ಭತ್ತ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಪ್ರತಿಭಟನೆ

ಕುರುಗೋಡು : ಕೂಡಲೇ ರಾಜ್ಯ ಸರ್ಕಾರವು ಭತ್ತ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಕುರುಗೋಡು ಕರ್ನಾಟಕ ರೈತ ಸಂಘ(ರಿ) ನೂರಾರು ರೈತರು ಕುರುಗೋಡಿನ ಎಪಿಎಂಸಿ ಮುಂದುಗಡೆಯಿಂದ ಮುಖ್ಯವೃತ್ತದವರೆಗೆ ಬಂಡಿ, ಟ್ರ್ಯಾಕ್ಟರ್ ರ್ಯಾಲಿ ಮಾಡುವ ಮೂಲಕ ಆಗಮಿಸಿ ಮುಖ್ಯವೃತ್ತದಲ್ಲಿ ರಸ್ತೆಗೆ ಭತ್ತ ಸುರಿಯುವುದರ ಮುಖಾಂತರ ಪ್ರತಿಭಟನೆ ಮಾಡಿತು. ಪ್ರತಿಭಟನೆಯನ್ನು ಉದ್ದೇಶಿಸಿ ಕುರುಗೋಡು ತಾಲೂಕು ಸಮಿತಿ ಅಧ್ಯಕ್ಷ ಕೆ.ಕಲ್ಗುಡೆಪ್ಪ ಮಾತನಾಡಿ ಕುರುಗೋಡಿನಲ್ಲಿ ಆದಷ್ಟು ಬೇಗನೇ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು.


ರಾಜ್ಯ ಸಮಿತಿ ಅಧ್ಯಕ್ಷರಾದ ಶರಣಪ್ಪ ಹಾಗೂ ಉಪಾಧ್ಯಕ್ಷರಾದ ಅಮರೇಶರವರು ಮಾತನಾಡಿ ರಾಜ್ಯ ಸರ್ಕಾರವು ಬೆಲೆ ನಿಗದಿ ಮಾಡುವಂತೆ ನಾವುಗಳು ಕೂಡಾ ಬೆಲೆ ನಿಗದಿ ಕಾರ್ಯ ಮಾಡುತ್ತೇವೆ. ಬ್ಯಾಂಕ್ ಕೊಟ್ಟ ಸಾಲಕ್ಕೆ ಬೆಳೆದ ಬೆಳೆಯನ್ನು ಬ್ಯಾಂಕ್ ಮುಂದೆ ಹಾಕುವ ಕೆಲಸ ಮಾಡುತ್ತೇವೆ. ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಜಿ.ಗಂಗಾಧರ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಕೃಷಿ ವಿಜ್ಞಾನಿಗಳು ಇದ್ದು, ಈ ತಿಂಗಳಲ್ಲಿ ಬಿತ್ತನೆ ಮಾಡಬೇಕು, ಈ ಔಷಧಿಯನ್ನು ಸಿಂಪಡಿಸಬೇಕೆಂದು ಯಾವುದೇ ರೀತಿಯಿಂದ ರೈತರಿಗೆ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇಂತಹ ಬೆಳೆಯನ್ನು ಯಾವೊಬ್ಬ ರೈತರು ಕೂಡಾ ಕೃಷಿ ವಿಜ್ಞಾನಿಗಳನ್ನು ನೋಡಿಲ್ಲ. ವಿಜ್ಞಾನಿಗಳು ಸಂಬಳವನ್ನು ತೆಗೆದುಕೊಂಡು ರೈತರಿಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಎ.ಸಿ.ರೂಂನಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದ ಅಧಿಕಾರಿಗಳು ಕೃಷಿಗೆ ಒತ್ತು ನೀಡಬೇಕು, ರೈತರಿಗೆ ಗೌರವ ನೀಡಬೇಕು. ರೈತರು ಬೆಳೆದ ಬೆಳೆಯನ್ನೆ ತಿನ್ನಬೇಕೇ ಹೊರತು ಬಂಗಾರವಾಗಲಿ, ನೋಟುಗಳನ್ನಾಗಿ ತಿನ್ನಲು ಆಗದು.
ಕರ್ನಾಟಕ ರೈತ ಸಂಘಕ್ಕೆ ನವಕರ್ನಾಟಕ ಯುವಶಕ್ತಿಯ ವತಿಯಿಂದ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ನವಕರ್ನಾಟಕ ಯುವಶಕ್ತಿಯ ವಿರುಪಾಕ್ಷಿ, ನಾರಾಯಣಿ ಯಡಿಗಿರಿ ಭಾಗವಹಿಸಿದ್ದರು. ಕುರುಗೋಡಿನ ಮುಖಂಡ ಚಾನಾಳ್ ಅಮರೇಶ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಸಂಘಕ್ಕೆ ಸಹಕರಿಸಿದರು.


ಪ್ರತಿಭಟನಾ ಸ್ಥಳಕ್ಕೆ ಕುರುಗೋಡಿನ ತಹಶೀಲ್ದಾರರಾದ ರಾಘವೇಂದ್ರರಾವ್ ರವರು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಹಾಗೂ ಪ್ರತಿಭಟನೆಗೆ ಸಬ್-ಇನ್ಸ್ ಪೆಕ್ಟರ್ ಮಣಿಕಂಠ ರವರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಸಹಕಾರ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ರಾಮಚಂದ್ರ, ಹನುಮಂತಪ್ಪ ನಾಯಕ, ತಾಲೂಕು ಸಮಿತಿಯ ಉಪಗೌರವಾಧ್ಯಕ್ಷರಾದ ಪಿ.ಮರಿಬಸಪ್ಪ, ಉಪಾಧ್ಯಕ್ಷ ಎಸ್.ಗುರು, ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ್ ಗೌಡ, ಸಹಕಾರ್ಯದರ್ಶಿ ಎ.ಕರಿಬಸಪ್ಪ, ಖಜಾಂಚಿ ಎಂ.ಗಾದಿಲಿಂಗಪ್ಪ, ಕುರುಗೋಡು ತಾಲೂಕು ಯುವಘಟಕದ ಅಧ್ಯಕ್ಷ ಹೆಚ್.ಬಸವರಾಜ, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಎಸ್.ದೇವೇಂದ್ರಪ್ಪ, ವದ್ದಟ್ಟಿ ಗ್ರಾಮ ಘಟಕದ ಅಧ್ಯಕ್ಷದ ಎಂ.ರಾಜಶೇಖರ, ಉಪಾಧ್ಯಕ್ಷರಾದ ಜಿ.ನಾಗರಾಜ, ಬಾದನಹಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಕುಮಾರಗೌಡ, ಉಪಾಧ್ಯಕ್ಷರಾದ ಚಿದಾನಂದ, ಕಾರ್ಯದರ್ಶಿ ಜೀರು ಮಲ್ಲಪ್ಪ, ಸಹಕಾರ್ಯದರ್ಶಿ ನಾಯಕರ ರುದ್ರಪ್ಪ, ಸದಸ್ಯರಾದ ಎಸ್.ಬಸವ, ಎ.ಚಿದಾನಂದ, ಗೂಳ್ಯದ ಶಿವರಾಜ, ವಿಘ್ನೇಶ್ವರ, ಸೋಮೇಶ, ಹೂಗಾರ್ ತಿಮ್ಮಪ್ಪ ಇನ್ನಿತರ ನೂರಾರು ರೈತರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top