ಬಳ್ಳಾರಿ : ನಮ್ಮ ನೆರೆಹೊರೆಯವರನ್ನು ಪ್ರೀತಿಯಿಂದ ಕಾಣುವುದರ ಜೊತೆಗೆ ಆಡಂಬರದ ಜೀವನಕ್ಕಿಂತ ಸಾಮಾನ್ಯನಾಗಿ ಜೀವಿಸಿದರೆ ಜೀವನದ ಬೆಲೆ ತಿಳಿಯುತ್ತದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್‌ನಲ್ಲಿ ಅಚಿತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರಲ್ಲದೆ, ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೀವಿ ಸಂಘದ ಅಧ್ಯಕ್ಷ ಆರ್.ರಾಮನಗೌಡ ಮಾತನಾಡಿ, ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ನಿಮ್ಮ ಮುಂದಿನ ಜೀವನ ಸುಗಮವಾಗಿರಲಿ ಎಂದು ಶುಭ ಹಾರೈಸಿ, ಗುರಿ ಮುಟ್ಟಲು ಸತತ ಪರಿಶ್ರಮ ಮತ್ತು ಪ್ರಾಮಾಣಿಕತೆ ಬಹು ಮುಖ್ಯ ಎಂದು ತಿಳಿಸಿದರು
ಕಾಲೇಜಿನ ಅಧ್ಯಕ್ಷ ಹೆಚ್.ಎಂ.ಕಿರಣ್ ಕುಮಾರ್ ಮಾತನಾಡಿ, ನಾನು ಸಹ ಕನ್ನಡ ಮಾಧ್ಯಮದಲ್ಲಿ ಓದಿ ಈ ಮಟ್ಟಿಗೆ ಬೆಳೆದಿದ್ದೇನೆ. ಕಲಿಕೆಗೆ ಭಾಷೆ ಮುಖ್ಯವಲ್ಲ, ಕಲಿಯುವ ಮನಸ್ಸು ಮುಖ್ಯ ಎಂದು ತಿಳಿಸಿದರು.
ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಉಪ ಪ್ರಾಚಾರ್ಯರಾದ ಬೇಗಂ ಅವರು ಪ್ರಮಾಣ ವಚನವನ್ನು ಭೋದಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಹಳೆಕೋಟೆ ವೀರನಗೌಡ, ಹಲಕುಂದಿ ವಿಜಯಕುಮಾರ್, ಸಂಗನಕಲ್ ಚಂದ್ರಶೇಖರ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. ಪ್ರಾಚಾರ್ಯರಾದ ಡಾ. ಟಿ.ಎಂ. ವೀರಗಂಗಾಧರಸ್ವಾಮಿ ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದರು. ರವೀಂದ್ರ ಹಿರೇಮಠ್ ಕಾರ್ಯಕ್ರಮ ನಿರೂಪಿಸಿದರು.