ ಯಾರೂ ಕೂಡ ಕ್ಯಾರೇ ಅನ್ನುತ್ತಿಲ್ಲ. ಪೋಲಿಸ್ ಇಲಾಖೆಗೆ ಹಾಗೂ ತಾಲ್ಲೂಕ ಆಡಳಿತಕ್ಕೆ ತಿಂಗಳ ಮಾಮೂಲಿ ಹೋಗುತ್ತಿದೆ ಎಂದು ಜನರ ಬಾಯಲ್ಲಿ ಗುಸುಗುಸು ಸದ್ದು ಮಾಡುತ್ತಿದೆ.

ಇಲ್ಲಿನ ಪೋಲಿಸ್ ಇಲಾಖೆಯ ಬೀಟ್ ಪೋಲಿಸರು ಮಾಡುವುದಾದರೂ ಏನು ಅಥವಾ ತಿಂಗಳ ಮಾಮೂಲಿ ಇವರಿಗೇನಾದರೂ ಮುಟ್ಟುತ್ತಿದೇಯಾ ಅಥವಾ ನಾವು ಪೋಲಿಸರಿದ್ದಿವಿ ಯಾವನು ಏನೂ ಮಾಡೋದಿಲ್ಲ ನೀವುಗಳು ಅಕ್ರಮವಾಗಿ ಮರಳು ಹೊಡಿರಿ ನಿಮ್ಮ ಬೆಂಬಲಕ್ಕೆ ನಾವೀರುತ್ತೇವೆ ಎಂದು ಅವರಿಗೇನಾದರೂ ಹುಂಬುತನ ಸೇರಿದೇಯಾ ಎಂದು ಸಾರ್ವಜನಿಕರು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಇಷ್ಟೇಲ್ಲಾ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಗೊತ್ತಿದ್ದರೂ ಅವರಿಗೆ ತಿಂಗಳ ಅಥವಾ ವಾರದ ಮಾಮೂಲಿ ಏನಾದರೂ ಮುಟ್ಟುತ್ತಿದೇಯೇ ಎಂಬ ಮಾತುಗಳು ಜನರ ಬಾಯಲ್ಲಿ ಹರಿದಾಡುತ್ತಿದೆ. ದಿನ ಬೆಳಕರೆದರೇ ಇದೆ ರಸ್ತೆಯ ಮೇಲೆ ಹೋಗುವ ಡಿವೈಎಸ್ಪಿ ಅವರಿಗೆ ಇದರ ಬಗ್ಗೆ ಗಮನ ಹರಿಸಲ್ಲವೇ ಅಥವಾ ಕಂಡರೂ ಕಾಣದಂತೆ ಕಣ್ಣುಮುಚ್ಚಿಕೊಂಡು ಹೋಗುವ ಉದ್ದೇಶವಾದರೂ ಏನು, ಪೋತ್ನಾಳ್ ಹಳ್ಳದ ವಿಶೇಷತೆ ಏನಂದರೆ ಹಳ್ಳದಲ್ಲಿ ಗಾಡಿ ಹೋಗಿ ವಾಪಸ್ಸು ಬರದೇ ಇದ್ದರೇ ಇನ್ನೊಂದು ಗಾಡಿಯನ್ನು ತಂದು ಮುಂದಕ್ಕೆ ಎಳೆದು ಹೋಗುವ ದುಸ್ಸಾಹಸಕ್ಕೆ ಕೈಹಾಕುತ್ತಾರೆ.ಆದ್ದರಿಂದ ಇನ್ನೂ ಮುಂದೆಯಾದರೂ ಅಕ್ರಮ ಮರಳಿಗೆ ಬ್ರೇಕ್ ಬೀಳುತ್ತಾ ಕಾದನೋಡಬೇಕು.ಏಕೆಂದರೆ ಹಳ್ಳದಲ್ಲಿ ಮರಳನ್ನು ಹೊಡೆಯುವುದರಿಂದ ನೀರಿನ ಬಸಿಬರುವಿಕೆ ಕಡಿಮೆಯಾಗುತ್ತದೆ ಆದ್ದರಿಂದ ಅಧಿಕಾರಿಗಳು ಯಾವ ರೀತಿಯಲ್ಲಿ ಕ್ರಮ ಜರುಗಿಸುತ್ತಾರೆ ಕಾದುನೋಡಬೇಕು.

Leave a Comment

Your email address will not be published. Required fields are marked *

Translate »
Scroll to Top