ನೂರು ಮಿಲಿಗ್ರಾಮ್‌ ಗಿಂತ ಹೆಚ್ಚಿನ ನೋವು ನಿವಾರಕ – ನಿಮೆಸುಲೈಡ್ ನಿಷೇಧ

Kannada Nadu
ನೂರು ಮಿಲಿಗ್ರಾಮ್‌ ಗಿಂತ ಹೆಚ್ಚಿನ ನೋವು ನಿವಾರಕ – ನಿಮೆಸುಲೈಡ್ ನಿಷೇಧ

ಬೆಂಗಳೂರು: ನೂರು ಮಿಲಿಗ್ರಾಮ್‌ ಗಿಂತ ಹೆಚ್ಚಿನ ನೋವು ನಿವಾರಕ – ನಿಮೆಸುಲೈಡ್ (Nimesulide) ಹೊಂದಿರುವ ಬಾಯಿಯ ಮೂಲಕ ತೆಗೆದುಕೊಳ್ಳುವ ಎಲ್ಲ ಔಷಧಿಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಯನ್ನು ಕೇಂದ್ರ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಔಷಧ ತಾಂತ್ರಿಕ ಸಲಹಾ ಮಂಡಳಿಯೊಂದಿಗೆ ಸಮಾಲೋಚಿಸಿ ಔಷಧಗಳು ಮತ್ತು ಸೌಂದರ್ಯ ವರ್ಧಕ ಕಾಯಿದೆ – 1940 ಸೆಕ್ಷನ್ 26ಎ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ನಿಮೆಸುಲೈಡ್‌‌ ಹೊಂದಿರುವ ಮೌಖಿಕವಾಗಿ ಸೇವಿಸುವ ಔಷಧಿಗಳು ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ.- ನಿಮೆಸುಲೈಡ್ ಔಷಧಕ್ಕೆ ಸುರಕ್ಷಿತ ಪರ್ಯಾಯಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮೆಸುಲೈಡ್ ಸ್ಟಿರಾಯ್ಡ್ ಅಲ್ಲದ ನೋವು ನಿವಾರಕ ಔಷಧವಾಗಿದ್ದು ಇದನ್ನು ತೀವ್ರವಾದ ನೋವಿನ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";