ಸಾಲ ಮರುಪಾವತಿಸಿ ಸಂಘದ ಏಳ್ಗೆಗೆ ಸಹಕರಿಸಿ

ದೇವನಹಳ್ಳಿ,ಡಿಸೆಂಬರ್ 23 : ಸಹಕಾರ ಸಂಘಗಳಲ್ಲಿ ಸಾಲ ಪಡೆಯವವರು ಎಷ್ಟು ಆಸಕ್ತಿ ವಹಿಸುತ್ತಾರೋ ಅದೇ ಆಸಕ್ತಿಯಿಂದ ಮರುಪಾವತಿಸಿ ಸಂಘದ ಏಳ್ಗೆಗೆ ಸಹಕರಿಸಬೇಕು ಹಾಗೂ ಇತರರಿಗೂ ಬ್ಯಾಂಕ್ ಮೂಲಕ ಸಾಲ ದೊರೆಯಬೇಕಾದರೆ ಸಾಲ ಪಡೆದವರು ಕಾಲಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಸಾಧ್ಯ ಎಂದು ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಟಾಲಪ್ಪ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ 2020-21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಈ ಹಿಂದೆ ಸಭೆಗಳಲ್ಲಿ ಯಾರೂ ಪ್ರಶ್ನೆ ಮಾಡುವವರೇ ಇರಲಿಲ್ಲಾ ಈಗ ಎಲ್ಲರೂ ಪ್ರಶ್ನೆ ಮಾಡುವ ಬುದ್ಧಿವಂತರಾಗಿದ್ದಾರೆ ಕಾರಣ ಸಹಕಾರ ಸಂಘಗಳಲ್ಲಿ ಕೋಟ್ಯಾಂತರ ವ್ಯವಹಾರ ನಡೆಯುತ್ತಿದೆ. ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘ 10 ವರ್ಷದ ಹಿಂದೆ ನಷ್ಟದಲ್ಲಿ ನಡೆಯುತ್ತಿತ್ತು ಆಗ ನಮ್ಮೆಲ್ಲಾ ನಿರ್ದೇಶಕರೆಲ್ಲರೂ ಒಗ್ಗೂಡಿ 25 ಸಾವಿರ ಒಬ್ಬೊಬ್ಬರು ಹಾಕಿ ಜೊತೆಗೆ ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪರವರು ಒಂದು ಲಕ್ಷ ಸಂಘದ ಏಳ್ಗೆಗೆ ನೀಡಿದ್ದಾರೆ ಎಲ್ಲರ ಪರಿಶ್ರಮದಿಂದ ಈಗ 5 ಲಕ್ಷ ಲಾಭದಲ್ಲಿ ನಡೆಯುತ್ತಿದೆ ಇದಕ್ಕೆಲ್ಲಾ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ರಾಜ್ಯದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಸಹಕಾರ ಸಂಘಗಳು ಕೋಟ್ಯಾಂತರ ಹಣ ಲಾಭಗಳಿಸಿವೆ ಮಂಗಳೂರು ಜಿಲ್ಲಾ ಬ್ಯಾಂಕ್ ಸಹಕಾರದಲ್ಲಿ ಸರ್ಕಾರದ ಸಹಕಾರವಿಲ್ಲದೇ ಎರಡು ಸಾವಿರ ಕೋಟಿ ವೆಚ್ಚದಲ್ಲಿ ಫರ್ಟಿಲೈಜರ್ ಕಂಪನಿ ಪ್ರಾರಂಭಿಸುತ್ತಿವೆ ಇದಕ್ಕೆ ಸಹಕಾರ ಸಂಘದ ನಿರ್ದೇಶಕ ಮಂಡಳಿಯ ಶ್ರಮ ಬಹಳಷ್ಟಿದೆ ಮುಂದಿನ ಯೋಜನೆಗಳ ಬಗ್ಗೆ, ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಸಂಘದ ಏಳ್ಗೆಗೆ ಪಕ್ಷಾತೀತವಾಗಿ ಶ್ರಮಿಸಬೇಕೆಂದು ಬಿ.ಡಿ.ಸಿ.ಸಿ ಬ್ಯಾಂಕ್ ವೃತ್ತಿಪರ ನಿರ್ದೇಶಕ ಕಾಮೇನಹಳ್ಳಿ ರಮೇಶ್ ತಿಳಿಸಿದರು.

ಕುಂದಾಣ ವಿ.ಎಸ್.ಎಸ್.ಎನ್ ನಿಂದ ಚಿನ್ನದ ಸಾಲ1.5 ಕೋಟಿ, ಕೃಷಿ ಸಾಲ 3 ಕೋಟಿ ನೀಡಿದ್ದು ಸಂಘದ ಕಟ್ಟಡ ನಿರ್ಮಾಣಕ್ಕೆ ದಾನಿಗಳು ಜಾಗ ನೀಡಿದರೆ ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸಂಘದ ಕಟ್ಟಡ ನಿರ್ಮಿಸುವುದಾಗಿ ಸಂಘದ ಅಧ್ಯಕ್ಷ ರಾಮಣ್ಣ ತಿಳಿಸಿದರು. ಸಭೆಯಲ್ಲಿ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಭಾಗ್ಯ, ನಿರ್ದೇಶಕರಾದ ಚನ್ನಕೃಷ್ಣಪ್ಪ, ಮಂಜುನಾಥ್, ಸುಶೀಲಮ್ಮ, ಬಸವರಾಜು, ಮಧು, ಪ್ರಭಾಕರ್, ಮಲ್ಲಪ್ಪ, ವಿಜಯ್, ಚನ್ನಮುನಿಶಾಮಪ್ಪ, ಗೋವಿಂದರಾಜು, ಪ್ರಕಾಶ್, ರಮೇಶ್, ಜೆಡಿಎಸ್ ಮುಖಂಡ ದುದ್ದನಹಳ್ಳಿ ಮುನಿರಾಜು ಮಾಹಿತಿ ತಂತ್ರಜ್ಞಾನ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಇನ್ನು ಹಲವರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top