ದೇವನಹಳ್ಳಿ: ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಭಾರತದ ದೇವಾಲಯಗಳ ವ್ಯವಸ್ಥೆಯ ಬಗ್ಗೆ ಅವಲೋಕಿಸಿದ ರಾಮಾನುಜಾಚಾರ್ಯರು ಮೊಘಲರಿಂದ ಧ್ವಂಸ ಆಗಿದ್ದ ದೇವಾಲಯಗಳನ್ನು ಮರುನಿರ್ಮಾಣ ಗೊಳಿಸುವ ಕಾರ್ಯವನ್ನು ಆರಂಭಿಸಿದರು. ಆದರೆ ಈ ಕಾರ್ಯ ನಮ್ಮಿಂದ ಆಗಲಿಲ್ಲ ಎಂದು ಶ್ರೀ ಸ್ವಾಮಿ ವಿವೇಕಾನಂದ ಯುವ ಬಳಗದ ಸದಸ್ಯ ಎಸ್.ಲಕ್ಷ್ಮಣ್ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ರೋಟರಿ ವಿಜಯಪುರದ ವಾರದ ಸಭೆಯಲ್ಲಿ ಭಗವದ್ ಶ್ರೀರಾಮಾನುಜಾ ವೈಭವ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಸರ್ಕಾರ ರಸ್ತೆ ಬದಿಗಳಲ್ಲಿನ ದೇವಾಲಯಗಳನ್ನು ಕೆಡವಿ ಎಂದು ಹೇಳಿದ್ದು, ರಸ್ತೆಯಿಂದ ದೂರವಿರುವ ದೇವಾಲಯಗಳನ್ನು ಕೆಡವಿ ನೆಲಸಮ ಮಾಡುತ್ತಿದ್ದರೂ ನಮ್ಮಿಂದ ದೇವಾಲಯಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಮಾನುಜಾಚಾರ್ಯರು ಅನೇಕ ದೇವಾಲಯಗಳ ಅವ್ಯವಸ್ಥೆಯನ್ನು ಗಮನಿಸಿ ಸುವ್ಯವಸ್ಥೆಯತ್ತ ತಂದಿದ್ದು ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ, ಸಮಾಜ ಸುಧಾರಣೆ ಮಾಡಿ, ಧಾರ್ಮಿಕ ಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದವರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ವಿಜಯಪುರ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಸಿ.ಸಿದ್ದರಾಜು, ಮಾಜಿ ಕಾರ್ಯದರ್ಶಿ ರುದ್ರಮೂರ್ತಿ, ಸದಸ್ಯರುಗಳು ಇದ್ದರು.