ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ, ಟೆಂಡರ್ ಅವ್ಯವಹಾರ ಮತ್ತು ಕಾಮಗಾರಿಗಳ ನಿಧಾನಗತಿಯಿಂದ ಕ್ಷೇತ್ರದ ನಾಗರಿಕರಿಗೆ ಆಗುತ್ತಿರುವ ಆನಾನುಕೂಲ ಖಂಡಿಸಿ ಮಲ್ಲೇಶ್ವರಂ ನಿವಾಸಿಗಳು ಸದಾಶಿವನಗರ ಶಿವಾಜಿ ಪ್ರತಿಮೆ ಎದುರು,ಸ್ಯಾಂಕಿ ಕೆರೆ ಬಳಿ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಅನೂಪ್ ಅಯ್ಯಂಗಾರ್ ರವರು ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿವಾಸಿ ಅನೂಪ್ ಅಯ್ಯಂಗಾರ್ ರವರು ಮಾತನಾಡಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15ವರ್ಷಗಳಿಂದ ಮೂಲಭೂತ ಸೌಲಭ್ಯಗಳಾದ ರಸ್ತೆ,ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳು ಸಮರ್ಪಕವಾಗಿಲ್ಲದೇ ಸಾರ್ವಜನಿಕರು ಪ್ರಾಣಪಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಸ್ಯಾಂಕಿ ಟ್ಯಾಂಕ್ ಕೆರೆ ಅಭಿವೃದ್ದಿ ಎಂದು ಕಳೆದ 12 ವರ್ಷಗಳಿಂದ ದುರಸ್ತಿ ,ಅಭಿವೃದ್ದಿ ಮಾಡುತ್ತಿದ್ದು ಇದುವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ . ಸ್ಯಾಂಕಿ ಕೆರೆ ಪುಟ್ ಪಾತ್ ಕಳೆದ ನಾಲ್ಕು ತಿಂಗಳಲ್ಲಿ ಎರಡು ಬಾರಿ ಕಾಮಗಾರಿ ನಡೆಸಲಾಗಿದೆ. ಹಳೆ ಕಲ್ಲು,ಹೊಸ ಬಿಲ್ಲು ಎಂಬತಾಗಿದೆ. ಮಲ್ಲೇಶ್ವರಂ ಮುಖ್ಯರಸ್ತೆ ,ಪ್ಯಾಲೇಸ್ ಗುಟ್ಟಹಳ್ಳಿ ರಾಜಕಾಲುವೆ ಕಾಮಗಾರಿ ಮತ್ತು ಗುಂಡಿಗಳ ನಗರವಾಗಿದೆ ಮಲ್ಲೇಶ್ವರಂ ಕ್ಷೇತ್ರ. ಮಲ್ಲೇಶ್ವರಂ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಗಳು ಕಳಪೆ ಕಾಮಗಾರಿ ಮತ್ತು ನಿಧಾನಗತಿ ಮತ್ತು ಎಲ್ಲ ಗುತ್ತಿಗೆಯನ್ನ ಒಬ್ಬನೆ ಗುತ್ತಿಗೆ ಪಡೆದಿದ್ದಾರೆ.

ರಾಜ್ಯ ಸರ್ಕಾರ ಪಾರದರ್ಶಕ ಆಡಳಿತ ಏನ್ನುತ್ತಾರೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮಾಹಿತಿ ಕೇಳಿದರೆ ಅಧಿಕಾರಿಗಳು ಕೊಡುವುದಿಲ್ಲ. ಸಾರ್ವಜನಿಕರ ತೆರಿಗೆ ಹಣ,ಪೋಲು ಮಾಡುತ್ತಿದ್ದಾರೆ.ದೂರು ನೀಡಿದರು ಯಾವುದೇ ಪ್ರಯೋಜನವಿಲ್ಲ,ಇವೆಲ್ಲ ಕಾಮಗಾರಿಗಳಿಗೆ ಪರೋಕ್ಷ ಬೆಂಬಲವಿದೆ ಎಂಬ ಆನಿಸಿಕೆ ನಮ್ಮದು. ಮಲ್ಲೇಶ್ವರಂ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು,ಮೂರು ತಿಂಗಳ ಒಳಗೆ ಕಾಮಗಾರಿ ಪೂರ್ಣವಾಗಬೇಕು ಮತ್ತು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಬಿ.ಬಿ.ಎಂ.ಪಿ.ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು