ಜನಹಿತಕ್ಕೆ ಮಣೆ,ಅಭಿವೃದ್ಧಿಗೆ ಒತ್ತು

ಬೆಂಗಳೂರು,ಮಾ,4 : ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ 2022-23 ನೇ ಸಾಲಿನ ಬಜೆಟ್ ಗೆ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಅವರ ಪ್ರತಿಕ್ರಿಯೆ: ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ 2022-23 ನೇ ಸಾಲಿನ ಚೊಚ್ಚಲ ಬಜೆಟ್,ಜನಸ್ನೇಹಿ,ಪ್ರಗತಿಪರ ಮತ್ತು ಅಭಿವೃದ್ಧಿ ಪರ ಬಜೆಟ್. ಕೊವಿಡ್ ನಂತರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರೂಪಿಸಿರುವ ಬಜೆಟ್ ರಾಜ್ಯದ ಪ್ರಗತಿಯ ಬಗ್ಗೆ ಹೊಸ ವಿಶ್ವಾಸವನ್ನು ಮೂಡಿಸಿದೆ. ಮುಖ್ಯಮಂತ್ರಿಗಳು ರಾಜ್ಯದ ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳನ್ನು ಇರಿಸಿರುವುದನ್ನು ಬಜೆಟ್‌ನಲ್ಲಿ ಕಾಣಬಹುದಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಲಾಗುವುದಲ್ಲದೆ; ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನ ಒದಗಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿಗಳು ಮಾಡಿದ್ದು, ಇದರಿಂದ ಶೀಘ್ರದಲ್ಲೇ ಯೋಜನೆ ಆರಂಭವಾಗುವ ಆಶಾಭಾವನೆ ಮೂಡಿದೆ.

ಪೌರ ಕಾರ್ಮಿಕರಿಗೆ ಮಾಸಿಕ ಎರಡು ಸಾವಿರ ರೂಪಾಯಿಗಳ ಸಂಕಷ್ಟ ಭತ್ಯೆಯನ್ನು ಪ್ರಕಟಿಸಿರುವುದಲ್ಲದೆ,ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ ಹಾಗೂ ಗ್ರಾಮ ಸಹಾಯಕರ ಮಾಸಿಕ ಗೌರವ ಧನವನ್ನು ಹೆಚ್ಚಿಸುವ ಮೂಲಕ ಮುಖ್ಯಮಂತ್ರಿಗಳ ಅಂತಃಕರಣ ಬಡಜನರ ಕಲ್ಯಾಣಕ್ಕಾಗಿ ಮೀಡಿದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಆರು ಲಕ್ಷ ‘ಬಿ’ ಖಾತೆ ಸ್ವತ್ತುಗಳನ್ನು ‘ಎ’ ಖಾತೆಗಳನ್ನಾಗಿ ಮಾರ್ಪಡಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿಗಳು ತಮ್ಮ ಬಜೆಟ್ ಪ್ರಸ್ತಾಪದಲ್ಲಿ ಮಂಡಿಸಿದ್ದು, ಇದರಿಂದ ಬೆಂಗಳೂರಿನ ಜನರ ಬಹು ದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಪೀಣ್ಯ ಕೈಗಾರಿಕಾ ಘಟಕಗಳ ಬೆಳವಣಿಗೆಗೆ ಇನ್ನೊಂದು ಸಣ್ಣ ಮತ್ತು ಪೂರಕವಾಗಿ ಅತಿ ಸಣ್ಣ ಕೈಗಾರಿಕಾ ಪಾರ್ಕ್ ಅಭಿವೃದ್ಧಿ ಪಡಿಸುವ ಮತ್ತು ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ಸಂಸ್ಥೆಗಳು ಸ್ಥಾಪಿಸುವ ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ಸಣ್ಣ ನಿವೇಶನಗಳಲ್ಲಿ ಆದ್ಯತೆ ನೀಡುವ ಪ್ರಸ್ತಾಪದಿಂದ ಕೈಗಾರಿಕೆಗಳಿ ಪ್ರಗತಿಗೆ ಮತ್ತು ಉದ್ಯೋಗ ಸೃಷ್ಟಿಗೂ ನೆರವಾಗಲಿದೆ

Leave a Comment

Your email address will not be published. Required fields are marked *

Translate »
Scroll to Top