ದೇವನಹಳ್ಳಿ, ಡಿಸೆಂಬರ್,23 : ಈ ವರ್ಷ ವಿಜಯಪುರ ರೋಟರಿ ವತಿಯಿಂದ ಬಹಳಷ್ಟು ಸೇವಾ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇತರರಿಗೆ ಮಾಡುವ ಸಹಾಯ ಅವರ ಜೀವನದಲ್ಲಿ ಉತ್ತಮ ಬದಲಾವಣೆ ತಂದಂತೆ ನಮ್ಮ ಜೀವನದಲ್ಲೂ ಬದಲಾವಣೆ ತಂದು, ಇತರರ ಬದುಕನ್ನು ಬೆಳಗಿಸುವ ನಿಟ್ಟಿನಲ್ಲಿ ನಮ್ಮ ಜೀವನವೂ ಉಜ್ವಲಿಸುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಫಾಜಲ್ ಮಹಮ್ಮದ್ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ರೋಟರಿ ವಿಜಯಪುರದ ವಾರದ ಸಭೆಗೆ ಜಿಲ್ಲಾ ಪಾಲಕರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರೋಟರಿಯ ಅನೆಕಾ ಸೇವಾ ಯೋಜನೆಗಳಲ್ಲಿ ಪೊಲೀಯೋ ಲಸಿಕೆಯೂ ಒಂದು ಇದರ ಜೊತೆ ಬೆಂಗಳೂರು ರೋಟರಿ ಸಂಘ ಹಮ್ಮಿಕೊಂಡಿರುವ ಅದ್ಭುತವಾದ ಯೋಜನೆ ಎಂದರೆ ‘ ಹೊಸ ಬೆಳಕು’. ಸುಮಾರು 50 ರೋಟರಿ ಕ್ಲಬ್ ಗಳು ಸೇರಿ ಒಂದು ಸ್ಲಮ್ ಏರಿಯಾ ವನ್ನು ದತ್ತು ಪಡೆದು 7 ಯೋಜನೆಗಳನ್ನು ಹಮ್ಮಿಕೊಂಡು ಸ್ಲಮ್ ಮಕ್ಕಳ ಅಭಿವೃದ್ಧಿ, ಶಿಕ್ಷಣ, ಅಲ್ಲಿನ ಜನಗಳ ಆರೋಗ್ಯ ಹೀಗೆ ಅವರ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಬೇಕಾದ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಹರಿಣಿ ರವೀಂದ್ರನಾಥ್, ವಲಯ ಗವರ್ನರ್ ಸುಧಾಕರ್, ಸಹಾಯಕ ಗವರ್ನರ್ ಡಿ.ಎಸ್.ರಾಜಕುಮಾರ್, ರೋಟರಿ ವಿಜಯಪುರ ಅಧ್ಯಕ್ಷೆ ಅನಸೂಯಮ್ಮ ಸಂಪತ್, ಕಾರ್ಯದರ್ಶಿ ವನರಾಜಲಕ್ಷ್ಮೀ, ರೋಟರಿ ವಿಜಯಪುರ ಸಂಸ್ಥೆಯ ಸದಸ್ಯರುಗಳು ಹಾಗೂ ಇನ್ನರ್ ವೀಲ್ ಸಂಸ್ಥೆಯ ಸದಸ್ಯರು ಇದ್ದರು.