ಸರಕಾರದಿಂದ ದೊರೆಯುವ ಸವಲತ್ತುಗಳನ್ನು ನೇರ ರೈತರಿಗೆ ತಲುಪಿಸಲು ಆಧ್ಯತೆ

ದೇವನಹಳ್ಳಿ : ತಾಲೂಕಿನ ಕಸಬಾ ಹೋಬಳಿಯ ಬೊಮ್ಮವಾರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಟಿ. ಹೊಸಹಳ್ಳಿ ಟಿ.ರವಿ  ಅವಿರೋಧ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಹೊಸಹಳ್ಳಿ ಟಿ.ರವಿ ಮಾತನಾಡಿ, ಸರಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಪಾರದರ್ಶಕವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡಲಾಗುವುದು, ರೈತರಲ್ಲಿ ಸಂಘ ನಮ್ಮದೆಂಬ ಭಾವನೆ ಅವರಲ್ಲಿ ಮೂಡಿಸುವ ಕೆಲಸ ಮಾಡುತ್ತೇನೆ, ಸ್ತ್ರೀ ಶಕ್ತಿ ಗುಂಪುಗಳಿಗೆ ಹೆಚ್ಚಿನ ಸಾಲ ನೀಡಲಾಗುತ್ತದೆ. ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಿದರೆ ಸಂಘ ಮತ್ತಷ್ಟು ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ. ಆಭರಣ ಸಾಲ, ಇತರೆ ಸಾಲಗಳನ್ನು ರೈತರಿಗೆ ನೀಡಲಾಗುವುದು. ಎಲ್ಲರ ಸಹಕಾರ ಹಾಗೂ ಮಾರ್ಗದರ್ಶನ ಪಡೆದು ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಮತ್ತು ಸಂಘದ ಮೊದಲನೆ ಮಹಡಿಯ ಕಾಮಗಾರಿ ಪ್ರಾರಂಭಿಸಲು ಆಧ್ಯತೆ  ನೀಡಲಾಗುವುದು, ರೈತರ ಖಾಸಗಿ ಬ್ಯಾಂಕುಗಳಲ್ಲಿ ಹೂಡುವ ಠೇವಣೆಯನ್ನು ಸಹಕಾರ ಸಂಘದಲ್ಲೇ ಠೇವಣಿ  ಮಾಡುವಂತೆ ಮಾಡಲಾಗುವುದು. ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು. ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇದೆ ವೇಳೆ ಬೊಮ್ಮವಾರ ವ್ಯವಸಾಯ ಸೇವಾಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ರಾಮಮೂರ್ತಿ, ಎಸ್.ನಾಗೇಶ್, ನಿರ್ದೇಶಕರಾದ ನವೀನ್ಕುಮಾರ್, ರಾಮಾಂಜಿನಪ್ಪ, ಮುನಿಕೃಷ್ಣ, ಅಂಬಿಕ, ಪುಷ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ರಮೇಶ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಕಾರ್ಯಾಧ್ಯಕ್ಷ ಲಕ್ಷ?ಮಣ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಪಂ ಸದಸ್ಯ ಮಹೇಶ್, ಯುವ ಜೆಡಿಎಸ್  ಅಧ್ಯಕ್ಷ ಭರತ್, ಜಯಕರ್ನಾಟಕ ಬೆಂ.ಗ್ರಾಮಾ ಕಾರ್ಯಾಧ್ಯಕ್ಷ ಹೇಮಂತ್ಕುಮಾರ್, ತಾಲೂಕು ಅಧ್ಯಕ್ಷ ಚೇತನ್, ಗ್ರಾಪಂ ಸದಸ್ಯ ಪ್ರಕಾಶ್, ಅಭಿಷೇಕ್, ರವಿ ಶ್ರೀನಾಥ್, ಸತೀಶ್ ಮುಂತಾದವರು ಇದ್ದರು

Leave a Comment

Your email address will not be published. Required fields are marked *

Translate »
Scroll to Top