ತೀರ್ಥಭಾವಿ ಕಮಲಾಕ್ಷಿ 800 ಮೀ ಓಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಸ್ಕಿ :ಬಡತನ ಮೆಟ್ಟಿನಿಂತು ರಾಷ್ಟ್ರ ಮಟ್ಟದ ಓಟದ ಸ್ಪರ್ಧೆಯ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕಮಲಾಕ್ಷಿ ಸಾಧನೆ ಇತರರಿಗೆ ಸ್ಫೂರ್ತಿಯಾಗಿದೆ.
 ರಾಷ್ಟ್ರಮಟ್ಟಕ್ಕೆ ಆಯ್ಕೆ ನಿರಂತರ ಪರಿಶ್ರಮ, ಉತ್ತಮ ತರಬೇತಿ, ಅಗತ್ಯ ಸಲಕರಣೆ, ಪೋಷಕರ ಪ್ರೋತ್ಸಾಹದಿಂದ ಕ್ರೀಡೆಯಲ್ಲಿ ಸಾಧನೆ ಸಾಧ್ಯ. ಆದರೆ ಹಳ್ಳಿಯಲ್ಲಿ ಹುಟ್ಟಿ, ಕೂಲಿ ಕೆಲಸ ಮಾಡುವ ಪೋಷಕರ ಪುತ್ರಿ ಷೂ ಖರೀದಿಗೆ ಹಣವಿಲ್ಲದೆ, ಬರಿಗಾಲಲ್ಲೇ ಡಾಂಬರ್ ರಸ್ತೆಯಲ್ಲಿ ಓಟದ ಅಭ್ಯಾಸ ಮಾಡಿ, ಇದೀಗ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆಯಾಗಿದ್ದಾಳೆ.ಬೆಳಗಾವಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಮಸ್ಕಿ ತಾಲೂಕಿನ ತೀರ್ಥಭಾವಿ ಗ್ರಾಮದಗ್ರಾಮೀಣ ಪ್ರತಿಭೆ ಕಮಲಾಕ್ಷಿ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿ, ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ಗೆಆಯ್ಕೆಯಾಗಿದ್ದಾಳೆ .ಈಕೆಯ ಪ್ರತಿಭೆಗೆ ತಕ್ಕ ತರಬೇತಿ ಸಿಕ್ಕರೆ ದೇಶವನ್ನು ಪ್ರತಿನಿಧಿಸುವ ಉತ್ತಮ ಕ್ರೀಡಾಪಟು ಆಗುವುದರಲ್ಲಿ ಎರಡು ಮಾತಿಲ್ಲ.
ಪರಿಶ್ರಮದ ಫಲ – ಪ್ರತಿಯೊಬ್ಬರಲ್ಲಿ ಒಂದು ಪ್ರತಿಭೆ ಇರುತ್ತದೆ, ಇದನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂಬ ಮಾತಿಗೆ ಕಮಲಾಕ್ಷಿ ತಾಜಾ ನಿದರ್ಶನ. ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಕಮಲಾಕ್ಷಿ ಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಉದ್ದೇಶದಿಂದಲೇ 9ನೇ ತರಗತಿಯಿಂದ ಓಟದ ಅಭ್ಯಾಸ ಮಾಡುತ್ತ ತಾಲೂಕು ಹಾಗೂ ಜಿಲ್ಲಾಮಟ್ಟದ ರನ್ನಿಂಗ್ ರೇಸ್‌ನಲ್ಲಿ ಭಾಗವಹಿಸಿ ವಿಜೇತರಾಗಿ ಮುಂದೆ ರಾಜ್ಯ ಮಟ್ಟದಲ್ಲಿ ತಾನು ಚಾಂಪಿಯನ್ ಆಗಬೇಕೆಂಬ ಪ್ರಯತ್ನ ಬಿಡದೆ ಅಕ್ಟೋಬರನಲ್ಲಿನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಜತೆಗೆ, ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ .


 ಅನಕ್ಷರಸ್ಥ ಪೋಷಕರು: ತಂದೆ  ದ್ಯಾಮನಗೌಡ,ತಾಯಿ ನಾಗಮ್ಮ ಇಬ್ಬರೂ ಅನಕ್ಷರಸ್ಥರು.ಬಡತನದ ನಡುವೆಯೇ ಕಮಲಾಕ್ಷಿ ಯನ್ನು ಓದಿಸುತ್ತಿದ್ದಾರೆ.ಬಡತನದ ನಡುವೆಯೇ ಈಕೆಗೆ ಓಟದಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಮಹದಾಸೆ. ಬಿಡುವಿನ ಸಮಯದಲ್ಲಿ ಓದುವುದು ಹಾಗೂ ಓಟದ ಅಭ್ಯಾಸ ಮಾಡುತ್ತಾಳೆ. ಆ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಈ ವಿದ್ಯಾರ್ಥಿನಿಯ  ಪರಿಶ್ರಮದ ಬಗ್ಗೆ ಕೇವಲ ಪೋಷಕರು ಮಾತ್ರವಲ್ಲ, ಮಸ್ಕಿ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಬೆರಗಾಗಿ, ಈಕೆಯ ಸಾಧನೆಯ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಿದ್ದಾರೆ. ಬೆಳಗಾವಿಯಲ್ಲಿನಡೆದ ರಾಜ್ಯ ಮಟ್ಟದ ಕ್ರೀಡಾಕೂಟದ 800 ಮೀಟರ್ ಓಟದಲ್ಲಿ ಪ್ರಥಮ, ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ ಜನವರಿಯಲ್ಲಿ ದೆಹಲಿಯ ಆಗ್ರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲಿದ್ದಾಳೆ.ಈ ಹಿಂದೆ ತಾಲೂಕು ಚಾಂಪಿಯನ್, ಜಿಲ್ಲಾ ಚಾಂಪಿಯನ ಆಗಿದ್ದಾಳೆ . ಕಳೆದ ವರ್ಷ ಜಿಲ್ಲಾ ಮಟ್ಟದಲ್ಲಿ ಮಟ್ಟದಲ್ಲಿ ಭಾಗವಹಿಸಿದ್ದಳು . ಈ ವರ್ಷ ರಾಷ್ಟ್ರಮಟ್ಟದಲ್ಲಿ ಹೇಗಾದರೂ ಮಾಡಿ ಚಾಂಪಿಯನ್ ಆಗಬೇಕೆಂಬ ದೃಢಸಂಕಲ್ಪದಿಂದ ನಿತ್ಯ ಬೆಳಗ್ಗೆ 5 ಗಂಟೆಗೆ ಎದ್ದು ಡಾಂಬರ್ ರಸ್ತೆಯಲ್ಲಿ ಅಭ್ಯಾಸ ಮಾಡಿದ್ದಾಳೆ.

 ಓದಿನಲ್ಲೂ ಸಾಧನೆ : ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಕಮಲಾಕ್ಷಿ ಸಾಧನೆ ಸಾಕ್ಷಿ. ಈಕೆಯು ಕೇವಲ ಓಟದಲ್ಲಿ ಮಾತ್ರ ಸಾಧನೆ ಮಾಡಿಲ್ಲ, ಶೈಕ್ಷಣಿಕ ವಿಷಯದಲ್ಲಿ ಮುಂಚೂಣಿಯಲ್ಲಿದ್ದಾಳೆ. ಪದವಿ ಅಂತಿಮ ಓದುತ್ತಿರುವ ವಿದ್ಯಾರ್ಥಿ , ಪದವಿ ದ್ವಿತೀಯ ವರ್ಷದ ಶೇ. 88 ರಷ್ಟು ಅಂಕ, ಅಂಕಗಳಿಸಿ ಶಿಕ್ಷಣದಲ್ಲೂ ಸಾಧನೆ ಮಾಡಿದ್ದಾಳೆ . ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯೂ ಹೌದು. ಮಸ್ಕಿ ದೇವನಾಮಪ್ರಿಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪಂಪನಗೌಡ ಜಿ  ಮಾತನಾಡಿ, ಈಕೆಗೆಉತ್ತಮ ಕೋಚ್ ಸಿಕ್ಕರೆ ಮುಂದಿನ ದಿನಗಳಲ್ಲಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟು ಆಗಲಿದ್ದಾಳೆ ಎನ್ನುತ್ತಾರೆ. ಬಡತನದ ನಡುವೆಯೂ ಸಾಧನೆ ಮಾಡಬೇಕೆಂದು ಹೊರಟಿರುವ ಕಮಲಾಕ್ಷಿಗೆ ಪೌಷ್ಟಿಕ ಆಹಾರದ ಕೊರತೆ ಹಾಗೂ ಉತ್ತಮ ಕೋಚ್‌ಗೆ ಅಗತ್ಯ ಆರ್ಥಿಕ ನೆರವು ಬೇಕಾಗಿದೆ. ಅಗತ್ಯ ಸೌಲಭ್ಯ ಸಿಕ್ಕರೆ ಕಮಲಾಕ್ಷಿ ದೇಶದ ಒಬ್ಬ ಉತ್ತಮ ಅಥ್ಲೀಟ್ ಆಗುವುದರಲ್ಲಿ ಆಶ್ಚರ್ಯವಿಲ್ಲ. ಈಕೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಹೋಗಿಬರಲು ಸಾರಿಗೆ ಖರ್ಚುವೆಚ್ಚವನ್ನು ಸಹಾಯ ಮಾಡುವವರು ಈ ಕೆಳಗಿನ ವಿಳಾಸಕ್ಕೆ ಸಾಯ ಮಾಡಿ ಬ್ಯಾಂಕ್ ಖಾತೆ ವಿಳಾಸ. KAMALAKSHI.-
Do/DYAMMANA GOUDA.(ಖಾತೆ ನಂ. 62310304675), (ಐಎಫ್‌ಎಸ್‌ಸಿ ನಂ. SBIN0011141) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಸ್ಕಿ, ತಾಲೂಕು ಮಸ್ಕಿ ಜಿಲ್ಲಾ ರಾಯಚೂರ.

Leave a Comment

Your email address will not be published. Required fields are marked *

Translate »
Scroll to Top